’ದೇಶದ ಹಿತ ಬಯಸುತ್ತೆ ಬಿಜೆಪಿಕಾಂಗ್ರೆಸ್‌ನಲ್ಲಿ ರಬ್ಬರ್‌ಸ್ಯಾಂಪ್‌ಗಳನ್ನು ಮಾತ್ರ ಮಂತ್ರಿ ಮಾಡ್ತಾರೆ: ಸಂಜಯ
'BJP wants the country's interest, Congress only makes rubber stamps ministers: Sanjay
ಯಮಕನಮರಡಿ 12: ಪ್ರಶಿಕ್ಷಣ ವರ್ಗಗಳ ಅಭಿಯಾನ ಯಾವುದೇ ಪಕ್ಷದಲ್ಲಿ ಇಲ್ಲ ದೇಶಕ್ಕಾಗಿ ಚಿಂತನೆ ಮಾಡುವ ಪಕ್ಷ ಹಾಗೂ ಭಾರತ ಮಾತಾ ಕೀ ಜೈ ಎನ್ನುವ ಕಾರ್ಯಕರ್ತರು ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಇದ್ದಾರೆ ಎಂದು ಬೆಳಗಾವಿ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಶ್ರೀ ಲಕ್ಷ್ಮೀ ದೇವಿ ಸಭಾಮಂಟಪದಲ್ಲಿ ಶನಿವಾರ ಪಂಡಿತ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಅಭಿಯಾನ ನಿಮಿತ್ತ ಯಮಕನಮರಡಿ ಉತ್ತರ ಮಂಡಲದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕೇವಲ ಶಾಮಪ್ರಕಾಶ ಮುಖರ್ಜಿ ಮತ್ತು ದೀನ ದಯಾಳ್ ಉಪಾಧ್ಯೆ ಅವರು ಇಬ್ಬರೇ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಈಗ ಸುಮಾರು 300 ಸಂಸದರು ಲೋಕಸಭೆಯಲ್ಲಿದ್ದು ಅಧಿಕಾರ ಚುಕ್ಕಾಣಿ ಹಿಡಿದ್ದು ಮಹಾನ್ ನಾಯಕರ ಕನಸು ರಾಮ ಮಂದಿರ ನಿರ್ಮಾಣ, 370 ಮಸೂದೆ ತಿದ್ದುಪಡಿ ಮಾಡಿದರು. ಇಂತಹ ಅನೇಕ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದರು.
ಆದರೆ ವಿರೋಧ ಪಕ್ಷ ಕಾಂಗ್ರೆಸ್ ನವರು ಸಂವಿಧಾನ ಶಿಲ್ಪಿಡಾ? ಬಿ.ಆರ್. ಅಂಬೇಡ್ಕರ್ ನಿಧನದ ಸಂದರ್ಭದಲ್ಲಿ ಅವರಿಗೆ 4 ಅಡಿ ಜಾಗ ನೀಡಿಲ್ಲ ನಮ್ಮ ಪ್ರಧಾನಿ ಮೋದಿಯವರು ದೇಶಕ್ಕಾಗಿ 18 ತಾಸು ಕೆಲಸಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಬೆಲೆ ಇದೆ. ಆದರೆ ಕಾಂಗ್ರೆಸ್ ನಲ್ಲಿರಬ್ಬರ್ ಸ್ಟಾಂಪ್ ಇದ್ದವರನ್ನು ಮಾತ್ರ ಮಂತ್ರಿ ಮಾಡುತ್ತಾರೆ ಎಂದು ದೂರಿದರು.ರಾಜ್ಯ ಎಸ್ಪಿ ಮೋರ್ಚಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷ ಪಕ್ಷದ ಹುಟ್ಟಿನಿಂದ ಇಂದಿನವರೆಗೆ ನಡೆದ ಬಂದ ದಾರಿ ಬಗ್ಗೆ ಪ್ರಶಿಕ್ಷಣ ವರ್ಗದಲ್ಲಿ ಕಾರ್ಯಕರ್ತರಿಗೆ ಹೇಳುವ ಪದ್ದತಿಯಿದೆ.
ಯಮಕನಮರಡಿ ಮತಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಆ ನಿಟ್ಟಿನಲ್ಲಿ ಬರುವ ವರ್ಗದಲ್ಲಿ2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಿದ್ದರಾಗಬೇಕು ಎಂದರು.ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷಸತೀಶ ಅಪ್ಪಾಜಿಗೋಳ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಯಮಕನಮರಡಿ ಉತ್ತರ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಹುಕ್ಕೇರಿ ಕೆಇಬಿ ನಿರ್ದೇಶಕ ಕಲಗೌಡ ಪಾಟೀಲ, ಉಪಾಧ್ಯಕ್ಷ ಅಜೀತ ಮುನ್ನೋಳಿ, ಶಿವಾನಂದ ನವನಾಳಿ, ಗುರುರಾಜ ಹುದ್ದಾರ, ರಾಜು ಮಠಪತಿ, ಶಿವಾನಂದ ಬಾಗೇವಾಡಿ, ಅಶೋಕ ಕುರಣಿ ಸೇರಿದಂತೆ ಇತರರಿದ್ದರು. ಸಂತು ಪಾಟೀಲ ನಿರೂಪಿಸಿ, ವಂದಿಸಿದರು.ಯಮಕನಮರಡಿ: ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಇತರೆ ಗಣ್ಯರು ಉದ್ಘಾಟಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 