ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಜೀವ ಜಗತ್ತು ಸೃಷ್ಠಿಯಾದ ಪ್ರಾರಂಭದ ಕಾಲದಿಂದಲೂ ಪ್ರತಿಯೊಂದು ದೇಶ ಪ್ರದೇಶದ ನೆಲ ಮೂಲ ಸಂಸ್ಕೃತಿಯ ತಾಯಿ ಬೇರು ಹೆಣ್ಣೇ ಆಗಿದೆ. ಪ್ರತಿಯೊಂದು ಜೀವಸಂಕುಲದ ಜೀವನ ಕ್ರಮದಲ್ಲಿ ಹೆಣ್ಣಿನ ಜವಾಬ್ದಾರಿ ಮತ್ತು ಮಹತ್ವ ನೆಲಮೂಲ ಸಂಸ್ಕೃತಿಯನ್ನು ನಿರ್ಧರಿಸುತ್ತದೆ .
ಮಾನವನ ಜೀವನ ಗತಿಯಲ್ಲಿ ಅನಾದಿ ಕಾಲದಿಂದಲೂ ಹೆಣ್ಣು ಸಂಸಾರದ ಬಹುತೇಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ. ಉತ್ತಿ? ಬಿತ್ತಿ ? ಬೆಳೆದು? ಸಾಕಿ ಸಲಹಿದ ಉದಾಹರಣೆಗಳು ಇಂದಿಗೂ ಸಾಕ್ಷೀಭೂತವಾಗಿ ಗೋಚರಿಸುತ್ತವೆ . ಪಿ . ಲಂಕೇಶರ ಅವ್ವ ಹಾಡು? ಹಾಗೂ ದಕ್ಷಿಣ ಕನ್ನಡ ನಾಡಿನ ಮಾತೃ ಪ್ರಧಾನ ಸಂಸ್ಕೃತಿಯೇ ಕಾರಣ .ಆದರೂ ಅವರ ಅಗಾಧ ಶ್ರಮ ನಗಣ್ಯವಾದದ್ದು ವಿಪರ್ಯಾ ಸ.
ಹಿರಿಯ ಲೇಖಕರಾದ ಶ್ರೀಮತಿ ಆರ್ ಪೂರ್ಣಿಮಾ ಅವರ ಅಭಿಪ್ರಾಯದಂತೆ ಜಗತ್ತಿನ ಯಾವುದೇ ದೇಶದ ರಾಜಕೀಯ ಚರಿತ್ರೆ ಅವನದೇ ಆಗಿರುವುದು ಸಾಮಾನ್ಯ ಸಂಗತಿಯಾಗಿದ್ದು ಅವಳು ಕಾಣುವುದು ಅಪರೂಪ. ಅಲ್ಲಲ್ಲಿ ಅನಿವಾರ್ಯವಾಗಿ ಆಡಳಿತ ನಡಸಿದ ರಾಣಿಯರು ಯುದ್ದಕ್ಕೆ ಕಾರಣರಾದ ಸುಂದರಿಯರು ಸ್ಮಾರಕಗಳಿಗೆ ನೆಪವಾದ ಮಡದಿಯರು ಇಂಥವರನ್ನು ಬಿಟ್ಟರೆ ಹೆಣ್ಣಿನ ಶಕ್ತಿ? ಸಾಮಥ್ರ್ಯ ಹಾಗೂ ಧೈರ್ಯಗಳನ್ನು ಪ್ರಸ್ತಾಪಿಸಿರುವುದು ತುಂಬಾ ವಿರಳ. ಚರಿತ್ರೆ ಅವರನ್ನು ಅರಮನೆ ಹಾಗೂ ಅಡುಗೆ ಮನೆಯಲ್ಲಿರಿಸೀ ಹಿಸ್ಟರಿಯನ್ನು ಣಠಡಿಥಿ ಮಾಡಿದ್ದಾರೆ ಹೊರತು ಊಇಖ ಜಿಠಡಿಥಿ ಮಾಡಲಿಲ್ಲ ಎಂದಿದ್ದಾರೆ. ಇದು ಕೇವಲ ಇಲ್ಲಿನ ಪರಿಸ್ಥಿತಿಯಲ್ಲ? ಪ್ರತಿಯೊಂದು ನೆಲಮೂಲ ಸಂಸ್ಕೃತಿಯದ್ದೂ ಇದೆ ಗತಿ. ಸಾಂಸ್ಕೃತಿಕ ಚರಿತೆಯಲ್ಲಂತೂ ಅತಿರಥ ಮಹಾರಥರ ಮಧ್ಯೆ ಬೆಳೆದು ನಿಲ್ಲುವುದು ಸವಾಲಿನ ಸಂಗತಿ. ಆದರೂ ಕೆಲವು ಛಲದಂಕ ಮಲ್ಲರು ಇದಕ್ಕೆ ಅಪವಾದವೆಂಬಂತೆ ಬೆಳೆದು ನಿಂತು ತಮ್ಮ ಅಸ್ತಿತ್ವ ಮತ್ತು ಬದ್ದತೆಯನ್ನು ತೋರಿದ್ದಾರೆ. ರಂಗಭೂಮಿ ನಕ್ಷತ್ರವೆಂದೇ ಖ್ಯಾತರಾದ? ಗಾನ ಕೋಗಿಲೆ? ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರ್ ಅವರು ರಂಗಭೂಮಿಯಲ್ಲಿ ಬೆಂಕಿಯಲ್ಲಿ ಅರಳಿದ ಹೂವಿನಂತೆ ಬೆಳೆದು ನಿಂತರು. ಎದುರಾದ ಕಠಿಣ ಸವಾಲುಗಳನ್ನು ಗಂಡೆದೆಯಿಂದ ಎದುರಿಸಿ ಹೆಣ್ಣಿನ ಶಕ್ತಿ? ಸಾಮಥ್ರ್ಯ? ಧೈರ್ಯ ಏನೆಂಬುದನ್ನು ತಮ್ಮ ಸಾಧನೆಯ ಮೂಲಕ ತೋರಿಸಿ ಗತವೈಭವವನ್ನು ಮರುಕಳಿಸುವಂತೆ ಮಾಡಿದ್ದಾರೆ.
ಗೇಣು ಹೊಟ್ಟೆಗಾಗಿ ಬದುಕುವ ಪರಿಯನ್ನು ಬದಿಗಿರಿಸಿ ಸಾಂಸ್ಕೃತಿಕ ಲೋಕದ ಏಳಿಗೆಗಾಗಿ? ಅಗಾಧ ಸಾಧನೆ ಮಾಡುವ ಹಂಬಲದಿಂದ ಛಲದ ಬದುಕಿನಲ್ಲಿ ಪರಿಶುದ್ದತೆಯನ್ನು ತೋರಿ ವೃತ್ತಿಗೊಂದು ಘನತೆಯನ್ನು ನೀಡಿದ್ದಾರೆ. (ಕೆಸರಿನಲ್ಲಿ ಅರಳಿದ ಕಮಲದಂತೆ . ಮುಳ್ಳಿನ ನಡುವೆ ನೆಲೆ ನಿಂತ ಗುಲಾಭಿಯಂತೆ).
