ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 
ಇನ್ನೇನು ಕುಲಭೂಷಣ್ ಜಾಧವರನ್ನು ಗಲ್ಲಿಗೆ ಏರಿಸೆಬಿಟ್ಟರು ಎಂಬುವಷ್ಟರಲ್ಲಿ ಭಾರತೀಯರು ಇಂಟರ್ನ್ಯಾಷನಲ್ ಕೋರ್ಟಗೆ ಹೋಗಿ ತಡೆಯಾಜ್ಞೆ ತಂದಿದ್ದು ಇಂದಿಗೂ ಬಹಳ ರೋಮಾಂಚನೀಯ. ತನ್ನ ವೈಯಕ್ತಿಕ, ಸಾಮಾಜಿಕ ಹಾಗೂ ಕೌಟುಂಬಿಕ ಜೀವನವನ್ನೆಲ್ಲಾ ಬದಿಗೊತ್ತಿ, ದೇಶಪ್ರೇಮವೆಂಬ ಹುಚ್ಚನ್ನು ದೇಹದ ನರನಾಡಿಯಲ್ಲಿ ಇರಿಸಿಕೊಂಡು, ತಾಯಿ ಭಾರತಾಂಬೆಯ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ನೀಡುವ ಈ ಮಹಾನುಭಾವರು ಎಲ್ಲಿಂದ ಬರುವರೋ ನಮಗೆ ತಿಳಿಯದು. ಅಂತಹ ಒಂದು ಅದ್ಭುತವಾದ, ಅಪ್ರತಿಮ ದೇಶಭಕ್ತನ ಕಥೆಯನ್ನು ನಾನಿಂದು ನಿಮ್ಮ ಜೊತೆ ಹಂಚಿಕೊಳ್ಳಲಿರುವೆ. ಈ ಕಥೆ ನನಗೆ ಬಹಳ ದುಃಖವನ್ನು ನೀಡಿದ್ದು ಸತ್ಯ.
ಸ್ನೇಹಿತರೆ, ಎಷ್ಟು ಜನರಿಗೆ "ಬ್ಲೆಕ್ ಟೈಗರ್ ಎಂಬ ವೀರ ಯೋಧನ ಬಗ್ಗೆ ತಿಳಿದಿದೆಯೋ ನನಗೆ ಗೊತ್ತಿಲ್ಲಾ ಆದರೆ ಈತನ ಜೀವನವನ್ನು ನೀವು ನೋಡಿದರೆ ಪ್ರಾಯಶಃ ಕಣ್ಣೀರಿನ ಹನಿಗಳು ನಿಮ್ಮ ನಿಯಂತ್ರಣ ತಪ್ಪುವುದು ನಿಜ. ಪಾಕಿಸ್ತಾನದ ಸೇನೆಯಲ್ಲಿ 'ಮೇಜರ್ ಆಗಿದ್ದವನು, ಭಾರತದ ಗೂಢಚಾರನಾಗಿದ್ದ ಎಂದರೆ ನೀವು ನಂಬುವಿರೋ? ಒಬ್ಬ ಭಾರತದ ರಂಗಭೂಮಿಯ ಕಲಾಕಾರ ಪಾಕಿಸ್ತಾನದ ರಕ್ಷಣಾ ಇಲಾಖೆಯನ್ನೇ ನೆಲಸಮ ಮಾಡಿದ್ದ ಎಂದರೆ ಬಹುಷಃ ನೀವು ನಗಬಹುದು ಆದರೆ ಇದು ಸತ್ಯ. ಬನ್ನಿ, ಒಂದು ಅದ್ಭುತವಾದ ನೈಜ ಘಟನೆಯನ್ನು ಇಂದು ನಾವು ತಿಳಿದುಕೊಳ್ಳೋಣ.
