ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ ಅಲಿಪ್ಟಾ ಜೆನಾ
ಎಷ್ಟೇ ಪ್ರತಿಕೂಲ ಸಂದರ್ಭಗಳಿದ್ದರೂ ಜೀವನ ಮುಂದುವರಿಯಬೇಕು. ತಮ್ಮ ಹಾಗೂ ಎಲ್ಲರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬೆಳಗಾವಿಯ ಕೆಲವು ಉದ್ಯಮಿಗಳು ಮತ್ತು ವೃತ್ತಿಪರರು ತಮ್ಮದೇ ಆದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಆವಿಷ್ಕಾರಗಳೊಂದಿಗೆ ಕೋವಿಡ್ ಲಾಕ್ಡೌನ್ ನಂತರದ ಪರಿಸ್ಥಿತಿಗೆ ಹೊಂದಿಕೊಂಡಿದ್ದಾರೆ. ಪ್ರಮಾಣಿತ ಕಾರ್ಯಾಚರಣೆ, ಕಾರ್ಯವಿಧಾನಗಳಿಂದ ಆರೋಗ್ಯ ಮತ್ತು ಸುರಕ್ಷತೆ, ಮೇಲ್ವಿಚಾರಣೆ ಸಾಧನಗಳೊಂದಿಗೆ ಗ್ರಾಹಕರ ಸುರಕ್ಷತೆ ಖಚಿತಪಡಿಸಿದ್ದಾರೆ.
ಇಂತಹ ಉದ್ಯಮಗಳ ಸಾಲಿನಲ್ಲಿ ಮೊದಲು ಗಮನ ಸೆಳೆಯುವುದೇ ಸೆನ್ಸ್ಜಿಜ್ ಎಂಬ ಸ್ಟಾರ್ಟ್ಅಪ್. ಸಂಸ್ಥಾಪಕ ಮತ್ತು ಸದ್ಯ ಸಿಇಒ ಆಗಿರುವ ಅಭಿಷೇಕ್ ಲಾಥೆ ಅವರು 2013ರಲ್ಲಿ ಇದನ್ನು ಬೆಳಗಾವಿಯಲ್ಲಿ ಪ್ರಾರಂಭಿಸಿದರು.
"ಇಂದು ಪ್ರಪಂಚ ಅತ್ಯಂತ ಕಠಿಣ ಸಂದರ್ಭ ಎದುರಿಸುತ್ತಿದೆ. ಕೋವಿಡ್-19 ಲಸಿಕೆ ಸಿಗಲು ಇನ್ನೂ ಹಲವು ತಿಂಗಳು ಕಾಯಬೇಕಿದೆ. ಇಂತಹ ಸಂಕ್ರಮಣದ ಸಮಯದಲ್ಲಿ ನಮ್ಮ ಪರಿಹಾರಗಳು ಸಮಯದ ಅಗತ್ಯವಾಗಿರುವ ಸಂಸ್ಥೆಗಳಲ್ಲಿ (ಕಚೇರಿಗಳು, ಬ್ಯಾಂಕುಗಳು ಮತ್ತು ಕಾರ್ಖಾನೆಗಳು) ಸಾಮಾಜಿಕ ದೂರ ಮತ್ತು ಸಂಪರ್ಕವನ್ನು ಪತ್ತೆ ಹಚ್ಚಲು ಸಾಕಷ್ಟು ಸಹಾಯ ಮಾಡುತ್ತದೆ. ಸೆನ್ಸ್ಜಿಜ್ನಲ್ಲಿ ನಾವು ಹೊಸತನ ಮುಂದುವರಿಸುತ್ತೇವೆ ಮತ್ತು ಜೀವ ಉಳಿಸುವ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಮಾರುಕಟ್ಟೆಗೆ ಬರುತ್ತೇವೆ ಎಂದು ಲಾಥೆ ಆತ್ಮವಿಶ್ವಾಸದಿಂದ ಹೇಳುತ್ತಾರೆ."
ಸಾಂಕ್ರಾಮಿಕ ಕಾಲದಲ್ಲೂ ನಾವೀನ್ಯತೆ
ಸೆನ್ಸ್ಜಿಜ್ ಸ್ಟಾರ್ಟ್ಅಪ್ ಕೊರೊನಾ ಪರಿಸ್ಥಿತಿ ನಿಭಾಯಿಸಲು ಸಹಾಯಕವಾಗು ಉತ್ಪನ್ನಗಳನ್ನು ಪರಿಚಯಿಸಿದೆ. ಉದಾಹರಣೆಗೆ ಬಹುಕ್ರಿಯಾತ್ಮಕ ಉತ್ಪನ್ನ ಅಔಓ. ಹೆಸರೇ ಸೂಚಿಸುವಂತೆ ಇದು ನಾಣ್ಯಗಾತ್ರದ ಸಾಧನವಾಗಿದ್ದು, ಇದು ವ್ಯಕ್ತಿಯ ಸಾಮಾಜಿಕ ದೂರ ಮತ್ತು ಸಂಪರ್ಕ ಪತ್ತೆ ಹಚ್ಚುವಿಕೆಯನ್ನು ಜಾರಿಗೊಳಿಸುವ ಗುರಿ ಹೊಂದಿದೆ.
