'ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತ ನೆಮ್ಮದಿಯುಕ್ತ ಜೀವನದ ಸಂತೃಪ್ತಿ'

'ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತ ನೆಮ್ಮದಿಯುಕ್ತ ಜೀವನದ ಸಂತೃಪ್ತಿ' 'Congress rule in the state is a source of contentment and a peaceful life'

ಲೋಕದರ್ಶನ ವರದಿ 

ಗದಗ 15:  ಕಳೆದ ದಿನಾಂಕ  20 ಮೇ 2023 ರಂದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಅತೀ ಹೆಚ್ಚು ಅವಧಿಗೆ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿದ ಸಿದ್ದರಾಮಯ್ಯನವರು ಮುಂದುವರಿಯುತ್ತಿರುವುದು ಅತ್ಯಂತ ಹರ್ಷದ ಸಂಗತಿ. ಇದೇ ರೀತಿ 20 ಮೇ 2023 ರಂದು ಎರಡನೇ ಬಾರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸನ್ಮಾನ್ಯ ಸಿದ್ದರಾಮಯ್ಯ ನವರು ಇಂದು 14 ಫೆಬ್ರವರಿ 2026 ರಂದು 1000 ದಿನಗಳನ್ನು ಯಶಸ್ವಿಯಾಗಿ ಪೂರೈಸಿರುವುದು ರಾಜ್ಯದ ಸಮಸ್ತ ನಾಗರಿಕರಿಗೆ ಹೆಮ್ಮೆಯ ಸಂಗತಿಯಾಗಿರುತ್ತದೆ.  ರಾಜ್ಯದಲ್ಲಿ ವೈವಿಧ್ಯಮಯ ಭಾಗ್ಯಗಳ ಸರದಾರ ಎಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯನವರ ನೇತೃತ್ವದಲ್ಲಿ  ಉಪಮುಖ್ಯಮಂತ್ರಿಗಳಾದ ಸನ್ಮಾನ್ಯಡಿ ಕೆ ಶಿವಕುಮಾರ ಹಾಗೂ ಅಭಿವೃದ್ಧಿಯ ಹರಿಕಾರರು ಕಾನೂನು ಮತ್ತು ಸಂಸದೀಯ ವ್ಯವಹಾರ, ಶಾಸನ ರಚನೆ, ಪ್ರವಾಸೋಧ್ಯೇಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾಕ್ಟರ್ ಎಚ್ ಕೆ ಪಾಟೀಲ್ ಸಾಹೇಬರ ಮುಂದಾಳತ್ವದಲ್ಲಿಬಡ ಜನಸಾಮಾನ್ಯರ  ಹಸಿವಿನ ನೋವು ನಲಿವಿಗೆ ಹೆಗಲು ನೀಡಿ, ನಾಡಿನ ಬಡ ಜನಸಮುದಾಯದ ಉನ್ನತಿಗಾಗಿ ನುಡಿದಂತೆ ನಡೆದ ಸಿದ್ದರಾಮಯ್ಯನವರುಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24 ಗಂಟೆಗಳೊಳಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. 

“ಜನಸೇವೆಯೇ ಜನಾರ್ಧನ ಸೇವೆ” ಯ ತತ್ವಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ,  ಎಲ್ಲಾ ಜಾತಿ ಮತ ಪಂಥಗಳ ಜನರೊಟ್ಟಿಗೆ ನಡೆಯುತ್ತಿರುವದು ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಜಾತ್ಯಾತೀತ ಮನೋಭಾವನೆಯನ್ನು ತೋರುತ್ತದೆ. 

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸದಸ್ಯರ ಬಲದೊಂದಿಗೆ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯನವರ ಮಾಸ್ ಲೀಡರ್ ಶಿಪ್ ಪ್ರಮುಖ ಕಾರಣವಾಗಿದೆ. ಅದೇ ರೀತಿ  ಡಿ.ಕೆ. ಶಿವಕುಮಾರ್ ಅವರ ಸಂಘಟನೆ ಚಾತುರ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಹಾಗೂ ರಾಹುಲ್ ಗಾಂಧಿಯವರ ವಿಚಾರಧಾರೆಗಳು ಕೂಡಾ ಮಹತ್ವಪೂರ್ಣವಾದವುಗಳು. 

ಅಧಿಕಾರಕ್ಕೆ ಬಂದ ತಕ್ಷಣವೇ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಂತಹ ಐತಿಹಾಸಿಕ ನಿರ್ಧಾರ ಕೈಗೊಂಡು ಅನ್ನಭಾಗ್ಯ ಗೃಹಲಕ್ಷ್ಮಿ ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿರುತ್ತದೆ. 