'ರವೀಂದ್ರ ಕೌಶಿಕ್ ಎಂಬ ಒಬ್ಬ ರಂಗಭೂಮಿಯ ಕಲಾಕಾರ ತನ್ನ ಅದ್ಭುತ ನಟನೆಯಿಂದ ಹೆಸರುವಾಸಿ ಆಗಿದ್ದ. ಗಂಗಾನಗರ, ರಾಜಸ್ಥಾನದಲ್ಲಿ 11 ಎಪ್ರಿಲ್ 1952 ಜನಿಸಿದ್ದ ಈತನಿಗೆ, ನಟನೆಯ ಹುಚ್ಚು ಭಯಂಕರ. ಈತನ ಅಭಿನಯವನ್ನು ಭಾರತದ ಗೂಢಚಾರಿ ಸಂಸ್ಥೆಯಾದ 'ಖಂಘ'ನ ಅಧಿಕಾರಿ ಒಬ್ಬರು ನೋಡಿದ್ದರು. ಇನ್ನು ತನ್ನ ಪ್ರೌಢಾವಸ್ತೆಯಲ್ಲಿದ್ದ ಈ ಯುವಕನನ್ನು 'ಖಂಘ' ಸಂಸ್ಥೆಯವರು ಕರೆದು, 'ನೀನು ಪಾಕಿಸ್ತಾನಕ್ಕೆ, ಭಾರತದ ಗೂಢಚಾರಿಯಾಗಿ ಹೋಗಿ, ರಾಷ್ಟ್ರದ್ರೋಹಿಗಳ ಬಗ್ಗೆ ಮಾಹಿತಿ ಕೊಡಬೇಕೆಂದು ಕೇಳಿದರು. ಇದನ್ನು ಕೇಳಿದ ರವೀಂದ್ರ ತನ್ನ ಎದೆ ಉಬ್ಬಿಸಿ ದೇಶ ಕೇಳುವುದಾದರೆ ಪ್ರಾಣವನ್ನೇ ಕೊಡುತ್ತೇನೆಂದು ತನ್ನ ದೇಶಭಕ್ತಿಯನ್ನು ಪ್ರದಶರ್ಿಸಿದ. ಯೌವ್ವನ ದೇಹಕ್ಕೆ ಹೊಕ್ಕುವ ಸಮಯಕ್ಕೆ, ದೇಶ ಸೇವೆಯೆಂಬ ಭಾವನೆಯನ್ನು ತನ್ನ ನರನಾಡಿಯಲ್ಲಿ ಹರಡಿಸಿಕೊಂಡ ಅಂತೆಯೆ ಪಾಕಿಸ್ತಾನಕ್ಕೆ ಹೋಗಲು ಒಪ್ಪಿದ.
ಈ ದಾರಿ ಸುಲಭವಿರಲಿಲ್ಲಾ. ಯಾರಿಗೂ ತನ್ನ ನರನಾಡಿಯಲ್ಲಿ ಹರಡಿಕೊಂಡ. ಅಂತೆಯೆ ಪಾಕಿಸ್ತಾನಕ್ಕೆ ಹೋಗಲು ಒಪ್ಪಿದ.
ಈ ದಾರಿ ಸುಲಭವಿರಲಿಲ್ಲಾ. ಯಾರಿಗೂ ತನ್ನ ಕೆಲಸದ ಬಗ್ಗೆ ಹೇಳುವಂತಿಲ್ಲಾ. ತನ್ನ ಸ್ನೇಹಿತರಿಗಾಗಲಿ, ತನ್ನ ತಂದೆ ತಾಯಿಗಾಗಲಿ, ತನ್ನ ಕೆಲಸದ ಬಗ್ಗೆ ತಿಳಿಸುವಂತಿರಲಿಲ್ಲಾ. ಇತ್ತ ಪಾಕಿಸ್ತಾನಕ್ಕೆ ಹೋಗಲು ಉದರ್ು ಭಾಷೆಯನ್ನು ಕಲಿಯಬೇಕಾಗಿತ್ತು. ಇವೆಲ್ಲಾ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಮನೆಯಲ್ಲಿ ದುಬೈಗೆ ಹೋಗುವುದಾಗಿ ಹೇಳಿ. ಪಾಕಿಸ್ತಾನಕ್ಕೆ ಹೋದ. ಅಲ್ಲಿನ ಖುರಾನ್ ಹಾಗೂ ಹಲವು ಸಂಪ್ರದಾಯವನ್ನು ಕರಗತ ಮಾಡಿಕೊಂಡು ಧಾರ್ಮಿಕ ಅಧ್ಯಯನಕ್ಕೆ ಹೆಚ್ಚು ಒತ್ತು ಕೊಟ್ಟ. ತನ್ನ ಹೆಸರನ್ನು ನಾಬಿ ಅಹ್ಮದ್ ಶಕೀರ್ ಎಂದು ಬದಲಾಯಿಸಿಕೊಂಡು ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಪ್ರಾರಂಭಿಸಿದ.
