ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಸಾಮಾನ್ಯವಾಗಿ ನೀವು ನೀರು ನಿಂತ ಜಾಗ, ಕೆರೆ, ಆಣೆಕಟ್ಟಿನ ಹಿನ್ನೀರಿನ ಪ್ರದೇಶಗಳಲ್ಲಿ, ತುಂಬಿ ಹರಿಯುವ ನದಿ ದಂಡೆಗಳಲ್ಲಿ ನೋಡಿದರೆ ಸಾಕು ನೀರಿನಲ್ಲಿ ಕಳೆ ಸಸ್ಯವೊಂದು ಆವರಿಸಿರುವುದು ಕಂಡುಬರುತ್ತದೆ. ಇದು "ವಾಟರ್ ಹೈಸಿಂತ್' ಎಂಬ ಜಲ ಕಳೆ ಸಸ್ಯ. ಈ ಕಳೆ ಸಸ್ಯದ ಎಲೆ ಮತ್ತು ಹೂವುಗಳು ನೋಡಲು ಬಲು ಸುಂದರ. ಒಂದು ರೀತಿ ಪುಷ್ಪ ಪ್ರದರ್ಶನ ಏರ್ಪಡಿಸಿದಂತೆ ಕಾಣುತ್ತಿರುತ್ತದೆ.
ದೇಶದ ಎಲ್ಲೆಡೆ ಕಾಣುವ ಈ ಸಸ್ಯ, ಕೆರೆ, ನದಿ ಹತ್ತಿರ ಬರುವ ಎಲ್ಲರನ್ನು ಆಮಂತ್ರಿಸುತ್ತಿವೆ. ಹೂಗಳು ಅರಳಿ ನಿಂತು ಕಂಪನ್ನು ಬೀರುತ್ತವೆ. ಮಧುವನ್ನು ಅರಸಿ ಬರುವ ಮಧುಕರರು ಇಲ್ಲೆ ಬೀಡುಬಿಟ್ಟುಕೊಂಡಿರುತ್ತಾರೆ. ಕೆರೆಯ ನೀರಿನಲ್ಲಿ ಬೆಳೆಯುವ ಕಳೆ ಸಸ್ಯ ಹೈಸಿಂತ್ ಕೆರೆಯ ಮೀನುಗಾರಿಕೆಗೆ ಮಾರಕ.ಜಲಚರಗಳನ್ನೇ ನಾಶ ಮಾಡುವ ಅಪಾಯಕಾರಿ ಕಳೆ'ಅಂತರಗಂಗೆ'. ಹಾಗಾಗಿ ಈ ಸಸ್ಯಕ್ಕೆ ನೀರಿನ ಪ್ಲೇಗ್ ಎನ್ನುತ್ತಾರೆ.
ಹೂವುಗಳ ಜಾತಿಗೆ ಸೇರಿದ ಸಸ್ಯ ಕುಟುಂಬಕ್ಕೆ ಅಂತರಗಂಗೆ ಸೇರಿದೆ. ವಾಟರ್ ಹೈಸಿಂತ್ ಮತ್ತು ಐಕಾರ್ನಿಯಾ ಎಂತಲೂ ಕರೆಯುವ ಇದಕ್ಕೆ ನಮ್ಮ ಹಳ್ಳಿಗರ ಬಾಯಲ್ಲಿ ಜೊಂಡು, ಅಂತರತಾವರೆ, ಅಂತರಗಂಗೆಯಾಗಿದೆ. ಎಲೆಗಳು ಹಸಿರು ಹಾವಿನ ಹೆಡೆಯಂತೆ ಇರುತ್ತವೆ. ಈ ಹಸಿರ ಎಲೆಗಳ ಮಧ್ಯ ಅರಳುವ ಈ ವರ್ಣ ರಂಜಿತ ಹೂವು ಪ್ರಕೃತಿಯ ಹೆಮ್ಮೆಯ ಸೃಷ್ಟಿ.
