‘ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ’

‘ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತ’ ‘The thoughts of Ambedkar and Basavanna are still relevant today': Bagalkot News

ಲೋಕದರ್ಶನ ವರದಿ 

ಬಾಗಲಕೋಟೆ ಏಪ್ರಿಲ್ 21: ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನೆಗಳು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬುನಾದಿಯ ಮೇಲೆ ನಿಂತಿರುವುದರಿಂದ ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ ಎಂದು ಸಾಹಿತಿಗಳಾದ ಡಾ ಬಸವರಾಜ ಕುಂಬಾರ ಅವರು ಅಭಿಪ್ರಾಯಪಟ್ಟರು.   

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಶಾಖೆ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ​‍್ಾಡಿಸಲಾಗಿದ್ದ ವಿಶ್ವಗುರು ಶ್ರೀ ಬಸವೇಶ್ವರರು ಹಾಗೂ ಮಹಾ ಮಾನವತಾವಾದಿ ಬಿ ಆರ್ ಅಂಬೇಡ್ಕರ್ ಅವರ ಜಯಂತೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 12ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ "ಇವ ನಮ್ಮವ" ಎಂಬ ತತ್ವವು ಹಾಗೂ 21ನೇ ಶತಮಾನದಲ್ಲಿ ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ "ವ್ಯಕ್ತಿಗೌರವ" ಎಂಬ ಚಿಂತನೆಗಳು ಸಮಾನವಾದ ಅಂಶಗಳನ್ನು ಒಳಗೊಂಡಿದ್ದು ಈ ಅಂಶಗಳ ಆಧಾರದ ಮೇಲೆ ಸಮಾಜವನ್ನು ರೂಪಿಸುವ ಅಗತ್ಯತೆ ಇದೆ ಎಂದು ತಿಳಿಸಿದರು  ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ ಅವರು ಮಾತನಾಡುತ್ತಾ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ತೆರೆಮರೆಯಲ್ಲಿ ಸಾಹಿತ್ಯದ ಕೆಲಸ ಮಾಡುತ್ತಿರುವ ಕನ್ನಡ ಭಾಷಾ ಸೇವಕರನ್ನು, ಗುರುತಿಸಿ ಅವರಿಗೆ ಗೌರವವನ್ನು ಸೂಚಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು. ಪ್ರತಿ ವರ್ಷವೂ ಅನೇಕ ದತ್ತಿ ಪ್ರಶಸ್ತಿಗಳನ್ನು ಉದಯೋನ್ಮುಖ ಕವಿ ಸಾಹಿತಿಗಳಿಗೆ ಪರಿಷತ್ತು ನೀಡುತ್ತಾ ಬಂದಿದೆ ಎಂದು ತಿಳಿಸಿದರು. ಸಾಹಿತಿಗಳು ಮತ್ತು ಸಂಶೋಧಕರಾದ ಡಾ ಎನ್ ಬಿ  ವಿರೂಪಾಕ್ಷಿ ಹಾಗೂ ಡಾ ಉಮಾ ಅಕ್ಕಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  

ಸಮಾರಂಭವನ್ನು ನಿವೃತ್ತ ಪ್ರಾಚಾರ್ಯರು ಹಾಗೂ ಸಾಹಿತಿಗಳಾದ ಜಿ ಎಸ್ ಬಿಜಾಪೂರವರು ಉದ್ಘಾಟಿಸಿದರು. ಸಮಾರಂಭದಲ್ಲಿ ನಿವೃತ್ತ ತಹಸಿಲ್ದಾರರಾದ  ಮೋಹನ್ ಕಟ್ಟಿಮನಿ. ಸಾಹಿತಿಗಳು ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ. ಮೈನುದ್ದಿನ ರೆವಡಿಗಾರ  ಹಾಗೂ ಹಿರಿಯ ಸಾಹಿತಿಗಳಾದ ಡಾ  ಪ್ರಕಾಶ ಜಿ ಕಾಡೆ ಇವರುಗಳನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿಗಳು ಆದ ಡಾ. ಆರ್ ನಾಗರಾಜು ಸ್ವಾಗತಿಸಿದರು  ನೀಲಪ್ಪ ಗಾಣಿಗೇರಾ ವಂದಿಸಿದರು ಹಾಗೂ ಪರಿಷತ್ ಗೌರವ ಕಾರ್ಯದರ್ಶಿ.ಸಿ ಎಸ್ ನಾಗನೂರ ಅವರು ಕಾರ್ಯಕ್ರಮ ನಿರೂಪಿಸಿದರು.