ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು 
ಉತ್ತರ ಕರ್ನಾಟಕದ ಜಮೀನು ಗಳಲ್ಲಿ ಬೆಳೆಯುವ ಹಕ್ಕರಕಿ ಸೊಪ್ಪು/ ಪಲ್ಲೆ ಎಂದು ಆಡುಭಾಷೆಯಲ್ಲಿ ಕರೆಯಲ್ಪಡುವ ಈ ಹತ್ತರಕಿ ಸೊಪ್ಪಿಗೆ ಉರ್ದು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆಯುತ್ತಾರೆ, ಈ ಸೊಪ್ಪು ಬಹುಪಯೋಗಿಯಾಗಿದ್ದು, ಈ ಸೊಪ್ಪನ್ನು ಬೀಜ ಹಾಕಿ ಉಳುಮೆ ಮಾಡಿ ಬೆಳೆಸುವುದಿಲ್ಲ. ಗಾಳಿಯಿಂದ ಬೀಜ ಹಾರಿ ಪ್ರಸಾರಗೊಂಡು ಎಲ್ಲೆಂದರಲ್ಲಿ ಬೆಳೆಯುತ್ತದೆ.
ಮೊದಲಿಂದಲೂ ರೈತ ಸಮುದಾಯ ಹೊಲದಲ್ಲಿ ಬುತ್ತಿ ಬಿಚ್ಚಿ ಊಟಕ್ಕೆ ಕುಳಿತಾಗ ಪಕ್ಕದಲ್ಲೇ ನೆಲದಲ್ಲಿ ಹರಡಿದ ಈ ಹತ್ತರಕಿ ಪಲ್ಲೆ ಕಿತ್ತುಕೊಂಡು ತಿನ್ನುವ ರೂಢಿ ಇತ್ತು. ಆಗ ಹಿರಿಯರು ಹತ್ತರಕಿ ಪಲ್ಲೆ ತಿಂದರ ಹೊಟ್ಯಾನ ಹರಳು ಕರಗತಾವ ಎಂದು ಹೇಳ್ತಾ ಇದ್ದರು. ಅದಕ್ಕೆ ಉದರ್ು ಭಾಷೆಯಲ್ಲಿ ಫತ್ತರೇಕಿ ಭಾಜಿ ಎಂದು ಕರೆದಿರಬಹುದು. ಈ ಹತ್ತರಕಿ ಸೊಪ್ಪಿನಲ್ಲಿ ಎಲ್ಲ ಪೌಷ್ಟಿಕಾಂಶಗಳು ಅತ್ಯಧಿಕವಾಗಿವೆ.
ನಮ್ಮ ಪೂರ್ವಜರ ಹಾಗೂ ರೈತರ ಅನುಭವ ಜ್ಞಾನ ಎಷ್ಟೊಂದು ಅಗಾಧವಾಗಿತ್ತು. ಹತ್ತರಕಿ ಪಲ್ಲೆ, ಮೆಂತೆ ಪಲ್ಲೆ, ಸೌತೆಕಾಯಿ, ಗಜ್ಜರಿ , ಮೂಲಂಗಿ ಇತ್ಯಾದಿ ಹಸಿಯಾಗಿಯೇ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬ ಸಂದೇಶವನ್ನು ಸಾವಿರಾರು ವರ್ಷಗಳ ಹಿಂದೆಯೇ ನೀಡಿದ್ದಾರೆ ಈ ಹಕ್ಕರಕಿ ಸೊಪ್ಪಿಗೆ ಆಂಗ್ಲ ಭಾಷೆಯಲ್ಲಿ ಆಚಿಟಿಜಜಟಠಟಿ ಎಂದು ಕರೆಯುತ್ತಾರೆ. ಇದೇ ಹೆಸರಿನಿಂದ ಹರ್ಬಲ್ ಔಷಧಿಗಳನ್ನು ತಯಾರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
*ಹಕ್ಕರಿಕೆ ಎಲೆಗಳಲ್ಲಿ ಗ್ಲಯೋಕ್ಸಿಲೇಟ್,ರಿಡಕ್ವೇಸ್ ಎಂಬ ಕಿಣ್ವಗಳು ಉತ್ಪತ್ತಿಯಾಗುತ್ತವೆ. ಈ ಕಿಣ್ವಗಳು ಮೂತ್ರ ಪಿಂಡ ಗಳಲ್ಲಿ ಹರಳು ಉಂಟಾಗುವುದನ್ನು ತಡೆ ಗಟ್ಟುತ್ತವೆ.
*ಇದರ ಸೇವನೆಯಿಂದ ಬಳಲಿಕೆ ಆಯಾಸ ದೂರವಾಗುತ್ತದೆ.
*ದೇಹಕ್ಕೆ ಬಲ ನೀಡುತ್ತದೆ. *ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.
*ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. *ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
*ಚರ್ಮರೋಗ ಗಳಿಗೆ ಉಪಯೋಗಿಸಬಹುದು *ಮೂಳೆಗಳ ಸವೆತ ತಡೆಗಟ್ಟುತ್ತದೆ.
* ಗರ್ಭಿ ಣಿ ಸ್ತ್ರೀಯರು ಹಾಗೂ ಹಾಲುಣಿಸುವ ತಾಯಂದಿರಿಗೆ ಈ ಸೊಪ್ಪಿನ ಸೇವನೆಯಿಂದ ಎಲ್ಲ ಪೌಷ್ಟಿಕಾಂಶ ದೊರೆಯುತ್ತದೆ.
*ಇತ್ತೀಚಿನ ಸಂಶೋಧನೆ ಪ್ರಕಾರ ಕ್ಯಾನ್ಸರ್ ರೋಗ ಹಾಗೂ ಏಡ್ಸ್ ರೋಗಕ್ಕೆ ಪ್ರಯೋಜನಕಾರಿಯಾಗಿದೆ ಎಂಬ ಮಾಹಿತಿ ಸಿಗುತ್ತದೆ
ಕೊನೆಯಲ್ಲಿ ಒಂದು ಮಾತು ಈ ಹತ್ತರಕಿ ಪಲ್ಲೆ ಊಟದಲ್ಲಿ ಹಸಿಯಾಗಿಯೇ ಬಳಸುವುದರಿಂದ ಲಾಭ ಹೆಚ್ಚು . ಈಗ ಮಳೆಗಾಲ ಹತ್ತರಕಿ ಪಲ್ಲೆ ಸಂತೆಯಲ್ಲಿ ಸಾಕಷ್ಟು ಸಿಗುತ್ತದೆ, ಡಿಸೆಂಬರ್ ವರೆಗೂ ಇದನ್ನು ತಿನ್ನಬಹುದು.