‘ದೇವಿ’ ಈ ವಾರ ತೆರೆಗೆ ಬರುತ್ತಿರುವ ಸಿನಿಮಾ
'Devi' is the movie releasing this week
ಲೋಕದರ್ಶನ ವರದಿ
ಬೆಂಗಳೂರು: ಸೂರ್ಯ ವಿಷನ್ ಬೆಂಗಳೂರು ನಿರ್ಮಿಸಿರುವ ಸಾಮಾಜಿಕ ಕಾಳಜಿಯ ಕನ್ನಡ ಚಲನಚಿತ್ರ ‘ದೇವಿ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಲನಚಿತ್ರದ ಮಾಯಾಲೋಕದ ಆಕರ್ಷಣೆಗೆ ಒಳಗಾಗದವರು ವಿರಳ. ಕೆಲ ಪೋಷಕರು ತಮ್ಮ ಮಕ್ಕಳು ದೊಡ್ಡ ನಟ-ನಟಿಯರಾಗಿ ಹೆಸರು, ಹಣ ಮತ್ತು ಖ್ಯಾತಿ ಗಳಿಸಬೇಕು ಎಂಬ ಕನಸು ಕಾಣುತ್ತಾರೆ.
ಇದೇ ರೀತಿಯಾಗಿ ಬಡತನದಲ್ಲಿ ಬದುಕುತ್ತಿರುವ ರೇಣುಕಾಳಿಗೂ ತನ್ನ ಮಗಳು ಗೌರಿ ಚಿತ್ರರಂಗದ ಪ್ರಮುಖ ನಾಯಕಿಯಾಗಿ ಬೆಳೆಯಬೇಕು ಎಂಬ ಮಹದಾಸೆ ಇರುತ್ತದೆ. ಆಕೆಯ ದೃಷ್ಟಿಯಲ್ಲಿ ಸಿನಿಮಾ ಬಡತನದಿಂದ ಮುಕ್ತಿ ಪಡೆಯುವ ದಾರಿಯಾಗಿದೆ.
ಆದರೆ ಗೌರಿಯ ಕನಸು ಮಾತ್ರ ಭಿನ್ನವಾಗಿದೆ. ಸಮಾಜಸೇವೆಯ ಮೂಲಕ ವೈದ್ಯೆಯಾಗಬೇಕು ಎಂಬ ಗಂಭೀರ ಗುರಿಯನ್ನು ಆಕೆ ಹೊಂದಿದ್ದಾಳೆ. ಮಗಳನ್ನು ನಟಿಯನ್ನಾಗಿಸಬೇಕೆಂಬ ತಾಯಿಯ ಅತಿಯಾದ ಆಸೆ, ಆಕೆಯನ್ನು ಸ್ಲಿಮ್ ಆಗಿಸಲು ಮಾಡುವ ಪ್ರಯತ್ನಗಳು ಹಾಗೂ ಅದರ ಪರಿಣಾಮವಾಗಿ ಉಂಟಾಗುವ ಮಾನಸಿಕ ಒತ್ತಡ, ಹಾರ್ಮೋನ್ ಬದಲಾವಣೆಗಳಿಂದ ಉಂಟಾಗುವ ಕೋಪ-ದ್ವೇಷಗಳಂತಹ ಸಮಸ್ಯೆಗಳು ಕಥೆಯ ಮುಖ್ಯ ಅಂಶಗಳಾಗಿವೆ.
ಪೋಷಕರ ಮಹತ್ವಾಕಾಂಕ್ಷೆ, ಅಂಧಾಭಿಮಾನ, ಬಡತನ ಮತ್ತು ಬಾಲ್ಯದ ಹಕ್ಕುಗಳ ನಡುವಿನ ಸಂಘರ್ಷವನ್ನು ಚಿತ್ರವು ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. “ಮಕ್ಕಳ ಕನಸುಗಳನ್ನು ಹಾಳು ಮಾಡಬಾರದು; ಅವರ ಜೀವನವನ್ನು ತಮ್ಮ ಆಸೆಗಳಿಗಾಗಿ ರೂಪಿಸಬಾರದು” ಎಂಬ ಸಂದೇಶವನ್ನು ಚಿತ್ರವು ಸಾರುತ್ತದೆ.
