‘ಮಕ್ಕಳು ಉನ್ನತ ಹುದ್ದೆಯನ್ನು ಅಲಂಕರಿಸುವ ಗುರಿಯನ್ನು ಹೊಂದಬೇಕು’

‘ಮಕ್ಕಳು ಉನ್ನತ ಹುದ್ದೆಯನ್ನು ಅಲಂಕರಿಸುವ ಗುರಿಯನ್ನು ಹೊಂದಬೇಕು’ 'Children should aim to hold high positions'

ಲೋಕದರ್ಶನ ವರದಿ,

ಜಮಖAಡಿ ೧೬: ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದರೆ ಸಾಲದು. ಉನ್ನತ ಹುದ್ದೆಯನ್ನು ಅಲಂಕರಿಸುವ ಗುರಿಯನ್ನು ಮಕ್ಕಳು ಹೊಂದಬೇಕು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಕರೆಯನ್ನು ನೀಡಿದರು.

ನಗರದ ದಾನಮ್ಮ ದೇವಿಯ ಸಭಾ ಭವನದಲ್ಲಿ ನಡೆದ ಬಣಜಿಗ ದೈವ ಮಂಡಳಿ ಸಹಯೋಗದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಸನ್ಮಾನ ಮಾಡುವುದು ಬಹಳ ಸಂತೋಷ. ಇಂದಿನ ದಿನಮಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಶೇ. ೮೫ ಅಂಕ ಗಳಿಸಿದರು ಸಹ ಕಡಿಮೆ ಅಂತಾ ಪಾಲಕರು ಯಾರು ಭಾವಿಸಬಾರದು. ಆಯ್,ಎ,ಎಸ್, ಆಯ್,ಪಿ,ಎಸ್ ಆಗುವ ಕನಸು ಕಾಣುತ್ತಿರುವುದು ಸಹಜ ಅದು ಸಾಧನೆ ಮಾಡುವುದು ಛಲವನ್ನುವ ಮಕ್ಕಳು ಬಿಡಬಾರದು. ವಿದ್ಯಾರ್ಥಿಗಳು ಕನಸು ಕಾಣುತ್ತಿರುವುದು ಸಹಜ ಅದನ್ನು ನನಸು ಮಾಡುವ ಗುರಿಯನ್ನು ಹೊಂದಬೇಕು. ಕನಸಿನ ಜೊತೆಗೆ ನಿರಂತರ ಪ್ರಯತ್ನ ಹೊಂದಬೇಕು ಎಂದರು.

ಬಣಜಿಗ ಸಮಾಜ ಸಾಧನೆ ಮಾಡುತ್ತಾ ಹೀಗೆ ಮುಂದೆ ಬರಬೇಕು. ಸಣ್ಣ ಸಮಾಜವಾದರು ರಾಜ್ಯದಲ್ಲಿ ಏಳು ಜನ ಸಚಿವರು, ಮಂತ್ರಗಳು ಆಗಿದ್ದಾರೆ. ಇವಾಗಿನ ಸರಕಾರದಲ್ಲಿ ಬಣಜಿಗ ಸಮಾಜ ಸಚಿವರಾದ ಈಶ್ವರ ಖಂಡ್ರೆ ಅವರು ಸಹ ಸಣ್ಣ ಸಮಾಜದಿಂದ ಮೇಲೆಕ್ಕೆ ಬಂದವರು. ಹೀಗೆ ಸಮಾಜ ಮುಂದೆ ಬರುವ ಸಾಮಾಜಿಕ ಕೆಲಸಗಳನ್ನು ಮಾಡಬೇಕು ಎಂದರು.

ಗುರುಬಸಪ್ಪ ಅನಂತಪೂರ ಅವರು ಪುತ್ರರಾದ ರೋಹಿತ ಅವರಿಗೆ ಜೀವಮಾನ ಪ್ರಶಸ್ತಿ ಪ್ರಧಾನ ಜರುಗಿತು. ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಷಣ್ಮುಖಪ್ಪ ಮಹಾಬಳಶೆಟ್ಟಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಜರುಗಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಿದರು.

ಸಂಜಯ ಬಗಲಿ, ಜಿಲ್ಲಾಧ್ಯಕ್ಷ ಹೊಳೆಬಸು ಪಾರಶೆಟ್ಟಿ ಮಾತನಾಡಿದರು. ಚನ್ನಮಲ್ಲಯ್ಯ ಮಠಪತಿ ಉಪನ್ಯಾಸ ನೀಡಿದರು. ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು, ಶಿರೋಳ ಉಮಾರೂಡ ಮಠದ ಶಂಕರಾರೂಢ ಶ್ರೀಗಳು ಆರ್ಶೀವಚನ ನೀಡಿದರು.

ವೇದಿಕೆಯಲ್ಲಿ ಮಲ್ಲಿಕಾರ್ಜುನ ಜಿರಲಿ, ತಾ.ಅಧ್ಯಕ್ಷ ಚನ್ನಪ್ಪ ಬಾಂಗಿ, ದೈವ ಮಂಡಳಿ ಅಧ್ಯಕ್ಷ ಶಂಕರ ಜಿರಲಿ, ಉಮಾ ಮಹೇಶ ಬಾಂಗಿ, ಪವಿತ್ರಾ ಸಂಪತ್ತಕುಮಾರ ಕಲ್ಯಾಣಶೆಟ್ಟಿ, ಮಲ್ಲಪ್ಪ ಜೈನಾಪೂರ, ಚಂದ್ರಶೇಖರ ಜತ್ತಿ, ಸಂಗಮೇಶ ಹಲವಾಯಿ, ರಮೇಶ ಉಪ್ಪಿನ, ಸದಾಶಿವ ಬಾಗೇವಾಡಿ, ಶಂಕರ ಚಿಮ್ಮಡ, ರಾಜು ಕರಣಿ, ಪ್ರಭು ಕಲ್ಯಾಣಶೆಟ್ಟಿ, ಮುರಗೆಪ್ಪ ಕುರಿ, ಸತೀಶ ಬಾಂಗಿ, ಶಿವಾನಂದ ಗೊಂದಿ, ಬಸವರಾಜ ಹರಕಂಗಿ, ಮಲ್ಲಿಕಾರ್ಜುನ ಇಂಗಳಗಾವಿ, ಉಮೇಶ ಮುರಗೋಡ ಸೇರಿದಂತೆ ಅನೇಕರು ಇದ್ದರು.