ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ ವರಕವಿ ಬೇಂದ್ರೆಯವರು ಪಂ. ಮಲ್ಲಿಕಾಜರ್ುನ ಮನಸೂರರ ಗಾಯನವನ್ನು ಬಣ್ಣಿಸಿದ ಬಗೆ ಇದು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವೆಂದಾಗ ಮನಸೂರರ ನೆನಪು ಆಗದೇಇರದು. ಸಂಗೀತ ರಸ ಋಷಿಯಾಗಿ ಜೀವನವನ್ನೇ ಪೂತರ್ಿಯಾಗಿ ಅದಕ್ಕೆ ಅಪರ್ಿಸಿಕೊಂಡಿದ್ದ ಪಂ. ಮನಸೂರರು ಸಂಗೀತ ಕಲೆಯ ಜ್ಞಾನದ ವಿಷಯದಲ್ಲಿ ಪ್ರಭುತ್ವ ಹೊಂದಿದವರಾಗಿದ್ದರು. ಅನೇಕ ಅಪರೂಪದ ರಾಗಗಳ ಮೇಲೆ ಹಿಡಿತ ಹೊಂದಿದ್ದಲ್ಲದೇ ಹಲವು ಹೊಸ ರಾಗಗಳ ಸೃಷ್ಟಿಕರ್ತರೂ ಆಗಿದ್ದರು. ಅನಕೃ ಅವರ ಪ್ರೇರಣೆಯಿಂದ ಶರಣರ ವಚನಗಳಿಗೆ ರಾಗ ಸಂಯೋಜಿಸಿ ಹಾಡುವ ಉಪಕ್ರಮ ಜಾರಿಗೆ ತಂದರು.
1970 ರ ದಶಕದಲ್ಲಿ ನಮ್ಮ ಮಂಟಪದ ಪರವಾಗಿ ಪಂ. ಮನಸೂರರನ್ನು ಹೊನ್ನಾವರಕ್ಕೆ ಕರೆಸಲು ನಿರ್ಧರಿಸಿ ನಾನು ಅವರ ಹಿರಿಯ ಶಿಷ್ಯರಾದ ಡಾ. ರಾಜೀವ ಪುರಂದರೆ ಅವರ ಮೂಲಕ ಪ್ರಯತ್ನಿಸಿದೆ. ನಾನು ಆಗ ಪುರಂದರೆಯವರಲ್ಲಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡುತ್ತಿದ್ದೆ. ಡಾ. ಪುರಂದರೆಯವರು ಹೊನ್ನಾವರ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು. ಮನಸೂರರು ಒಪ್ಪಿಕೊಂಡು ಬಂದರು. ನ್ಯೂ ಇಂಗ್ಲಿಷ ಸಭಾಭವನದಲ್ಲಿ ಅವರ ಸಂಗೀತ ಕಚೇರಿ ನಡೆದು ಸಂಗೀತಾಸಕ್ತರ ಮನಸೂರೆಗೊಂಡಿತು. ಉತ್ತರ ಕನ್ನಡ ಜಿಲ್ಲೆಯಲ್ಲೇ ಅವರ ಕಾರ್ಯಕ್ರಮ ಅದೇ ಮೊದಲನೆಯದಾಗಿತ್ತು. ಧಾರವಾಡದಿಂದ ಬಂದು ಹೋದ ಅವರಿಗೆ ನಾವು ಆ ಸಮಯದಲ್ಲಿ ಕೊಟ್ಟಿದ್ದು ಕೇವಲ ಏಳುನೂರು ರೂ. ಗೌರವಧನ. ಅವರೇನೂ ಅದಕ್ಕಾಗಿ ಬೇಸರಗೊಳ್ಳಲಿಲ್ಲ. ನಾನು ಧಾರವಾಡದಲ್ಲಿ ಕಲಿಯುತ್ತಿದ್ದಾಗ (62-63) ಅನೇಕ ಸಲ ಅವರ ಮನೆಗೆ ಹೋಗಿದ್ದೆನಾದ್ದರಿಂದ ಆಗಲೇ ನನಗೆ ಅವರ ಒಡನಾಟ ಲಭಿಸಿತ್ತು. ಪಂ. ಮನಸೂರರದು ದೀರ್ಘ ಕಾಲದ ಸಂಗೀತ ತಪಸ್ಸು. ಅಣ್ಣ ಬಸವರಾಜ ಮನಸೂರರು ಆ ಕಾಲದ ಪ್ರಸಿದ್ಧ ರಂಗಕಲಾವಿದರು. ಅವರದೇ ವೃತ್ತಿ ನಾಟಕ ಕಂಪನಿಯೂ ಇತ್ತು. ಬಾಲ್ಯದಿಂದಲೇ ಸಂಗೀತದಲ್ಲಿ ಒಲವಿದ್ದ ಮಲ್ಲಣ್ಣ ತಮ್ಮ ಒಂಬತ್ತನೇ ವಯಸ್ಸಿಗೇ ರಂಗಕ್ಕೆ ಕಾಲಿಟ್ಟರು. ಅವರ ಸುಸ್ವರದ ರಂಗ ಗೀತೆಗಳು ಪ್ರೇಕ್ಷಕರ ಮನಸೂರೆಗೊಂಡವು. ಆದರೆ ಅವರನ್ನು ಸಂಗೀತ ಶಾರದೆ ಕೈಬೀಸಿ ಕರೆಯುತ್ತಿದ್ದಳು. ವಿಶಾಲವಾದ ಸ್ವರಸಾಮ್ರಾಜ್ಯ ಅವರಿಗಾಗಿ ಕಾಯುತ್ತಿತ್ತು. ಅವರ ಹಾಡುಗಾರಿಕೆ ಕೇಳಿದ ಹಿರಿಯ ಗಾಯಕರೇ ಅವರಿಗೆ ಸಂಗೀತ ಕಲಿಸಲು ಮುಂದೆಬಂದರು. ಆರಂಭದಲ್ಲಿ ಅಪ್ಪಯ್ಯಸ್ವಾಮಿ ಎಂಬವರಿಂದ ಕನರ್ಾಟಕಿ ಸಂಗೀತವನ್ನು ಸ್ವಲ್ಪಕಾಲ ಕಲಿತ ನಂತರ ಮಿರಜದ ನೀಲಕಂಠಬುವಾ ಅವರಲ್ಲಿ ಗ್ವಾಲಿಯರ್ ಘರಾಣಾ ಸಂಗೀತ ಶಿಕ್ಷಣ ಪಡೆದರು. ಅಷ್ಟಕ್ಕೇ ತೃಪ್ತರಾಗದ ಮನಸೂರರು ಖ್ಯಾತ ಗಾಯಕರನ್ನು ಹುಡುಕಿಕೊಂಡು ಹೊರಟರು. ಉಸ್ತಾದ ಅಲ್ಲಾದಿಯಾಖಾನ್ ರಿಂದ ಜಯಪುರ ಅತ್ರೌಲಿ ಘರಾನಾ ಗಾಯಕಿ ಕಲಿಯಲಾರಂಭಿಸಿದರು. ಮುಂದೆ ಮಂಜಿಖಾನ್, ಬುಜರ್ಿಖಾನರಲ್ಲಿ ಅಭ್ಯಾಸ ಮುಂದುವರಿಸಿದರು.
ಧಾರವಾಡ ಬಳಿಯ ಮನಸೂರು ಎಂಬ ಸಣ್ಣ ಊರಲ್ಲಿ 1910 ರ ಡಿ. 31 ರಂದು ಜನಿಸಿದ ಅವರದು ಕೃಷಿ ಕುಟುಂಬವಾದರೂ ಸಂಗೀತ ನಾಟಕಗಳ ಆಸಕ್ತಿಯಿರುವ ಮನೆತನ. ನಾಲ್ವರು ಸೋದರರು, ಮೂವರು ಸೋದರಿಯರು. ಮಲ್ಲಿಕಾಜರ್ುನ ಮನಸೂರರ ಧರ್ಮಪತ್ನಿ ಗಂಗಮ್ಮನವರು. ಅವರಿಗೂ ಏಳು ಹೆಣ್ಣು ಒಂದು ಗಂಡು. ಪುತ್ರ ರಾಜಶೇಖರ ಅವರು ಮತ್ತು ಓರ್ವ ಪುತ್ರಿ ನೀಲಮ್ಮ ಕೊಡ್ಲಿ ಅವರು ತಂದೆಯಿಂದ ಸಂಗೀತ ಕಲಿತವರು. ಮನಸೂರರ ಆತ್ಮಕಥೆ " ನನ್ನ ರಸಯಾತ್ರೆಯನ್ನು ಡಾ. ರಾಜಶೇಖರ ಅವರೇ ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಮರಾಠಿಯಲ್ಲೂ ಮನಸೂರರ ಬದುಕಿನ ಬಗ್ಗೆ ಪುಸ್ತಕಗಳು ಬಂದಿವೆ. ಮನಸೂರರು ಸಂಗೀತ ಕ್ಷೇತ್ರದಲ್ಲಿ ಯಾವ ಎತ್ತರಕ್ಕೆ ಏರಿದರೆಂದರೆ ರಾಷ್ಟ್ರದ ಮೂರು ಪದ್ಮ ಪ್ರಶಸ್ತಿಗಳ ಗೌರವ ಅವರಿಗೆ ಲಭಿಸಿದೆ. (1970 ರಲ್ಲಿ ಪದ್ಮಶ್ರೀ, 76 ರಲ್ಲಿ ಪದ್ಮಭೂಷಣ, 92 ರಲ್ಲಿ ಪದ್ಮವಿಭೂಷಣ ). ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್, ಎಚ್. ಎಂ. ವಿ. ಸಂಗೀತ ವಿಭಾಗದ ನಿದರ್ೆಶಕ ಸ್ಥಾನ, ಧಾರವಾಡ ಆಕಾಶವಾಣಿಯಲ್ಲಿ ಸಂಗೀತ ಸಲಹೆಗಾರರಾಗಿ ಇತ್ಯಾದಿ. ಮನಸೂರರ ಹಾಡುಗಾರಿಕೆ ಜನಸಾಮಾನ್ಯರ ರಂಜನೆಗಾಗಿ ಇರಲಿಲ್ಲ. ಎಲ್ಲ ರಾಗಗಳ ಮೇಲೆ ಖಚಿತವಾದ ಪ್ರಭುತ್ವ, ಹಿಡಿತ ಅವರಿಗಿತ್ತು. ಮಧುರವಾದ ಸ್ವರ, ವಿಸ್ತಾರವಾದ ರಾಗಾಲಾಪ , ಬಿಗಿಯಾದ ಲಯ, ಅಪರೂಪದ ರಾಗಗಳ ಪ್ರಸ್ತುತಿ, ಅವರ ಸಂಗೀತದ ವೈಶಿಷ್ಟ್ಯಗಳಾಗಿದ್ದವು. ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಪಾರ ಗೌರವ ಪಡೆದ ಸುಸಂಸ್ಕೃತ ವ್ಯಕ್ತಿತ್ವ ಅವರದು. ಶುದ್ಧನಟ್, ಅಸಾಜೋಗಿಯಾ, ಶಿವಮತ್ ಭೈರವ್, ಕಬೀರ ಭೈರವ್, ಖಟ್, ಹೇಮನಟ್, ಸಂಪೂರ್ಣ ಮಾಲಕಂಸ, ಲಾಜವಂತಿ, ಆದಂಬರಿ ಕೇದಾರ ಬಹಾದುರಿ ತೋಡಿ ಮೊದಲಾದ ಹೊಸ ರಾಗಗಳನ್ನು ರೂಪಿಸಿದ ಮಹಾ ಪ್ರತಿಭೆ!
1992 ರ ಸೆಪ್ಟೆಂಬರ್ 12 ರಂದು ಈ ಮಹಾಗಾಯಕನ ಸ್ವರ ನಿಂತಿತು. ಆದರೆ ಅವರ ಸಂಗೀತಕ್ಕೆ ಕೊನೆಯೆಲ್ಲಿದೆ?.
- ಎಲ್. ಎಸ್. ಶಾಸ್ತ್ರಿ