ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಪಂಡರಿಬಾಯಿ ಅವರ ಬಗ್ಗೆ ಬರೆಯಲೇಬೇಕೆಂಬ ನನ್ನ ಹಂಬಲಕ್ಕೆ ಎರಡು ಕಾರಣಗಳಿವೆ. ಅವರು ನಮ್ಮ ಉತ್ತರ ಕನ್ನಡದ ಭಟ್ಕಳದವರು ಎನ್ನುವದೊಂದು. ಎರಡನೆಯದಾಗಿ 1940 ರ ಸುಮಾರಿಗೆ ಹೊನ್ನಾವರದ ದುಗರ್ಾಕೇರಿಯಲ್ಲಿರುವ ನಾವಿದ್ದ ಲಕ್ಷ್ಮೀನಾರಾಯಣ ದೇವಸ್ಥಾನದ ಜಗುಲಿಯ ಮೇಲೆ ತಮ್ಮ ತಂದೆ ರಂಗರಾವ್ ಅವರ ಜೊತೆ ಪಂಡರಿಬಾಯಿ ಮತ್ತು ಮೈನಾವತಿಯವರಿಬ್ಬರೂ ಬಂದು ತಂದೆಯ ಹರಿಕಥೆಯಲ್ಲಿ ( ಕೀರ್ತನೆ) ದನಿಗೂಡಿಸಿದ್ದರಂತೆ. ನನ್ನ ತಾಯಿ ಈ ವಿಚಾರವನ್ನು ಅನೇಕ ಸಲ ಹೇಳಿದ್ದುಂಟು. ( ನಾನು ಹುಟ್ಟಿದ್ದು 1944) . ಪಂಡರಿಬಾಯಿಯವರಿಗೆ ಆಗ ಸುಮಾರು ಹನ್ನೆರಡು ವರುಷವಿರಬಹುದು.
ಕನ್ನಡವಷ್ಟೇ ಏಕೆ, ಭಾರತೀಯ ಚಲನಚಿತ್ರ ರಂಗದಲ್ಲೇ ಪಂಡರೀಬಾಯಿಯವರ ಹೆಸರು ಅಜರಾಮರವಾದುದು. ಆರುನೂರಕ್ಕೂ ಹೆಚ್ಚು ಕನ್ನಡ, ತೆಲುಗು, ತಮಿಳು, ಹಿಂದಿ, ಮರಾಠಿ ಮೊದಲಾದ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿದ ಅವರು ಡಾ. ರಾಜಕುಮಾರ, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್ ಅವರಂತಹ ನಾಯಕರಿಗೆ ನಾಯಕಿಯಾಗಿಯೂ / ತಾಯಿಯಾಗಿಯೂ ಅಭಿನಯಿಸಿದವರು. 1928 ರ ಸೆಪ್ಟೆಂಬರ್ 8 ರಂದು ಜನಿಸಿದ ಅವರು 1943 ರಲ್ಲೇ ಚಿತ್ರರಂಗ ಪ್ರವೇಶಿಸಿದರು. " ವಾಣಿ" ಅವರ ಮೊದಲ ಚಿತ್ರ. ಅದಾಗಿ ಹತ್ತು ವರ್ಷಗಳ ಮೇಲೆ 1954ರಲ್ಲಿ ಡಾ. ರಾಜಕುಮಾರ ಅವರ ಮೊದಲ ಚಿತ್ರ " ಬೇಡರ ಕಣ್ಣಪ್ಪ ತೆರೆಗೆ ಬಂತು. ಪಂಡರಿಬಾಯಿಯವರೇ ನಾಯಕಿ. ಸಂತ ಸಖು, ರಾಯರ ಸೊಸೆ, ಅಬ್ಬಾ ಆ ಹುಡುಗಿ, ಗೋರಾ ಕುಂಬಾರ, ಹರಿದಾಸ, ಭಕ್ತವಿಜಯ, ಸತ್ಯಹರಿಶ್ಚಂದ್ರ, ಗುಣಸಾಗರಿ, ಚಂದ್ರಹಾಸ, ಬೆಟ್ಟದ ಹುಲಿ, ಮಹಾಸತಿ ಅನಸೂಯಾ ಭಕ್ತ ಶಬರಿ, ಸಂತ ತುಕಾರಾಮ, ಶಿವಭಕ್ತ, ಸಂಧ್ಯಾರಾಗ ಮೊದಲಾದ ನೂರಾರು ಕನ್ನಡ ಚಿತ್ರಗಳಲ್ಲಿ, ಅಲ್ಲದೆ, ಬಹಾರ, ಏಕ ಥಾ ರಾಜಾ, ಚಾಂದ್, ಭಾಭಿ, ಲೋಕ್ ಪರಲೋಕ್ ಮೊದಲಾದ ಹಿಂದಿ , ಅಸಂಖ್ಯಾತ ತಮಿಳು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ ಬಹುಭಾಷಾ ತಾರೆಯಾಗಿ ಮೆರೆದ ಅವರು ತಮ್ಮ ಸ್ವಂತದ ಪಾಂಡುರಂಗ ಪ್ರೊಡಕ್ಷನ್ ಸಂಸ್ಥೆ ಆರಂಭಿಸಿ ಸಮತ ಸಖು, ಅನುರಾಗ, ಶ್ರೀ ಕೃಷ್ಣ ಲೀಲೆ ಮೊದಲಾದ ಚಿತ್ರಗಳನ್ನು ನಿಮರ್ಿಸಿದರು.
ಭಕ್ತಿ ಮತ್ತು ಕರುಣಾರಸಗಳ ಪಾತ್ರಗಳ ಅಭಿನಯದಲ್ಲಿ ಅವರಷ್ಟು ಪರಿಣಾಮಕಾರಿಯಾಗಿ ಅಭಿನಯಿಸಿದವರು ಬೇರೆ ಯಾರಿಲ್ಲ. ಅಮ್ಮನ ಪಾತ್ರಗಳಲ್ಲಂತೂ ಅವರು ಪ್ರೇಕ್ಷಕರ ಪ್ರೀತಿಯ ಅಮ್ಮನೇ ಆಗಿಬಿಟ್ಟಿದ್ದರು. ಕನ್ನಡವಷ್ಟೇ ಅಲ್ಲ ತಮಿಳು ತೆಲುಗು ಭಾಷಿಕರಿಗೂ ಪಂಡರಿಬಾಯಿಯವರೆಂದರೆ ಅಚ್ಚುಮೆಚ್ಚಿನ ನಟಿಯೆನಿಸಿದ್ದರು. ಪಂಡರಿಬಾಯಿ ಅಪಘಾತಕ್ಕೀಡಾದಾಗ ಅವರ ಆಸ್ಪತ್ರೆ ವೆಚ್ಚವನ್ನೆಲ್ಲ ತಮಿಳ್ನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರು ತಾವೇ ನಿರ್ವಹಿಸುವದಾಗಿಹೇಳಿದ್ದರು. 2003 ಜನೆವರಿ 28 ರಂದು ಅವರು ತಮ್ಮ 74 ನೇ ವಯಸ್ಸಿನಲ್ಲಿ ನಿಧನಹೊಂದಿದರು. ಅಪಾರ ಜನಪ್ರಿಯತೆ ಗಳಿಸಿದ್ದ ಅವರಿಗೆ ಡಾ. ರಾಜ್ ಪ್ರಶಸ್ತಿ ಸಹಿತ ಹಲವು ಗೌರವಗಳು ಸಂದಿದ್ದವು.
ಪಂಡರಿಬಾಯಿಯವರ ಸಹೋದರಿ ಮೈನಾವತಿಯವರು ಸಹ 100 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮತ್ತು ಟಿವಿ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದರು.