ಮಿಲ್ಲತ್ ಶಾಲೆಯ ಬಿ ಬಿ ಶಾಹಿದಾ ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ; ಹಲವರ ಅಭಿನಂದನೆ

ಮಿಲ್ಲತ್ ಶಾಲೆಯ ಬಿ ಬಿ ಶಾಹಿದಾ ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರಧಾನ ; ಹಲವರ ಅಭಿನಂದನೆ 'Best Teacher' award presented to B.B. Shahida of Millat School; receives congratulations from many


ಕೊಪ್ಪಳ 07: ಖಾಸಗಿ ಶಾಲಾ ಆಡಳಿತ ಮಂಡಳಿ  ಕೊಪ್ಪಳ ತಾಲೂಕ ಒಕ್ಕೂಟದ ವತಿಯಿಂದ ನಗರದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕೊಪ್ಪಳ ನಗರದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯ ಸಹ ಶಿಕ್ಷಕಿ ಬಿಬಿ ಶಾಹಿದಾ ತಂದೆ ಮೊಹಮ್ಮದ್ ವಹಿದೂದ್ದೀನ್ ಸಾಕಿನ್ ಕೊಪ್ಪಳ ರವರಿಗೆ  ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು,ಖಾಸಗಿ ಶಾಲಾ ಆಡಳಿತ ಮಂಡಳಿ ಕೊಪ್ಪಳ ತಾಲೂಕ ಒಕ್ಕೂಟದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಕೊಡ ಮಾಡಿದ ಶೈಕ್ಷಣಿಕ ಕ್ಷೇತ್ರದ ಉತ್ತಮ ಸೇವೆಗಾಗಿ ಈ ಬಾರಿ ಮಿಲತ್ ಶಾಲೆಯ ಬಿಬಿ ಶಾಹಿದಾ ತಂದೆ ಮೊಹಮ್ಮದ್ ವಹಿಸುದ್ದೀನ್ ರವರು ಆಯ್ಕೆಗೊಂಡು ಪ್ರಶಸ್ತಿ ಸ್ವೀಕರಿಸಿ ರುವದಕ್ಕೆ ಮಿಲ್ಲತ್ ಶಾಲೆಯ ಶಿಕ್ಷಕ ವೃಂದ ಹಾಗೂ   ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಹಾಲಿ ಅಧ್ಯಕ್ಷರಾದ ಸೈಯದ್ ಗೌಸ್ ಪಾಷಾ ಖಾಜಿ ,ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಅಜೀಜ್ ರೆವಡಿ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,