ಮುದ್ದೇಬಿಹಾಳ 28; ತೊಗರಿ ಬೆಳೆ ಬೆಳೆದ ರೈತರಿಗೆ ಕೇಂದ್ರ ಸರ್ಕಾರವು ಬೆಂಬಲ ಬೆಲೆ ನಿಗದಿಪಡಿಸಿದ್ದು ರಾಜ್ಯ ಸರ್ಕಾರ ತೊಂದರೆಯಲ್ಲಿರುವ ತೊಗರಿ ಬೆಳೆಗಾರರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಸಹಾಯವನ್ನು ಮಾಡಲು ಮುಖ್ಯಮಂತ್ರಿಗಳನ್ನು ಕೋರುತ್ತೇವೆ ಎಂದು ಜವಳಿ ಕಬ್ಬು ಮತ್ತು ಕೃಷಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಬಾಲಾಜಿ ಬೇಳೆ ಉತ್ಪಾದಕ ಘಟಕ ಉದ್ಘಾಟನೆ ಮಾಡಿದ ಅವರು, ಮಳೆ ಕೊರತೆ ಹವಾಮಾನ ವೈಪರಿತ್ಯದ ನಡುವೆ ತೊಗರಿ ಬೆಲೆ ಕುಸಿತ ಕಂಡಿರುವುದರ ಕುರಿತು, ಖರೀದಿ ಮಾಡುವುದರ ಕುರಿತು ಪರೀಶೀಲಿಸಲಾಗುವದು ಎಂದು ಹೇಳಿದರು.
ನಂತರ ಮೈಸೂರು ಶ್ರೀಗಂಧ ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ ಎಸ್ ನಾಡಗೌಡ ಮಾತನಾಡಿ, ತಾಲೂಕಿನ ರೈತರು ಕೃಷಿ ಇಲಾಖೆಯಿಂದ ಖರೀದಿಸಿದ ಬೀಜ ಕೇವಲ 17ಅ ಹಂಚಿಕೆಯಾನ್ನು ಮಾತ್ರ ಮಾಡಲಾಗಿದೆ. ಉಳಿದದ್ದು ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಯಿಂದ ಖರೀದಿಸಿದ ಬೀಜ ಆಗಿದೆ. ಹೀಗಾಗಿ ಕಳಪೆ ಬೀಜ ಕುರಿತು ತನಿಖೆ ನಡೆಸುವುದು ಸುಲಭವಲ್ಲ. ಹವಾಮಾನ ವೈಪರೀತ್ಯ, ತೇವಾಂಶ ಕೊರತೆಯಿಂದ ಸಮಸ್ಯೆ ಆಗಿದೆ ಎಂದು ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟಿ ಭಾಗಗಳಲ್ಲಿ ಅಧಿಕ ತೊಗರಿ ಯನ್ನು ರೈತರು ಬೆಳೆಯುತ್ತಿದ್ದು ಇವರಿಗೆ ಮಾರಾಟ ಮಾಡಲು ಸರಿಯಾದ ಮಾರುಕಟ್ಟೆವಿಲ್ಲ. ಈಗ ಕ್ಷೇತ್ರದಲ್ಲಿ ಬೇಳೆ ಉತ್ಪಾದಕ ಘಟಕ ಆರಂಭವಾಗಿದ್ದು, ರೈತರು ನೇರವಾಗಿ ಯಾವುದೇ ಮಧ್ಯವರ್ತಿ ಇಲ್ಲದೇ, ಅಮಾಲಿ ಹಾಗೂ ಯಾವುದೇ ಕಮಿಷನ್ ನೀಡಿದ ಅಂದಿನ ಟೆಂಡರ್ ಬೆಲೆಯಲ್ಲಿಯೇ ರೈತರ ತೊಗರಿಯನ್ನು ಈ ಪ್ಯಾಕ್ಟರಿ ಕೊಂಡುಕೊಳ್ಳುವುದು ಸ್ವಾಗತಾರ್ಹ ಎಂದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ಯಂತ್ರ ಚಾಲನೆ ಮಾಡಿದರು, ಚಿತ್ರದುರ್ಗ ವನಶ್ರೀ ಗಾಣಿಗ ಗುರುಪೀಠದ ಜಯಬಸವ ಕುಮಾರ ಸ್ವಾಮಿಜಿ, ಕುಂಟೋಜಿ ಭಾವೈಕ್ಯತೆ ಹಿರೇಮಠದ ಚನ್ನವೀರ ಶಿವಾಚಾರ್ಯರು, ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಉಪಸ್ಥಿತರಿದ್ದರು. ಬಾಲಾಜಿ ಉದ್ಯಮದ ಪಾಲುದಾರರಾದ ಶರಣು ಸಜ್ಜನ್ ಸಂಗಮೇಶ ಕಡಿ ರುದ್ರ್ಪ ಕಡಿ ಮುಖಂಡರಾದ ಪ್ರಭುಗೌಡ ದೇಸಾಯಿ ಮುರಿಗೆಪ್ಪ ಮೋಟಗಿ ಸೋನಿ ಇಲ್ಲೂರು ಶೇಖಪ್ಪ ಸಜ್ಜನ ಮುಂತಾದವರು ಇದ್ದರು.