ಇದರ ಮೂಲ ದಕ್ಷಿಣ ಅಮೇರಿಕೆಯ ದ್ರುವ ಪ್ರದೇಶಗಳು. ಇದರ ಕಾಂಡವು ಉದ್ದವಾಗಿ ಸ್ಪಂಜಿನಂತೆ ಗೆಡ್ಡೆಯಾಕಾರದಲ್ಲಿರುತ್ತದೆ. ಈ ಕಾಂಡವು ಎಂಟರಿಂದ ಹದಿನೈದು ಹೂವುಗಳನ್ನು ಹಿಡಿದಿಟ್ಟುಕೊಂಡಿರುತ್ತದೆ. ಇದರ ಬೇರುಗಳು ಕಪ್ಪು ಮಿಶ್ರಿತನೇರಳೆ ಬಣ್ಣದಿಂದ ಕೂಡಿದ್ದು ರೆಕ್ಕೆಗಳಂತೆ ನೀರಿನಲ್ಲಿ ತೇಲಾಡುತ್ತಿರುತ್ತವೆ.. ಈ ಹೂವುಗಳು ಮುಟ್ಟಿದರೆ ಮುದುಡುವ, ರೇಷಿಮೆಯ ಎಳೆಯಂತಹ ನವಿರು ಪಕಳೆಗಳಿಂದ ಕೂಡಿವೆ. ಇವುಗಳ ಬಣ್ಣ, ತಿಳಿ ನೇರಳೆ ಜೊತೆಗೆ ನೀಲಿ ಮಿಶ್ರಿತ, ಮಧ್ಯ ಹಳದಿ ಬಣ್ಣ ಅಲ್ಲದೆ ಕಡು ನೀಲಿ ಬಣ್ಣದ ಚಿತ್ತಾರಗಳಿರುತ್ತವೆ.
ಸುಮಾರು 1-2 ಅಡಿ ಎತ್ತರ ಮಾತ್ರ ಬೆಳೆದು ಕೆಲವೇ ಕೆಲವು ದಿನಗಳಲ್ಲಿ ಇಡೀ ನೀರಿರುವ ಪ್ರದೇಶವನ್ನೆಲ್ಲ ಆಕ್ರಮಿಸಿಕೊಳ್ಳುತ್ತದೆ. ಈ ಸಸ್ಯ ನೀರಿರುವ ಜಾಗವನ್ನು ಆವರಿಸಿಕೊಳ್ಳಲು ಸುರು ಮಾಡಿತೆಂದರೆ ಉಳಿದ ಜಲ ಸಸ್ಯಗಳಿಗೆ ಹಾಗೂ ಮೀನುಗಳಂತಹ ಜಲಚರಿಗಳಿಗೆ ಉಳಿಗಾಲವಿಲ್ಲ. ನೀರಿನಲ್ಲಿರುವ ಆಮ್ಲಜನಕ, ಸಾರಜನಕ, ರಂಜಕ ಮತ್ತು ಪೊಟ್ಯಾಶಿಯಮ್ಗಳನ್ನು ಹೇರಳವಾಗಿ ಹೀರಿಕೊಳ್ಳುತ್ತದೆ. ದೋಣಿಗಳ ಸಂಚಾರಕ್ಕೂ ತಡೆಯಾಗಿ ಅಪಘಾತಕ್ಕೂ ಕಾರಣವಾಗುತ್ತಿದೆ.
ಆದರೆ ಈ ಅಪಾಯಕಾರಿ ಅಂತರಗಂಗೆ ಕೇರಳದ ಅದೇಷ್ಟೋ ಕುಟುಂಬಗಳ ಪಾಲಿಗೆ ಎರೆಗೊಬ್ಬರ ತಯಾರಿಕೆ,ಚಾಪೆ,ಬುಟ್ಟಿ,ಟೋಪಿ ಮೊದಲಾದ ವಸುಗಳನ್ನು ತಯಾರಿಸಿಸುತ್ತಿದ್ದು ಸ್ವತಂತ್ರ ಬದುಕು ನೀಡುವ ಬಾಳ ಗಂಗೆಯಾಗಿದೆ. ಅಂತ ಕಳೆಯನ್ನು ಬಳಸಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ನೀಡಿದೆ. ಕೇರಳದ ಕೋಟಪುರಂ ನ ಮಹಿಳಾ ಸಂಘಟನೆಯು ಈ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿನ ಪುರುಷರು ಮೀನುಗಾರಿಕೆ ಕಾರ್ಮಿಕರು. ಮೀನುಗಾರಿಕೆ ಇಲ್ಲದಿದ್ದರೆ ಕೆಲಸವಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಇಲ್ಲಿಯ ಮಹಿಳೆಯರಿಗೆ ಹೊಳೆದ ಐಡಿಯಾವೇ ಈ ಜೊಂಡಿನಿಂದ ವಸ್ತುಗಳನ್ನು ಹಾಗೂ ಎರೆಗೊಬ್ಬರ ತಯಾರಿಸುವುದು.
