‘ಕೆರೆ ತುಂಬುವ ಯೋಜನೆಯಿಂದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ’
'A permanent solution to the water problem through the lake filling project'
ರಾಯಬಾಗ 30: ನೀರಿನ ಸಮಸ್ಯೆಯಿಂದ ಮತ್ತು ಸದಾ ಬರಗಾಲದಿಂದ ಬಳಲುತ್ತಿದ್ದ ತಾಲೂಕಿನ ದಕ್ಷಿಣ ಭಾಗದ ಗ್ರಾಮಗಳು ಕೆರೆ ತುಂಬುವ ಯೋಜನೆ ಈಗ ಅನುಷ್ಠಾನಗೊಂಡಿದ್ದರಿಂದ ಶಾಶ್ವತ ಪರಿಹಾರ ದೊರಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ತಾಲೂಕಿನ ಮಾಡಲಗಿ, ಬೂದಿಹಾಳ, ಹುಬ್ಬರವಾಡಿ ಗ್ರಾಮಗಳ ಕೆರೆಗಳನ್ನು ವೀಕ್ಷಿಸಿ, ಮೇಖಳಿ ಗ್ರಾಮದ ಕೆರೆಗೆ ಬಾಗಿನ ಅರ್ಿಸಿ ಮಾತನಾಡಿದ ಅವರು, ತಾಲೂಕಿನ 39 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಯೋಜನೆ ಸಮರ್ಕವಾಗಿ ಅನುಷ್ಠಾನಗೊಂಡಿದ್ದು, ಸಧ್ಯ ಪ್ರಾಯೋಗಿಕವಾಗಿ ಕೆರೆಗಳಿಗೆ ನೀರು ತುಂಬಿಸಲು ಚಾಲನೆ ನೀಡಲಾಗಿದೆ, ಬರುವ ಜುಲೈದಿಂದ ಎಲ್ಲ ಕೆರೆಗಳನ್ನು ತುಂಬಿಸಲಾಗುತ್ತದೆ. 2
017 ರಲ್ಲಿ ಸಿ.ಎಂ. ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಕೆರೆ ತುಂಬಿಸುವ ಯೋಜನೆ ಮಂಜೂರಾಗಿತ್ತು. ಈಗ ಅದೇ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ಈ ಭಾಗದಲ್ಲಿ ನೀರಿನ ಸಮಸ್ಯೆಗೆ ಮುಕ್ತಿ ನೀಡಲಾಗಿದ್ದು, ನಮ್ಮ ಸರ್ಕಾರದ ಹೆಮ್ಮೆಯಾಗಿದೆ ಎಂದು ಹೇಳಿದರು.ಚಿಕ್ಕ ಚಿಕ್ಕ ಟ್ಯಾಂಕ್ ನಿರ್ಮಾಣ ಮಾಡುವಂತೆ ಇಲ್ಲಿನ ಜನರು ನಮ್ಮ ಮುಂದೆ ಬೇಡಿಕೆ ಈಟ್ಟಿದ್ದು, ಬರುವ ದಿನಗಳಲ್ಲಿ ಅವಶ್ಯಕತೆ ಇರುವಲ್ಲಿ ನಿರ್ಮಿಸಿ, ಜನರ ಬೇಡಿಕೆ ಈಡೇರಿಸುವುದಾಗಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ, ತಹಸೀಲ್ದಾರ ಮಹಾದೇವ ಸನಮುರಿ, ಅಮಿತ ಘಾಟಗೆ, ರಾಜು ಶಿರಗಾಂವೆ, ಅರ್ಜುನ ನಾಯಿಕವಾಡಿ, ದೀಲೀಪ ಜಮಾದಾರ, ಸಿದ್ದಾರೂಢ ಬಂಡಗರ, ಹಾಜಿ ಮುಲ್ಲಾ, ನಾಮದೇವ ಕಾಂಬಳೆ, ಫಾರೂಕ ಮೋಮಿನ, ಜ್ಯೋತಿ ಕೆಂಪಟ್ಟಿ, ಡಿ.ಎಸ್.ನಾಯಿಕ, ವಸಂತ ಕರಿಗಾರ, ಭಾವುಸಾಹೆಬ ಪಾಟೀಲ, ಸಿದ್ರಾಮ ಪುಜೇರಿ, ಮಾರುತಿ ನಾಯಿಕ, ರಾಮಚಂದ್ರ ನಾಯಿಕ , ಭರಮಾನಂದ ಚೌಗುಲೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 