ಅನ್ನಭಾಗ್ಯ ಯೋಜನೆಯಡಿ 4.4 ಕೋಟಿ ಫಲಾನುಭವಿಗಳು ಪುತಿ ತಿಂಗಳು 10 ಕೆಜಿ ಅಕ್ಕಿ ಪಡೆಯುತ್ತಿದ್ದಾರೆ. ಮುಂದಿನ ತಿಂಗಳಿಂದ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯ ಜೊತೆಗೆ 1 ಕಜಿ ತೊಗರಿಬೇಳೆ, 1 ಕೆಜಿ ಕಡಲೆಬೇಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು ಹಾಗೂ 1 ಕೆಜಿ ಅಡಿಗೆ ಎಣ್ಣೆ ಕಿಟ್ ನೀಡುವ ಯೋಜನೆ ರೂಪಿಸಲಾಗಿದೆ. 

ಶಕ್ತಿ ಯೋಜನೆಯಡಿ ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 680 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್‌ ಪುಸ್ತಕದಲ್ಲಿ ದಾಖಲಾಗಿದೆ. ಇದರ ವಚ್ಚ ರೂ.8,815 ಕೋಟಿ. 

ಯುವನಿಧಿ ಯೋಜನೆಯಡಿ 3.7 ಲಕ್ಷ ಫಲಾನುಭವಿಗಳಿಗೆ ರೂ.4375 ಕೋಟಿ ವೆಚ್ಚ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. 

2024-25ರ ಆರ್ಥಿಕ ಸಮೀಕ್ಷೆಯ ಪ್ರಕಾರ ಕರ್ನಾಟಕವು ಭಾರತದಲ್ಲೇ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದ್ದು ವಾರ್ಷಿಕ ತಲಾ ಆದಾಯ ರೂ.2,04,605 ದಾಟಿದೆ. ಕಳೆದ ದಶಕದಲ್ಲಿ ಶೇ. 93.6ರಷ್ಟು ಬೆಳವಣಿಗೆ ಸಾಧಿಸಿರುವ ರಾಜ್ಯವು ದೇಶದ ಸರಾಸರಿ ಆದಾಯಕ್ಕಿಂತ ಹೆಚ್ಚಿನ ಸಾಧನೆ ದಾಖಲಿಸಿದೆ. ಆದರೆ ಬೇರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ಅನ್ಯ ಸರ್ಕಾರಗಳು  

ಕರ್ನಾಟಕದ ಹೆಮ್ಮೆಯ ಕಾಂಗ್ರೇಸ್ ಸರಕಾರ ಅನುಷ್ಠಾನಗೊಳಿಸಿದ ಯೋಜನೆಗಳನ್ನೇ ತಾವೂ ಭರವಸೆ ನೀಡಿದರೂ ಇಲ್ಲಿಯವರೆಗೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿವೆ. 

ಕೃಷ್ಣ ಮೇಲ್ಕಂಡ ಯೋಜನೆ  ಅಡಿಯಲ್ಲಿ ಕೃಷ್ಣ ವಾಟರ್ ಟ್ರಿಬ್ಯುನಲ್‌-2ನ 166 ಟಿಎಂಸಿ ನೀರಿನ ಸದ್ಬಳಕೆಗೆ 1 ಲಕ್ಷ 32 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಒಣಭೂಮಿಗೆ 35 ಲಕ್ಷ ಹಾಗೂ ನೀರಾವರಿ ಜಮೀನಿಗೆ ?40 ಲಕ್ಷ ಪರಿಹಾರ ನೀಡಲು ನಿರ್ಧರಿಸಿರುವುದು ಒಂದು ಐತಿಹಾಸಿಕ ನಿರ್ಧಾರ. 