ಇದು ಹೇಗೆ ಕೆಲಸ ಮಾಡುತ್ತದೆ ?
ಅಔಓ ಎಲೆಕ್ಟ್ರಾನಿಕ್ಸ್ ಮಾಡ್ಯೂಲ್ಗಳನ್ನು ಬಳಸುತ್ತದೆ. ಇದು ಸ್ಮಾರ್ಟ್ ಫೋನಗಳಿಗೆ ಹೋಲಿಸಿದರೆ ಹೆಚ್ಚಿನ ನಿಖರತೆ ಹೊಂದಿದೆ. ಇದು ಸಾಮಾಜಿಕ ದೂರ ಅಥವಾ ಪತ್ತೆಗಾಗಿ ಬಳಸುವಾಗ ವಿಭಿನ್ನ ನಿಖರತೆ ಹೊಂದಿದೆ.
ಜಿಪಿಎಸ್ ಆಧಾರಿತ ಅಪ್ಲಿಕೇಶನ್ಗಳು ಜನರನ್ನು ಹೊರಾಂಗಣದಲ್ಲಿ ಮಾತ್ರ ಟ್ರ್ಯಾಕ್ ಮಾಡಬಹುದು. ಆದರೆ ಕಚೇರಿಗಳು ಅಥವಾ ಕಾಖರ್ಾನೆಗಳಂತಹ ಒಳಾಂಗಣ ಸ್ಥಳಗಳಲ್ಲಿ ವ್ಯಕ್ತಿ ಯಾವ ಮಹಡಿಯಲ್ಲಿದ್ದಾನೆ ಅಥವಾ ಆತನ ಚಲವಲನ ಕಂಡುಹಿಡಿಯಲು ಜಿಪಿಎಸ್ ಡೇಟಾ ಒದಗಿಸಲು ಸಾಧ್ಯವಿಲ್ಲ. ಆದರೆ, ಸೆನ್ಸ್ಜಿಜ್ನ ಕಾಯಿನ್ ವಿವರವಾದ ನೆಲ ಮತ್ತು ಕೋಣೆಯ ಮಟ್ಟದ ಸಂಪರ್ಕ ಪತ್ತೆಹಚ್ಚುವಿಕೆ ಸಾಮರ್ಥ್ಯ ಹೊಂದಿದೆ. ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಜನರನ್ನೂ ಸಹ ಇದು ಗುರುತಿಸಬಹುದು, ಹೀಗಾಗಿ ಅವರನ್ನು ಉಳಿದವರಿಂದ ಪ್ರತ್ಯೇಕಿಸಲು ಸಹಾಯ ಮಾಡುತ್ತದೆ.
ಸೆನ್ಸ್ಜಿಜ್ ಸಿಂಗಾಪುರ್ ಏರ್ ಶೋ 2020ರಲ್ಲಿ ವಾಟ್ಸ್ನೆಕ್ಸ್ಟ್ ಸ್ಟಾರ್ಟ್ಅಪ್ ಪ್ರದರ್ಶನ, ರಾಷ್ಟ್ರೀಯ ಉದ್ಯಮಶೀಲತೆ ಪ್ರಶಸ್ತಿ, ಸ್ಟಾರ್ಟ್ಅಪ್
ಳಿಗಾಗಿ ವಿಜೇತ ಮತ್ತು ಎಂಎಚ್ಆರ್ಡಿ ಅಡಿಯಲ್ಲಿ ವೃತ್ತಿಪರ ವಿಭಾಗದಂತಹ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ.
ಸುರಕ್ಷಿತ ಆತಿಥ್ಯ
ಕೋವಿಡ್ನಂತಹ ಸಾಂಕ್ರಾಮಿಕ ರೋಗದಲ್ಲಿ ಸುಸಂಬದ್ಧ ನೈರ್ಮಲ್ಯ ನೀತಿ ಅಭಿವೃದ್ಧಿಪಡಿಸುವುದು ಆತಿಥ್ಯ ಉದ್ಯಮಕ್ಕೆ ಸವಾಲಿನ ಸಂಗತಿಯಾಗಿದೆ. ನಗರದ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಒಂದಾದ ಇಫಾ ಗ್ರಾಹಕರಿಗೆ ನೈರ್ಮಲ್ಯ ಮತ್ತು ಸುರಕ್ಷತೆ ಖಾತ್ರಿಗೊಳಿಸುತ್ತದೆ. ಲಾಕ್ಡೌನ್ ಸಡಿಲಿಸಿದ ನಂತರ ಜನರು ಇಫಾಗೆ ಭೇಟಿ ನೀಡಲು ಪ್ರಾರಂಭಿಸಿದ್ದಾರೆ. ಇಫಾ ಸಿಬ್ಬಂದಿ ತಮ್ಮ ಗ್ರಾಹಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಯಾವುದೇ ಕಲ್ಲನ್ನೂ ಬಿಡುವುದಿಲ್ಲ.