ಚಿತ್ರದಲ್ಲಿ ಛಾಯಾರಾಣಿ, ಧನಲಕ್ಷ್ಮಿ, ರಂಗನಾಥ್ ನಂಜನಗೂಡು, ಮಣಿಕಂಠ ಸೂರ್ಯ, ಸುಕುಮಾರ್, ಪ್ರೀತಿ ಎಸ್. ಬಾಬು, ಕಾವೇರಿ ಶ್ರೀಧರ್, ವೀರೇಂದ್ರ ಬೆಳ್ಳಿಚುಕ್ಕಿ, ಕಾಳಿಪ್ರಸಾದ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ತಾಂತ್ರಿಕ ತಂಡದಲ್ಲಿ ಛಾಯಾಗ್ರಹಣ ಹಿ ವಿನಾಯಕ ರೇವಡಿ, ಸಂಗೀತ ಹಿ ಶಿವಸತ್ಯ, ಸಂಭಾಷಣೆ ಹಿ ಕೃಷ್ಣಪ್ರಸಾದ್ ಹಳೇಬೀಡು, ಚಿತ್ರಕಥೆ ಹಿ ಪೂರ್ಣೇಶ್ ಸಾಗರ್, ವಸ್ತ್ರ ವಿನ್ಯಾಸ ಹಿ ವೀರೇಂದ್ರ ಬೆಳ್ಳಿಚುಕ್ಕಿ, ಸಂಕಲನ ಹಿ ಮುತ್ತುರಾಜ್ ಟಿ., ಕಲರಿಸ್ಟ್ ಹಿ ಸಚಿನ್ ಹಾಗೂ ಪತ್ರಿಕಾ ಸಂಪರ್ಕ ಹಿ ಡಾ. ಪ್ರಭು ಗಂಜಿಹಾಳ ಮತ್ತು ಡಾ. ವೀರೇಶ್ ಹಂಡಿಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರಕ್ಕೆ ಸಾಹಿತ್ಯ, ಕಥೆ ಹಾಗೂ ನಿರ್ದೇಶನವನ್ನು ಕಾಳಿಪ್ರಸಾದ್ ವಹಿಸಿದ್ದು, ಸಹ ನಿರ್ಮಾಪಕರಾಗಿ ಮಾರುತಿ ಎಂ. ಮತ್ತು ವೀಣಾ ಎಂ. ಕಾರ್ಯನಿರ್ವಹಿಸಿದ್ದಾರೆ. ‘ದೇವಿ’ ಬಾಲ್ಯದ ಸ್ವಾಯತ್ತತೆ, ಮಕ್ಕಳ ಹಕ್ಕುಗಳು ಹಾಗೂ ಪೋಷಕರ ಜವಾಬ್ದಾರಿಯ ಕುರಿತು ಗಂಭೀರ ಚಿಂತನೆಗೆ ಆಹ್ವಾನ ನೀಡುವ ಅರ್ಥಪೂರ್ಣ ಚಿತ್ರವಾಗಿದೆ. ಮಕ್ಕಳೊಂದಿಗೆ ಪೋಷಕರೂ ಕಡ್ಡಾಯವಾಗಿ ವೀಕ್ಷಿಸಬೇಕಾದ ಸಾಮಾಜಿಕ ಸಂದೇಶ ಹೊಂದಿರುವ ಸಿನಿಮಾ ಎಂಬುದಾಗಿ ಚಿತ್ರತಂಡ ತಿಳಿಸಿದೆ.
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ
ಬಿಗಿ ಭದ್ರತೆಯ ನಡುವೆ 6,200ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ಜಮ್ಮುವಿನಿಂದ ಪ್ರಯಾಣ ಬೆಳೆಸಿದರು 