ಬಳ್ಳಾರಿಯ ಭಾಗ್ಯಮ್ಮ ಹಾಗೂ ಜ್ವಾಲಾಪತಿ ದಂಪತಿಗಳ ಮಗಳಾಗಿ 1939 ರಲ್ಲಿ ಜನಿಸಿದ ಕಾಡು ಹಕ್ಕಿ? ಹಾಡು - ನಟಿ ಶ್ರೀಮತಿ ಸುಭದ್ರಮ್ಮ ಮನ್ಸೂರು ಅವರು ಸ್ವತಃ ಅವರೇ ಅಂದುಕೊಂಡಿರಲಿಲ್ಲ? ತಾವು ಇಷ್ಟೊದು ಸಾಧಿಸುತ್ತೇನೆದು. ಆಂದ್ರ ಮೂಲದ ತಾಯಿ ಭಾಗ್ಯಮ್ಮ? ತಂದೆ ಜ್ವಾಲಾಪತಿ ಅವರು ತಮ್ಮ ಇಬ್ಬರೂ ಮಕ್ಕಳ ಭವಿಷ್ಯಕ್ಕಾಗಿ ಅಲೆಯದ ಕಂಪನಿಗಳಿಲ್ಲ ಕೊನೆಗೆ ಮಂಗಳೂರು ಮೂಲದ ಶ್ರೀ ಶ್ರೀಧರ ರಾವ ಅವರ ಸುಮಂಗಲ ನಾಟ್ಯ ಕಂಪನಿಯಲ್ಲಿ ಬಾಲ ನಟರಾಗಿ ಸೇರಿಸಿದರು. ಕನ್ನಡ ರಂಗಭೂಮಿ ಮತ್ತು ಸಂಗೀತದಲ್ಲಿ ಖ್ಯಾತರಾದ ಬಸವರಾಜ ಮನ್ಸೂರು ಮಲ್ಲಿಕಾರ್ಜ ನ ಮನ್ಸೂರು ಹಾಗೂ ಲಿಂಗರಾಜ ಮನ್ಸೂರು ಅವರ ಕೃಪೆಯಿಂದ ನಟನೆ ಹಾಗೂ ಹಿಂದೂಸ್ತಾನಿ ಗಾಯನದಲ್ಲಿ ಪರಿಣಿತಿ ಪಡೆದರು. ಟಿಪ್ಪುಸುಲ್ತಾನ್ ಪಠಾಣ ಪಾಶ ಕುರುಕ್ಷೇತ್ರ ಲಂಕಾದಹನ ಕಡ್ಲಿಮಟ್ಟಿ ಸ್ಟೇಷನ್ ಮಾಸ್ಟರ್ ರಕ್ತರಾತ್ರಿ ಹೇಮರೆಡ್ಡಿ ಮಲ್ಲಮ್ಮ ಮುಂತಾದ ನಾಟಕಗಳ ಸಾವಿರಾರು ಪ್ರದರ್ಶನಗಳನ್ನು ನೀಡಿ ಅಭಿನಯದ ಅನನ್ಯತೆಯನ್ನು ಮೈಗೂಡಿಸಿಕೊಂಡಿದ್ದರು.
ಅವದಾನಿ ಲಕ್ಷ್ಮಿದೇವಿ ಬಳ್ಳಾರಿ ಲಲಿತಮ್ಮ ದುತ್ತರಗಿ ಸರೋಜ ಏಣಗಿ ಲಕ್ಷ್ಮಿಬಾಯಿ? ಏಣಗಿ ಬಾಳಪ್ಪ ಪಿಟೀಲು ಚೌಡಯ್ಯ ದುರ್ಗ ದಾಸ ಮಾಸ್ಟರ್ ಹಿರಣ್ಣಯ್ಯ ಬಳ್ಳಾರಿ ವಿರುಪಾಕ್ಷಪ್ಪ ಸಿದ್ದರಾಮ ಜಂಬಲದಿನ್ನಿ ಹಾಗೂ ದ ರಾ ಬೇಂದ್ರೆಯಂಥ ಮಹನೀಯರ ಅನುಭವಗಳ ಸವಿಯನುಂಡು ಅಭಿನಯ ಹಾಗೂ ಸಂಗೀತದ ಸವಿಯನ್ನು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಕೊಂಡಿಯಂತಿದ್ದು ರಂಗಭೂಮಿಯ ವೈಭವವನ್ನು ಪುನರ್ ಸ್ಥಾಪನೆಗೆ ಕಾರಣರಾಗಿದ್ದಾರೆ .
ಖ್ಯಾತ ನಟರಾದ ಲಿಂಗರಾಜ ಮನ್ಸೂರರನ್ನು 1953 ರಲ್ಲಿ ವಿವಾಹವಾಗಿ ಹದಿನೆಂಟು ವರ್ಷಗಳ ಕಂಪನಿಗಳ ಮೂಲಕ ರಂಗ ಸೇವೆ ಮಾಡಿ 1966 ರಲ್ಲಿ ಬಳ್ಳಾರಿಗೆ ಬಂದು ನೆಲೆಸಿದರು. ನಂತರ ತಮ್ಮ ವೃತ್ತಿ ಬದುಕನ್ನು ಹವ್ಯಾಸಿ ಮತ್ತು ಗ್ರಾಮೀಣ ರಂಗಭೂಮಿ ಕಡೆ ವಾಲಿಸಿ ಸುಮಾರು 200 ಶ್ರೀರ್ಷಿಕೆಯುಳ್ಳ ಹನ್ನೆರಡು ಸಾವಿರ ಪ್ರದರ್ಶನಗಳನ್ನು ನೀಡಿದ್ದು ಅವರ ರಂಗ ಬದ್ದತೆಗೆ ಸಾಕ್ಷಿ .
ಜನರ ನಡೆ ನುಡಿ ಹಾವ ಭಾವ ವನ್ನು ಕಲಾತ್ಮಕವಾಗಿ ರಂಗದ ಮೇಲೆ ಅನುಕರಣೆ ಮಾಡುವುದೆ ಅಭಿನಯ ಇದು ಕಲಾವಿದನ ಮೂಲ ಗುಣ ಎಂಬುದನ್ನು ಚನ್ನಾಗಿ ಅರಿತಿದ್ದ ಸುಭದ್ರಮ್ಮ ಮನ್ಸೂರು ಅವರು ಗಾಯಕಿಯಾಗಿ? ನಟಿಯಾಗಿ ಎಲ್ಲಕ್ಕೂ ಮಿಗಿಲಾಗಿ ಪರಿಶುದ್ದ ಬದುಕಿನ ವ್ಯಕ್ತಿಯಾಗಿ ರಂಗಭೂಮಿಯಲ್ಲಿ ಅವಿರತ ಸೇವೆ ಮಾಡಿದ್ದಾರೆ. ಇವರ ಈ ಅನುಪಮ ಸೇವೆಯನ್ನು ಮನಗಂಡ ಸಂಘ ಸಂಸ್ಥೆಗಳು ಸರಕಾರ ಹತ್ತಾರು ಘನತೆವೆತ್ತ ಗೌರವ ಸನ್ಮಾನಗಳನ್ನು ನೀಡಿ ಗೌರವಿಸಿದೆ. ಅವರ ಸಾಧನೆಗೆ ಘನತೆ ತಂದಿದ್ದಾರೆ.
ಚಲಿಸುವ ರಂಭೂಮಿ ವಿಶ್ವ ವಿದ್ಯಾನಿಲಯದಂತಿದ್ದ ಸುಭದ್ರಮ್ಮನರು ಕಳೆದ ಜುಲೈ ತಿಂಗಳಲ್ಲಿ ನಮ್ಮನ್ನಗಲಿದರು ಎಂದು ಹೇಳಲು ದುಃಖವೆನಿಸುತ್ತದೆ. ರಂಗಭೂಮಿಗೆ ಸಂಗೀತಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾದಂತಾಗಿದೆ. ಏನೇ ಆದರೂ ಅವರ ಸಾಧನೆ ನಮ್ಮ ಸಾಧನಾ ಮಾರ್ಗಕ್ಕೆ ಬೆಳಕಾಗಲಿ ಎಂದು ಆಶಿಸುವೆ.