ಕೆರೆಯಲ್ಲಿ ಬೆಳೆದು ಜಲಮೂಲವನ್ನೇ ಹಾಳುಮಾಡುವ ಇದನ್ನು ಕೃಷಿ ಚಟುವಟಿಕೆಯಲ್ಲಿ ಹಸಿರೆಲೆ ಗೊಬ್ಬರವಾಗಿ ಉಪಯೋಗಿಸುತ್ತಿದ್ದಾರೆ.ಈ ಸಸ್ಯವನ್ನು ಸಣ್ಣ ತುಂಡುಗಳಾಗಿ ಮಾಡಿಕೊಂಡು, ಒಂದು ತೂಕದ ಸೆಗಣಿಯ ಜೊತೆಗೆ ಮೂರು ತೂಕದ ಹೈಸಿಂತ್ ತುಂಡುಗಳನ್ನು ಬೆರೆಸಿ ಒಂದು ತಿಂಗಳ ಕಾಲ ಕೊಳೆಯಲು ಬಿಡಬೇಕು. ತೆಂಗಿನ ನಾರನ್ನು ಎರೆಗೊಬ್ಬರ ಘಟಕದ ತಳಭಾಗಕ್ಕೆ ಹಾಸಬೇಕು. ಅದರ ಮೇಲೆ ಒಂದು ಹಾಸು ಹಸುವಿನ ಸೆಗಣಿ ಹಾಸಬೇಕು. ಅದರ ಮೇಲೆ ತಿಪ್ಪೆಗೊಬ್ಬರ ಹಾಗೂ ಈ ಮೊದಲೇ ಕೊಳೆಹಾಕಿದ ಹೈಸಿಂತ್ ಮತ್ತು ಸೆಗಣಿ ಮಿಶ್ರಣವನ್ನು ಹರಡಬೇಕು. ಭಾಗಶ: ಕೊಳೆತ ಗೊಬ್ಬರವನ್ನು ಎರೆಘಟಕಕ್ಕೆ ವರ್ಗಾಯಿಸಿ ಎರೆಹುಳುಗಳನ್ನು ಬಿಡಬೇಕು. ಒಂದು ಟನ್ ಒಣ ಹೈಸಿಂತ್ ಎಲೆಯಿಂದ 500 ಕೆಜಿ ಗೊಬ್ಬರ ಉತ್ಪಾದನೆ ಸಾಧ್ಯ. ಈ ಅಂತರಗಂಗೆಯು ಸಾಕಷ್ಟು ಪ್ರಮಾಣದಲ್ಲಿ ಒಣ ಸಾವಯವ ಪದಾರ್ಥ ನೀಡುತ್ತದೆ.
