ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ನಿತ್ಯ ಜೀವನದಲ್ಲಿ ಅನೇಕ ವಿಷಮ ಪರಿಸ್ಥಿತಿಗಳು ಉದ್ಭವಿಸುತ್ತಲೇ ಇರುತ್ತವೆ. ನಾವು ಮಾಡುವ ಉದ್ಯೋಗದಲ್ಲಿ, ಕ್ರಮಿಸುವ ಹಾದಿಯಲ್ಲಿ ಏನಾದರೊಂದು ಸಮಸ್ಯೆ ಬಂದೊಡನೆ ವಿಚಲಿತರಾಗಿಬಿಡುತ್ತೇವೆ. ಆಗ ಮುಂದೇನು ಮಾಡುವುದು ನಮಗಿನ್ನು ಭವಿಷ್ಯವಿಲ್ಲ. ಎಂದು ತಲೆ ಮೇಲೆ ಕೈಹೊತ್ತು ಕುಳಿತು ಬಿಡುತ್ತೇವೆ. ಜೀವನ ನಾವಂದುಕೊಂಡಷ್ಟು ಅರಾಮದಾಯಕವಲ್ಲ. ನಾನಾ ರೀತಿಯಾದ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ, ಭರವಸೆ ನಮ್ಮಲ್ಲಿದ್ದರೆ ಯಾವ ಸಂಕಷ್ಟಗಳಿಗೂ ಸಿಲುಕಬೇಕಾಗಿಲ್ಲ.
ಒಬ್ಬ ಬಡವ ತನ್ನ ಜೀವನೋಪಯಕ್ಕಾಗಿ ಬಾಡಿಗೆಗೆ ಬಂಡಿ ಹೊಡೆಯುತ್ತಿದ್ದ. ವಾಹನಗಳ ಸೌಕರ್ಯವಿಲ್ಲದ ಕಾರಣ ತನ್ನ ಬಂಡಿಯಲ್ಲಿ ಜನರನ್ನು ಕುಳ್ಳಿರಿಸಿಕೊಂಡು ಪೇಟೆಗೆ ತಲುಪಿಸುತ್ತಿದ್ದ. ಹಾಗೆಯೇ ಪೇಟೆಯಿಂದ ಮರಳಿ ಹಳ್ಳಿಗೆ ಜನರನ್ನು ತಲುಪಿಸುತ್ತಿದ್ದ. ಜನರಿಲ್ಲದಿದ್ದಾಗ ಸಂತೆಯ ದಿನ ತರಕಾರಿ, ದಿನಸಿ ಪದಾರ್ಥಗಳನ್ನು ಹೇರಿಕೊಂಡು ಅವರು ಹೇಳಿದ ಸ್ಥಳಕ್ಕೆ ತಲುಪಿಸುವುದು ಅವನ ದಿನನಿತ್ಯದ ಕೆಲಸವಾಗಿತ್ತು. ಬಂದ ಹಣದಿಂದ ಜೀವನವನ್ನು ಸಾಗಿಸುತ್ತಿದ್ದ.
ಒಮ್ಮೆ ತರಕಾರಿಗಳನ್ನು ಪಟ್ಟಣದ ಸಂತೆಗೆ ತೆಗೆದುಕೊಂಡು ಹೋಗುವಾಗ ಮಧ್ಯೆ ದಾರಿಯಲ್ಲಿ ಜೋರಾಗಿ ಮಳೆ ಬಂದು ರಸ್ತೆಯಲ್ಲಿ ಚಲಿಸಲಾರದ ಪರಿಸ್ಥಿತಿ ಉಂಟಾಗಿತ್ತು. ರಸ್ತೆಯ ಕಂದಕದಲ್ಲಿ ಈ ಬಡವನ ಬಂಡಿ ಸಿಕ್ಕಿಹಾಕಿಕೊಂಡಿತು. ಎಷ್ಟೇ ಪ್ರಯತ್ನಿಸಿದರೂ ಗಾಲಿ ಮೇಲೇಳಲಿಲ್ಲ. ಸಿಟ್ಟಿನಿಂದ ತನ್ನ ಎತ್ತುಗಳಿಗೆ ಏಟು ಹಾಕತೊಡಗಿದ. ಎತ್ತುಗಳಿಗೆ ನೋವು ತಾಳಲಾದೆ ಶಕ್ತಿ ಮೀರಿ ಎಳೆದವು ಆದರೂ ಮೇಲೇಳಲಿಲ್ಲ. ಇನ್ನೂ ಆಳವಾಗಿ ಬಂಡಿಯ ಚಕ್ರಗಳು ಕೆಸರಲ್ಲಿ ಇಳಿಯತೊಡಗಿದವು. ಸರಿಯಾದ ಸಮಯಕ್ಕೆ ತರಕಾರಿಗಳನ್ನು ಸಂತೆಗೆ ತಲುಪಿಸದಿದ್ದರೆ ಹಾಳಾಗುತ್ತವೆ. ಜೊತೆಗೆ ಕೂಲಿಯು ಸಿಗದಂತಾಗಿ ಕಷ್ಟಪಡಬೇಕಾಗುತ್ತದೆ ಎಂದು ಬಂಡಿಯನ್ನು ಎಳೆಯುವ ಎತ್ತುಗಳಿಗೆ ಪದೇ ಪದೇ ಏಟು ಹಾಕುತ್ತಲೇ ಇದ್ದ. ಬಂಡಿ ಮೇಲೆಳದಿದ್ದಾಗ ಮಳೆ ಬಂದ ಕಾರಣಕ್ಕೆ ಮಳೆಯನ್ನು, ಕೆಸರಿನಂತಾದ ಭೂಮಿಯನ್ನು ಶಪಿಸುತ್ತಾ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ.