"ಸಾರ್ವಜನಿಕ ಪ್ರದೇಶಗಳಲ್ಲಿನ ಎಲ್ಲಾ ಟಚ್ ಪಾಯಿಂಟ್ಗಳಾದ ಡೋರ್ ಹ್ಯಾಂಡಲ್ಸ್, ಎಲಿವೇಟರ್ ಬಟನ್, ಕೌಂಟರ್ ಟಾಪ್ಸ್, ಟೇಬಲ್ ಟಾಪ್ಸ್, ರೇಲಿಂಗ್ ಇತ್ಯಾದಿಗಳನ್ನು ಸ್ಯಾನಿಟೈಸರ್ (ಸೋಂಕುನಿವಾರಕ) ಬಳಸಿ ನಿರಂತರವಾಗಿ ಸ್ವಚ್ಛಗೊಳಿಸಲಾಗುತ್ತದೆ" ಎಂದು ಸಿಬ್ಬಂದಿಯೊಬ್ಬರು ಹೇಳಿದರು.
ಈಫಾದಲ್ಲಿ ಕೈಗೊಂಡ ಸುರಕ್ಷಿತ ಮಾರ್ಗಸೂಚಿಗಳು

ಈಫಾ ಹೋಟೆಲ್ ಲಾಬಿ
ಹೋಟೆಲ್ನ ಪ್ರವೇಶ ದ್ವಾರದಲ್ಲೇ ಅತಿಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಬಿಡಲಾಗುತ್ತದೆ. ಇಲ್ಲಿನ ಸಿಬ್ಬಂದಿ ಎಲ್ಲ ಸಮಯದಲ್ಲೂ ಮಾಸ್ಕ್ ಮತ್ತು ಕೈಗವಸು ಧರಿಸುತ್ತಾರೆ, ಆಗಾಗ್ಗೆ ಅವುಗಳನ್ನು ಬದಲಿಸುತ್ತಾರೆ. ಇನ್ನು ಅಡುಗೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಪ್ರತಿ ಬಾರಿಯೂ ಸ್ವಚ್ಛವಾದ ಉಪಕರಣ ಬಳಸುತ್ತಾರೆ.
ಏಜೆನ್ಸಿಗಳು ಮತ್ತು ವೈದ್ಯರು ಎಲ್ಲಾ ಪ್ರದೇಶದ ಶುದ್ಧೀಕರಣ ಖಚಿತಪಡಿಸುತ್ತಾರೆ. ಎಲ್ಲ ಪ್ರವೇಶ ದ್ವಾರ, ರೂಮ್ಗಳು, ಹಾಲ್, ಕಾರಿಡಾರ್ ಸೇರಿದಂತೆ ಎಲ್ಲಾ ಕಡೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತದೆ. ಸಂಪೂರ್ಣ ಹೋಟೆಲ್ ಪರಿಸರ ಸೋಂಕುರಹಿತಗೊಳಿಸಲು ವೃತ್ತಿಪರವಾಗಿ ಗುರುತಿಸಲಾದ ರಾಸಾಯನಿಕಗಳನ್ನು ಹೊಂದಿರುವ ಎಲೆಕ್ಟ್ರೋಸ್ಟಾಟಿಕ್ ಸಿಂಪಡಿಸುವ ಯಂತ್ರಗಳನ್ನು ಬಳಸಲಾಗುತ್ತಿದೆ. ಅತಿಥಿಗಳ ನಡುವೆ ಸುರಕ್ಷಿತ ದೂರ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಲಾಬಿಯಲ್ಲಿನ ರೆಸ್ಟೋರೆಂಟ್ ಮತ್ತು ಆಸನಗಳನ್ನು ಸಹ ಪುನರ್ರಚಿಸಲಾಗಿದೆ.