ಎರೆಗೊಬ್ಬರ ತಯಾರಿಕೆಗೆ ಉತ್ತಮವಾದ ಕಳೆಯಾಗಿದೆ. ಪೊಟ್ಯಾಷ್, ಸಾರಜನಕ, ರಂಜಕ ಪೋಷಕಾಂಶಗಳು ಕೊಡುವ ಕೆಲಸವನ್ನು ಈ ಕಳೆ ಸಸ್ಯ ಮಾಡುತ್ತದೆ. ಇದು ಬೆಳೆಗಳಿಗೆ ಬೇಕಾಗುವ ರೋಗ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಇದರಿಂದಾದ ಗೊಬ್ಬರ ಭೂಮಿಗೆ ಹೆಚ್ಚಾಗಿ ಸೇರುವುದರಿಂದ ಮಣ್ಣು ಮೃದುವಾಗುತ್ತದೆ. ತೇವಾಂಶ ದೀರ್ಘಕಾಲ ಉಳಿಯುತ್ತದೆ. ಮಣ್ಣು ಫಲವತ್ತಾಗಿ, ನೀರಿನ ಬೇಡಿಕೆ ಕಡಿಮೆಯಾಗುತ್ತದೆ. ಬೆಳೆಗಳಿಗೆ ಬೇಕಾದ ಆಹಾರ ಲಭ್ಯವಾಗುವುದರ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಹೆಚ್ಚಾಗಿ ನಿಂತಿರುವ ನೀರಿನಲ್ಲಿ ಬೆಳೆಯುವ ಇದು ಕಳೆಯಾಗಿ ಪರಿಣಮಿಸಿ ನೀರಿನ ಮೇಲೆ ಹಸಿರು ಪದರು ನಿಮರ್ಿಸಿ ನೀರಿನ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ. ವಾಟರ್ ಹೈಸಿಂತ್ ಬೆಳೆಯುವ ಕಡೆ ಸಹಜವಾಗಿ ನೀರಿನಲ್ಲಿ ಬೆಳೆಯುವ ಇತರೆ ಕಳೆಗಳು ಸಂಪೂರ್ಣ ನಾಶವಾಗಿಹೋಗುತ್ತವೆ. ಎಷ್ಟೇ ಸಲ ಕೊಚ್ಚಿ ಹಾಕಿದರೂ ಮತ್ತೆ ಬೆಳೆಯುವ ಈ ಸಸ್ಯ ಕೇವಲ ಎಂಟು ತಿಂಗಳಲ್ಲಿ ಒಂದು ಎಕರೆ ಪ್ರದೇಶ ಆವರಿಸಿ ನಿಲ್ಲುವ ಸಾಮಥ್ರ್ಯ ಹೊಂದಿದೆ. ಇದನ್ನು ಕೃಷಿ ಚಟುವಟಿಕೆಗೆ ಬಳಸಬಹುದು ಎಂಬುದನ್ನು ಕನರ್ಾಟಕದ ಕೆಲವು ಭಾಗಗಳ ರೈತರು ಬಹು ಹಿಂದೆಯೇ ಕಂಡುಕೊಂಡಿದ್ದರು. ಈ ಸಸ್ಯ ಹಸಿರೆಲೆ ಗೊಬ್ಬರವಾಗಿ ಅನೇಕ ತೋಟಗಳಲ್ಲಿ ಇಂದೀಗೂ ಬಳಕೆಯಾಗುತ್ತದೆ. ಎರೆಗೊಬ್ಬರ ತಯಾರಿಕೆಗೆ ಇದನ್ನು ಉಪಯೋಗಿಸುವಾಗ ಸಗಣಿ ಮತ್ತು ಗಂಜಲು ಜೊತೆ ಮಿಶ್ರಣ ಮಾಡಿ ನೆನೆಹಾಕಬೇಕು. ಈ ಸಸ್ಯವನ್ನು ಉಪಯೋಗಿಸಿ ಎರೆ ಗೊಬ್ಬರ ತಯಾರಿಸಲು ಕೇವಲ 45 ರಿಂದ 50 ದಿನಗಳು ಸಾಕಾಗುತ್ತದೆ. ಅಲ್ಲದೆ ಎರೆಹುಳುಗಳ ಗಾತ್ರ ಹಾಗೂ ಸಂಖ್ಯೆಗಳಲ್ಲಿ ಹೆಚ್ಚಳ ಕಂಡುಬಂದಿದೆ.
ಈಗ ಕೃಷಿಕರ ದೃಷ್ಟಿಯಲ್ಲಿ ಯಾವುದು ಕಸವಲ್ಲ. ಅನಗತ್ಯ ಬೆಳೆದ ಬಳ್ಳಿ , ಪುಢಾರಿ ಕಸದಿಂದ ಹಿಡಿದು ಏನೆಲ್ಲ ಬೆಳೆದುದನ್ನು ಕಿತ್ತು ಜಮೀನಿನಲ್ಲೇ ಬಿಟ್ಟು ಗೊಬ್ಬರ ಮಾಡಿ ಬೆಳೆ ಉತ್ತೇಜಿಸುವ ಹಾಗೂ ಕಳೆ ನಾಶ ಮಾಡುವ ತಂತ್ರಗಳು ಕಂಡುಕೊಂಡಿದ್ದಾರೆ.