ಸೆ.6ರಿಂದ ‘ಜಶ್ನ್‌-ಎ-ಬಚ್ಪನ್‌’ನಲ್ಲಿ ‘ತೊತ್ತೋ-ಚಾನ್‌’ ಪ್ರದರ್ಶನ

ಸೆ.6ರಿಂದ ‘ಜಶ್ನ್‌-ಎ-ಬಚ್ಪನ್‌’ನಲ್ಲಿ ‘ತೊತ್ತೋ-ಚಾನ್‌’ ಪ್ರದರ್ಶನ  ‘Totto-chan’ to be staged at ‘Jashn-e-Bachpan’ from Sept. 6

ಲೋಕದರ್ಶನ ವರದಿ

ಬೆಳಗಾವಿ 01: ಮಕ್ಕಳ ರಂಗಭೂಮಿ ಹಾಗೂ ಕಥೆಗಳ ಉತ್ಸವ ‘ಜಶ್ನ್‌-ಎ-ಬಚ್ಪನ್‌-2026’ ಉತ್ಸವವನ್ನು ಕಲಾವಕಾಶ್ ಆರ್ಟ್‌ ಫೌಂಡೇಶನ್, ರೋಟರಿ ಕ್ಲಬ್ ಆಫ್ ಬೆಳಗಾವಿ ಸಹಯೋಗದಲ್ಲಿ ಸೆ.6, 8 ಹಾಗೂ 9ರಂದು ನಗರದಲ್ಲಿ ನಡೆಯಲಿದೆ.  

ನಗರದ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ರಂಗಭೂಮಿಯ ಅನುಭವ ನೀಡುವುದು ಉತ್ಸವದ ಉದ್ದೇಶವಾಗಿದ್ದು, ನಟಿ ಪರ್ಣ ಪೇಠೆ ಹಾಗೂ ಸಿದ್ಧೇಶ್ ಪುರಕರ್ ಅಭಿನಯದ ‘ತೊತ್ತೋ-ಚಾನ್‌’ ಮರಾಠಿ ಸಂಗೀತಮಯ ನಾಟಕ ಸೆ.6ರಂದು ಸಂಜೆ 6 ಗಂಟೆಗೆ ಶಹಾಪುರದ ಶ್ರೀಮಂತ ರಾಜಲಕ್ಷ್ಮೀ ರಾಜೆ ವಿಜಯಸಿಂಗ್ ರಾಜೆ ಪಟವರ್ಧನ್ ಶತಾಬ್ದಿ ಸಭಾಗೃಹದಲ್ಲಿ ಪ್ರದರ್ಶನಗೊಳ್ಳಲಿದೆ.  

ರವಿ ಮೋಷನ್ ಪಿಕ್ಚರ್ಸ್‌ ಪ್ರಸ್ತುತಪಡಿಸುವ ‘ತೊತ್ತೋ-ಚಾನ್‌’ ನಾಟಕವು ಜಪಾನಿನ ಲೇಖಕಿ ತೆತ್ಸುಕೊ ಕುರೊಯಾನಗಿ ಅವರ ‘ಖಿಠಣಠಅಚಿಟಿ: ಖಿಜ ಐಣಣಟಜ ಉಡಿಟ ಚಿಣ ಣಜ ಘಟಿಜಠ’ ಕೃತಿಯ ಮರಾಠಿ ರಂಗರೂಪವಾಗಿದೆ.  

ಸೆ.8 ಹಾಗೂ 9ರಂದು ಮುಂಬೈನ ಚಲಿ ಕಹಾನಿ ತಂಡದ ‘ರು ರು ರಾಗ’ ಮತ್ತು ಮಂಗಳೂರಿನ ಕಲಾಭಿ ಥಿಯೇಟರ್‌ನ ‘ಗ್ರ್ಯಾನೀಸ್ ಫೋಕ್ ಟೇಲ್ಸ್‌’ ನಾಟಕಗಳು ಶಾಲಾ ಮಕ್ಕಳಿಗಾಗಿ ಪ್ರದರ್ಶನಗೊಳ್ಳಲಿವೆ.  

ಕೆಎಲ್‌ಇ ಇಂಟರ್‌ನ್ಯಾಷನಲ್ ಸ್ಕೂಲ್, ಮಹಿಳಾ ವಿದ್ಯಾಲಯ ಮಂಡಳದ ಇಂಗ್ಲಿಷ್ ಮತ್ತು ಮರಾಠಿ ಮಾಧ್ಯಮ ಶಾಲೆಗಳು, ಎಂ.ವಿ. ಹೆರವಾಡ್ಕರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ನಿತಿನ್ ಮೊಹೋಲ್ಕರ್ ಮರಾಠಿ ಪ್ರಾಥಮಿಕ ಶಾಲೆ, ಎಸ್‌ಕೆಇ ಸೊಸೈಟಿಯ ಮರಾಠಿ ಹಾಗೂ ಕನ್ನಡ ಪ್ರಾಥಮಿಕ ಶಾಲೆಗಳು ಮತ್ತು ಕೆಎಲ್‌ಎಸ್ ಪ್ರೀ-ಪ್ರೈಮರಿ, ಪ್ರೈಮರಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.