ಅತಿಥಿ ಚೆಕ್-ಇನ್ ಸ್ವಯಂ ಘೋಷಣೆ ರೂಪವು ಕೋವಿಡ್ -19 ರೋಗಲಕ್ಷಣಗಳನ್ನು ಒಳಗೊಂಡಿದೆ. ಈ ರೋಗಲಕ್ಷಣಗಳನ್ನು ಸೂಚಿಸುವ ಯಾವುದೇ ಅತಿಥಿ ಚೆಕ್-ಇನ್ ಮಾಡುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅತಿಥಿಗಳು ಪರಿಶೀಲಿಸಿದ ನಂತರ ಕೊಠಡಿಗಳನ್ನು ಸ್ವಚ್ಛಗೊಳಿಸಿ 24 ಗಂಟೆಗಳ ಕಾಲ ಕೋಣೆಯನ್ನು ಖಾಲಿ ಬಿಟ್ಟು, ನಂತರವೇ ಮತ್ತೆ ಬೇರೆಯವರಿಗೆ ಹಂಚಲಾಗುತ್ತದೆ.
ವ್ಯವಹಾರದ ಮೇಲೆ ಲಾಕ್ಡೌನ್ ಉಂಟು ಮಾಡಿದ ಪರಿಣಾಮದ ಬಗ್ಗೆ ಸಿಬ್ಬಂದಿ ಸದಸ್ಯ ರಮೇಶ್ ಅವರನ್ನು ವಿಚಾರಿಸಿದಾ "ಲಾಕ್ಡೌನ್ ತೆರವುಗೊಳಿಸಿದ ಬಳಿಕ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಪ್ರವಾಸ ಮಾಡಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದ ಅತಿಥಿಗಳ ಸಂಖ್ಯೆ ಕಡಿಮೆಯಿದೆ ಎನ್ನುತ್ತಾರೆ.
ಅತಿಥಿಗಳು ಅಥವಾ ಸಿಬ್ಬಂದಿಗೆ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ವೈದ್ಯಕೀಯ ಪರೀಕ್ಷೆ ಮತ್ತು ವೈದ್ಯಕೀಯ ನೆರವು ನೀಡಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳು ಜಾರಿಯಲ್ಲಿವೆ. ಅತಿಥಿ ಅಥವಾ ಸಹೋದ್ಯೋಗಿಯನ್ನು ನಿರ್ಬಂಧಿಸಬೇಕಾಗುತ್ತದೆ.
ಸುರಕ್ಷಿತ ಸ್ವ-ಆರೈಕೆ

ಸಲೂನ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಬೆಳಗಾವಿಯ ಟಿಳಕವಾಡಿಯಲ್ಲಿರುವ ಲ್ಯಾಕ್ಮೆ ಸಲೂನ್ಗೆ ಲೋಕದರ್ಶನ ಪತ್ರಿಕೆ ಪ್ರತಿನಿಧಿ ಭೇಟಿ ನೀಡಿದಾಗ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಹೆಮ್ಮೆ ಎನಿಸಿತು. ಲ್ಯಾಕ್ಮೆ 55 ಕ್ಕೂ ಹೆಚ್ಚು ಶಿಫಾರಸು ಮಾಡಿದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತಂದಿದೆ. ನಮ್ಮ ಸಲೂನ್ನೊಳಗೆ ಅಪಾಯಮುಕ್ತ ವಾತಾವರಣವನ್ನು ಸೃಷ್ಟಿಸಲು ಒಳಪ್ರವೇಶಿಸುವ ಪ್ರತಿಯೊಬ್ಬರನ್ನು ಮೇಲ್ವಿಚಾರಣೆ ಮಾಡಲು ಮತ್ತು ಪ್ರದರ್ಶಿಸಲು ನಾವು ಆರೋಗ್ಯ ಸೇತು ಆ್ಯಪ್ ಬಳಸುತ್ತಿದ್ದೇವೆ. ಗ್ರಾಹಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು 55ಕ್ಕೂ ಹೆಚ್ಚು ಇತರ ಕ್ರಮಗಳನ್ನು ಹೊಂದಿದ್ದೇವೆ. ಅತ್ಯುತ್ತಮ ಸೌಂದರ್ಯ ಮತ್ತು ಸುರಕ್ಷತೆಯೊಂದಿಗೆ ಸೇವೆ ನೀಡುತ್ತಿದ್ದೇವೆ ಎಂದು ಬೆಳಗಾವಿಯ ಲ್ಯಾಕ್ಮೆ ಸಲೂನ್ನ ವ್ಯವಸ್ಥಾಪಕಿ ಕೀತರ್ಿ ಹೇಳಿದರು.
ಈಗಿನ ಕೊರನಾ ಸಂಕ್ರಮಣ ಸಮಯದಲ್ಲಿ ಲ್ಯಾಕ್ಮೆಗೆ ಭೇಟಿ ನೀಡಿದ ಪ್ರಾಚಿ ಗರ್ಗ ಅವರು, ಲಕ್ಮೆ ಸಲೂನ್ ನೈರ್ಮಲ್ಯ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ನಾನು ಲಕ್ಮೆ ಸಲೂನ್ ತಂಡದೊಂದಿಗೆ ತುಂಬಾ ಸಂತೋಷಪಟ್ಟಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.