ಶಿಕ್ಷಣ, ಸಾಹಿತ್ಯ ಸಾಧಕಿ ಸುನಿತಾ ಪತಂಗರಾಯಗೆ ‘ಬಸವಭೂಷಣ’ ಪ್ರಶಸ್ತಿ

ಶಿಕ್ಷಣ, ಸಾಹಿತ್ಯ ಸಾಧಕಿ ಸುನಿತಾ ಪತಂಗರಾಯಗೆ ‘ಬಸವಭೂಷಣ’ ಪ್ರಶಸ್ತಿ  'Basavabhushan' award to Sunitha Patangaraya, an educationist and literature achiever


ಯಲಬುರ್ಗಾ 23: ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ, ಯಲಬುರ್ಗಾದ ಬಸವಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಕವಯತ್ರಿ ಶ್ರೀಮತಿ ಸುನಿತಾ ಪತಂಗರಾಯ ಅವರನ್ನು ರಾಜ್ಯಮಟ್ಟದ ‘ಬಸವಭೂಷಣ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಸವನಬಾಗೇವಾಡಿಯ ಬಸವ ಜನ್ಮಭೂಮಿ ಪ್ರತಿಷ್ಠಾನದಿಂದ ನೀಡಲಾಗುವ ಈ ಪ್ರಶಸ್ತಿಗೆ ಅವರು ಆಯ್ಕೆಯಾಗಿರುವುದು ಯಲಬುರ್ಗಾ ತಾಲೂಕಿನ ಹೆಮ್ಮೆಗೆ ಕಾರಣವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಚುಟುಕು ಹಾಗೂ ಕವನಗಳ ಮೂಲಕ ಗುರುತಿಸಿಕೊಂಡಿರುವ ಸುನಿತಾ ಪತಂಗರಾಯ ಅವರು ಈಗಾಗಲೇ ಎರಡು ಬಾರಿ ಉತ್ತಮ ಶಿಕ್ಷಕಿ ಪ್ರಶಸ್ತಿ  ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ. ಅ. 25ರಂದು ಪ್ರಶಸ್ತಿ ಪ್ರದಾನ: 2026ರ ಅಕ್ಟೋಬರ್ 25ರಂದು ಬೆಳಿಗ್ಗೆ 11 ಗಂಟೆಗೆ ಬಸವನಬಾಗೇವಾಡಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಅವರಿಗೆ ‘ಬಸವಭೂಷಣ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.