ಭದ್ರಾ ಮೇಲ್ಕಂಡ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೂ.5,300 ಕೋಟಿ ನೀಡುವುದಾಗಿ ಬಜೆಟ್ ನಲ್ಲಿ ಘೋಷಿಸಿದರೂ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ.  ಹಾಗೂ 15ನೇ ಹಣಕಾಸಿನ ಆಯೋಗದ ಶಿಫಾರಸ್ಸಿನಂತೆ ರೂ.11,495 ಕೋಟಿಗಳ ವಿಶೇಷ ಅನುದಾನ ಇದುವರೆಗೂ ನೀಡಿರುವುದಿಲ್ಲ.  ಇದಕ್ಕೆಲ್ಲಾ ಕೇಂದ್ರ ಸರ್ಕಾರದ ಅಸಹಕಾರವಿದ್ದರೂ ರಾಜ್ಯದ ಅಭಿವೃದ್ಧಿಗೆ ಹಣಕಾಸಿನ ತೊಂದರೆಯಾಗದಂತೆ ಹಲವು ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಂಡಿದ್ದಾರೆ. ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ.   ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ರೂ.5,000 ಕೋಟಿ ಅನುದಾನ ನೀಡುತ್ತಿದ್ದಾರೆ.  ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ಸುಮಾರು 100 ಮುರಾರ್ಜಿ ವಸತಿ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಎಸ್‌ಸಿ/ಎಸ್‌ಟಿ ಜನರಿಗೆ ಜನಸಂಖ್ಯೆ ಆಧಾರಿತ ಅನುದಾನ ನೀಡಲು ಕಾನೂನು ತಂದು ರೂ.43 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟಿರುವುದು ಐತಿಹಾಸಿಕವಾಗಿದೆ. 

ಅದರಂತೆ ಕೆಎಂಎಫ್ ಅಭಿವೃದ್ಧಿಗೆ ಆಡಳಿತಾರೂಢ ಸರಕಾರದ ಕೊಡುಗೆ ಅಪಾರ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ರೂ.15 ಪ್ರೋತ್ಸಾಹಧನ ನೀಡುವ ಮೂಲಕ ರೈತರ ಆದಾಯ ಹೆಚ್ಚಿಸಿದ್ದಾರೆ. ಹಾಲು ಉತ್ಪಾದಕ ಸಹಕಾರಿ ಸಂಘಗಳ ಮೂಲಸೌಕರ್ಯ ಸುಧಾರಣೆ ಮತ್ತು ನೇರ ಪಾವತಿ ವ್ಯವಸ್ಥೆ ಬಲಪಡಿಸಲಾಗಿದೆ. ಗ್ರಾಮೀಣ ಮಹಿಳೆಯರು ಮತ್ತು ಹಾಲು ಉತ್ಪಾದಕರಿಗೆ ವಿವಿಧ ಬೆಂಬಲ ಯೋಜನೆಗಳಿಂದ ರೈತರ ಆರ್ಥಿಕ ಸ್ಥಿತಿ ಸುಧಾರಿಸಿದೆ. 

2013ರಿಂದ 2018 ರವರೆಗೆ ಹಾಗೂ 2023ರಿಂದ ಇಂದಿನವರೆಗೆ ಆಡಳಿತದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಬಡವರ, ಮಹಿಳೆಯರ, ದೀನದುರ್ಬಲರ, ರೈತರ ಧ್ವನಿಯಾಗಿ ರಾಜ್ಯವನ್ನು ಮುನ್ನಡೆಸುತ್ತಿರುವುದು ಹೆಮ್ಮೆಯ ಸಂಗತಿಯಾಗಿರುತ್ತದೆ.  

ಅಧಿಕಾರ ಗ್ರಹಣ ಮಾಡಿದ ಕೇವಲ 1000 ದಿನಗಳಲ್ಲಿ ಅಂದರೆ  ಸಂಪೂರ್ಣ 3 ವರ್ಷಗಳ ಪೂರೈಕೆಯ ಮುನ್ನವೇ ಸಮಸ್ತ ನಾಡಿನ ಮಹಿಳೆಯರ, ನಿರುದ್ಯೋಗಿ ಯುವಕರ, ರೈತರ, ಬಡ ಜನಸಾಮಾನ್ಯರು ಇಂದಿನ ಅವೈಜ್ಞಾನಿಕ ಜಿ ಎಸ್ ಟಿ ಹಾಗೂ ರೂಪಾಯಿ ಅಪಮೌಲ್ಯಗಳ, ಹಾಗೂ ವಿಪರೀತ ಹಣದುಬ್ಬರ,  ಮತ್ತು ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆಯೂ ಕಳೆದ ಒಂದು ಸಾವಿರ ದಿನಗಳಿಂದ ನೆಮ್ಮದಿಯುಕ್ತ ಸಂತೃಪ್ತಿಯ ಜೀವನ ಸಾಗಿಸುವಂತಾಗಲು ನೆರವುದಾಯಕವಾಗಿರುತ್ತದೆ. ಎಂದು ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಜನಸ್ಪಂಧನೆಯನ್ನು ವ್ಯಕ್ತಪಡಿಸಿರುತ್ತಾರೆ.