ಅದೇ ದಾರಿಯಲ್ಲಿ ಹಾದುಹೋಗುತ್ತಿದ್ದ ಸಾಧು ಒಬ್ಬ ಇವನ ಸ್ಥಿತಿಯನ್ನು ಕಂಡು ಮರಗುತ್ತಾನೆ. ತಮ್ಮಾ ಮೊದಲು ಬಂಡಿಯಿಂದ ಕೆಳಗಿಳಿ. ನಿನ್ನ ಶಕ್ತಿಯನ್ನು, ಯುಕ್ತಿಯನ್ನು ಬೆರೆಸಿ ನೋಡು. ಇಂತಹ ಸಂದರ್ಭದಲ್ಲಿ ನೀನು ಎತ್ತುಗಳಿಗೆ ಪದೆ ಪದೆ ಹೊಡೆಯುವುದನ್ನು ನಿಲ್ಲಿಸು. ಭರವಸೆಯನ್ನು ಕಳೆದುಕೊಳ್ಳದಿರು. ನಿನ್ನ ಭುಜವನ್ನು ಬಂಡಿಗೆ ಕೊಟ್ಟು ಮೇಲೆತ್ತು. ಆಗ ಗಾಲಿ ಕೆಸರಿನಿಂದ ಮೇಲೆ ಬರುತ್ತೆ ಎಂದು ಹೇಳಿದರು. ಕೂಡಲೇ ಆ ಬಡವ ಕೆಳಗಿಳಿದು, ಎತ್ತುಗಳ ಭುಜವನ್ನು ಪ್ರೀತಿಯಿಂದ ಸವರಿ ಬಂಡಿಗೆ ತನ್ನ ಹೆಗಲು ಕೊಟ್ಟು ಗಾಲಿಯನ್ನು ಎತ್ತಿದನು. ಕೂಡಲೆ ಎತ್ತುಗಳು ಬಂಡಿಯನ್ನು ಮುಂದೆ ಎಳೆದವು.........
ಕಷ್ಟದ ಸಮಯದಲ್ಲಿ ಕೈಕಟ್ಟಿ ಕುಳಿತು ಇತರರ ಮೇಲೆ ಗೂಬೆ ಕೂರಿಸಿದರೆ ಹೇಗೆ.? ಆತ್ಮಸ್ಥೈರ್ಯ, ಕ್ರಿಯಾಶೀಲ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಬಹಳಷ್ಟು ಜನರಿಗೆ ಪ್ರಯತ್ನಶೀಲತೆ ಮತ್ತದರ ಫಲಿತದ ಬಗ್ಗೆ ವಿಶ್ವಾಸವೇ ಇರುವುದಿಲ್ಲ. ನಮಗೆದುರಾಗುವ ಸಮಸ್ಯೆಗಳಿಗೆ ಜಾಣ್ಮೆಯಿಂದ ಪರಿಹಾರದ ದಾರಿಯನ್ನು ಕಂಡುಕೊಳ್ಳಬಹುದು. ಗಡಿಯಾರದ ಮುಳ್ಳುಗಳನ್ನು ತಿರುಗಿಸಿ ಹೊಸದಾಗಿ ಪ್ರಾರಂಭಿಸಬಹುದು. ಜೀವನ ಹಾಗಲ್ಲ. ಇಟ್ಟ ಹೆಜ್ಜೆ ಹಿಂದೆಗೆಯುವುದು ಸಾಧ್ಯವೂ ಆಗುವುದಿಲ್ಲ. ಹೊಸ ಮನಸ್ಥಿತಿಯನ್ನು ಸಮರ್ಥವಾಗಿ ಎದುರಿಸಬೇಕು. ಚೇಳು ತನ್ನ 50 ರಿಂದ 60 ಮರಿಗಳು ಪ್ರೌಢಾವಸ್ಥೆಗೆ ಬರುವವರೆಗೂ ತನ್ನ ಬೆನ್ನ ಮೇಲೆ ಹೋತ್ತುಕೊಂಡೆ ತಿರುಗಾಡುತ್ತದೆ. ಒಂದು ಚಿಕ್ಕ ಇರುವೆ ಕೂಡಾ ತನ್ನ ಬದುಕಿಗಾಗಿ ತನ್ನ ಹತ್ತು ಪಟ್ಟು ತೂಕದ ಆಹಾರ ಪದಾರ್ಥವನ್ನು ಹೊತ್ತೊಯ್ಯುತ್ತದೆ. ನಮ್ಮ ಜೀವನವೂ ಹಾಗೆಯೇ.
ನಾವು ಪ್ರತಿಯೊಂದು ಕ್ಷಣದಲ್ಲೂ ಪ್ರಯತ್ನಗಳನ್ನು ಮಾಡದೆ ಮುನ್ನಡೆಯಲು ಸಾಧ್ಯವಾಗದು. ವಿವೇಚನೇ ಇಲ್ಲದೇ ಕೆಲಸಮಾಡಿದರೆ ಹಾಳಾಗುವುದು ನಮ್ಮ ಬದುಕು. ಯೋಚನೆಯಿಂದ ಮಾಡಿದರೆ ಅದು ಸಾಕ್ಷಾತ್ಕಾರದ ಹಾದಿಯಾಗುತ್ತದೆ.