ಇತ್ತ ಭಾರತದಲ್ಲಿನ ತನ್ನ ದಾಖಲೆಗಳನ್ನು ನಾಶಮಾಡಿದ್ದ. ನೋಡನೋಡುತ್ತಲೇ ಕಾನೂನು ವ್ಯಾಸಂಗ ಮುಗಿಸಿಯೇ ಬಿಟ್ಟು ಮುಂದೇನು ಮಾಡಬೇಕು ಎನ್ನುವಷ್ಟರಲ್ಲಿ, ಪಾಕಿಸ್ತಾನದ ರಕ್ಷಣಾ ಇಲಾಖೆಯವರು ಸೈನ್ಯದ ನೇಮಕಾತಿಯ ಬಗ್ಗೆ ಅಧಿಸೂಚನೆ ಹೊರಡಿಸಿದ್ದರು. ಇದನ್ನು ತನ್ನ ಎರಡೂ ಕೈಗಳಿಂದ ಬಾಚಿಕೊಂಡ ರವೀಂದ್ರ, ಪಾಕಿಸ್ತಾನದ ಸೈನ್ಯಕ್ಕೆ ಸೇರಿಯೇ ಬಿಟ್ಟ. ಇತ್ತ ಭಾರತಕ್ಕೆ ಬೇಕಾದ ಮಾಹಿತಿಯನ್ನು ಕೊಡುತ್ತಲೇ ಇದ್ದ. ನೋಡು ನೋಡುತ್ತಲೇ, ಸೈನ್ಯದಲ್ಲಿ 'ಮೇಜರ್ ಸ್ಥಾನಕ್ಕೇರಿದ ರವೀಂದ್ರ ತನ್ನ ದಕ್ಷತೆ ಹಾಗೂ ಶಿಸ್ತಿಗೆ, ಪಾಕಿಸ್ತಾನದ ಸೈನ್ಯದಲ್ಲಿ ಹೆಸರುವಾಸಿಯಾದ.
'ಅಮಾನತ್ ಎಂಬ ಮಹಿಳೆಯ ಜೊತೆ ವಿವಾಹವಾದ ರವೀಂದ್ರ, ಒಂದು ಮುದ್ದು ಮಗುವಿನ ತಂದೆ ಕೂಡ ಆದ. ಭಾರತಕ್ಕೆ ಅವಶ್ಯಕ ಮಾಹಿತಿಯನ್ನು ನೀಡುತ್ತ ಬಂದಿದ್ದರಿಂದ, ಈತನ ಸಾಧನೆಯನ್ನು ನೋಡಿ ಅಂದಿನ ಪ್ರಧಾನಮಂತ್ರಿ, ಶ್ರೀಮತಿ ಇಂದಿರಾ ಗಾಂಧಿಯವರು, ರವೀಂದ್ರನಿಗೆ 'ಬೈಕ್ ಟೈಗರ್ ಎಂಬ ಬಿರುದನ್ನು ನೀಡಿದ್ದರು. ಇದರ ಮಧ್ಯದಲ್ಲಿ ತಂದೆ ತಾಯಿ ರವೀಂದ್ರನಿಗೆ ಮನೆಗೆ ಬರಲೇ ಬೇಕು ಎಂದು ಪಟ್ಟು ಹಿಡಿದಾಗ, ಪಾಕಿಸ್ತಾನದಿಂದ ದುಬೈಗೆ ತೆರಳಿ, ಭಾರತಕ್ಕೆ ಬಂದಿದ್ದ. ನಂತರ ಮತ್ತೆ ಪಾಕಿಸ್ತಾನಕ್ಕೆ ತೆರಳಿದ ರವೀಂದ್ರ ನಿರಂತರವಾಗಿ ಭಾರತಾಂಬೆಯ ಸೇವೆಯನ್ನು ಮಾಡತೊಡಗಿದ್ದ.
ಇತ್ತ ಭಾರತದವರು ಮತ್ತೊಬ್ಬ ಗೂಢಚಾರಿಯನ್ನು ಕಳಿಸಿಕೊಟ್ಟರು. ದುರಾದೃಷ್ಟ ನೋಡಿ, ಈತನು ಅಲ್ಲಿನ ಸೈನ್ಯದ ಕೈಯ್ಯಲ್ಲಿ ಸಿಕ್ಕಿಬಿಟ್ಟನು. ನರವೇದನೆ ನೀಡಿದ ಪಾಕಿಸ್ತಾನದ ಸೈನ್ಯ, ಈತನ ಬಾಯಿಯಿಂದ ಸತ್ಯ ತಿಳಿದುಕೊಂಡರು. ಪ್ರಾಯಶಃ ಒಂದು ಕ್ಷಣ ಪಾಕಿಸ್ತಾನದ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೂ ಈ ವಿಷಯ ಬೆವರಿಳಿಸಿತ್ತು. ಮುಂದೆ ರವೀಂದ್ರರನ್ನು ಹಿಡಿದು ಊಹಿಸಲಾರದಷ್ಟು ಚಿತ್ರಹಿಂಸೆ ಕೊಟ್ಟು ಗಲ್ಲಿಗೇರಿಸುವ ಶಿಕ್ಷೆ ನೀಡಿದರು. ನಂತರ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿಸಿ ಮಾರ್ಪಡಿಸಿದರು. ವಿಚಾರಣೆ ಹೆಸರಲ್ಲಿ ಎರಡು ವರ್ಷ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿದ್ದಲ್ಲದೆ, ಹಲವು ಕಾಯಿಲೆಯಿಂದ ಬಳಲುತ್ತಿದ್ದ ರವೀಂದ್ರರಿಗೆ ಸರಿಯಾದ ಚಿಕಿತ್ಸೆ ನೀಡದೆ, ಮುಲ್ತಾನ್ ಜೈಲಿನಲ್ಲಿ ಪ್ರಾಣ ತೆಗೆದರು.
ಇತ್ತ ಭಾರತದ ರಕ್ಷಣಾ ನಿಯಮದ ಪ್ರಕಾರ, ರವೀಂದ್ರರಿಗೆ ಹಾಗೂ ಭಾರತದ ರಕ್ಷಣಾ ಇಲಾಖೆಗೆ ಯಾವುದೇ ಸಂಬಂಧವಿಲ್ಲಾ ಎಂದು ಸೈನ್ಯವು ಹೇಳಿತು. ಮಗನನ್ನು ಕಳೆದುಕೊಂಡ ತಂದೆ ತಾಯಿಯ ನೋವು ಹೇಳತೀರದ್ದಾಗಿತ್ತು. ಸ್ನೇಹಿತರೆ, ಈ ಕಥೆಯ ಅಂತ್ಯ ಬಹಳ ದುಃಖ ಕೊಡುವಂತದ್ದು, ದೇಶಾಭಿಮಾನದ ಹೆಸರು ಹಾಗೂ ತ್ಯಾಗವೆಂಬ ಬೆಂಕಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಪ್ರಾಣವೆಂಬ ಹಕ್ಕಿಯನ್ನು ಹಾರಿಸಿದ್ದ ಈ 'ಬ್ಲೆಕ್ ಟೈಗರ್. ಈತನ ತಂದೆ ತಾಯಿ ಬಹಳಷ್ಟು ಬಾರಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಿ, ತಕ್ಕ ಗೌರವ ಸಂದಿಸಲು ಕೇಳಿದರು. ಶೋಚನೀಯವೆಂದರೆ ಈತನ ತ್ಯಾಗಕ್ಕೆ ಸಿಕ್ಕ ಫಲ ನೋವು, ಕಣ್ಣೀರು ಹಾಗೂ ಸಾಲ. ಇಂತಹ ಸೇವಕನನ್ನು ಪಡೆದ ತಾಯಿ ಭಾರತಾಂಬೆ ನಿಜವಾಗಿಯೂ ಅದೃಷ್ಟವಂತಳವಲ್ಲವೆ?