ಯೋಗ ಕೇವಲ ಯೋಗ ದಿನಾಚರಣೆಗೆ ಸೀಮಿತ ಬೇಡ; ಜೀವನದ ಭಾಗವಾಗಲಿ: ಹೇಮಾ ಅಂಬೆವಾಡಿಕರ

ಯೋಗ ಕೇವಲ ಯೋಗ ದಿನಾಚರಣೆಗೆ ಸೀಮಿತ ಬೇಡ; ಜೀವನದ ಭಾಗವಾಗಲಿ: ಹೇಮಾ ಅಂಬೆವಾಡಿಕರ Yoga should not be limited to Yoga Day celebrations; it should be a part of life: Hema Ambevadikar

ಕಾಗವಾಡ  22: ಯೋಗ ಕೇವಲ ಅಂತರರಾಷ್ಟ್ರೀಯ ಯೋಗ ದಿನಕ್ಕೆ ಮಾತ್ರ ಸಿಮೀತಗೊಳ್ಳದೇ ಅದು ನಮ್ಮ ಜೀವನದ ಭಾಗವಾಗಬೇಕು. ವಿದ್ಯಾರ್ಥಿಗಳು ತಮ್ಮ ಆರೋಗ್ಯ ಹಾಗೂ ಏಕಾಗ್ರತೆ ಹೆಚ್ಚಿಸಿಕೊಂಡು, ಆರೋಗ್ಯವಂತರಾಗಿ, ಅಭ್ಯಾಸದಲ್ಲಿ ಯಶಸ್ವಿಯಾಗಬೇಕಾದರೇ ಯೋಗಾಭ್ಯಾಸ ಅವಶ್ಯಕವಾಗಿದೆ ಎಂದು ಬೆಳಗಾವಿಯ ಮೈ ಯೋಗಾ ಅಕೆಡೆಮಿಯ ಯೋಗ ಗುರು ಹೇಮಾ ಅಂಬೆವಾಡಿಕರ ತಿಳಿಸಿದ್ದಾರೆ. ಅವರು, ಸೋಮವಾರ ದಿ. 22 ರಂದು ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಶ್ರೀ ಪದ್ಮಾವತಿ ವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹೇಳಿಕೊಡುತ್ತ ಮಾತನಾಡುತ್ತಿದ್ದರು. 

ಕಾರ್ಯಕ್ರಮವನ್ನು ಗಣ್ಯರು ಸಸಿಗೆ ನೀರೇರೆದು ಚಾಲನೆ ನೀಡಿದರು. ಯೋಗಗುರು ಹೇಮಾ ಅಂಬೆವಾಡಿಕರ ಮತ್ತು ಮಧು ಪರದಿ ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳನ್ನು ಮಾಡಿಸಿದರು. ಈ ವೇಳೆ ಆಗಮಿಸಿದ್ದ ಎಲ್ಲ ಯೋಗಗುರುಗಳನ್ನು, ಗಣ್ಯರನ್ನು ಸನ್ಮಾನಿಸಲಾಯಿತು. ಈ ವೇಳೆ   ಪದ್ಮಾವತಿ ವಿದ್ಯಾಲಯದ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಂದ್ರ ಕುಸನಾಳೆ, ಉಪಾಧ್ಯಕ್ಷ ಪಂಕಜ ಕುಸನಾಳೆ, ಸದಸ್ಯರಾದ ನಾಗೇಂದ್ರ ಚೌಗಲೆ, ಹರೀಷ ಕುಲಕರ್ಣಿ, ಸುಭಾಷ ಹೊಸೂರೆ, ಜವಾಹರ ಬಳೋಲ, ಆಣ್ಣಾಸಾಬ ಪಾಂಗರೆ, ಸುಹಾಸ ಕುಸನಾಳೆ, ಸಾಗರ ತ್ರಿವೇದಿ, ಬಾಹುಬಲಿ ಪಾಟೀಲ, ಚಂದ್ರಕಾಂತ ಅಕಿವಾಟೆ, ಮುಖ್ಯಾಧ್ಯಾಪಕ ಎಸ್‌.ಡಿ. ಕಾಂಬಳೆ, ಶಿಕ್ಷಕರಾದ ಎಸ್‌.ಆರ್‌. ಪೂಜಾರ, ಎಸ್‌.ವ್ಹಿ. ಹಿಪ್ಪರಗಿ, ಎಸ್‌.ಎಂ. ಜಿರಗಾಳೆ, ಎ.ಎ. ಲಗಳಿ, ಎಂ.ಎಂ. ಗಾವಡೆ, ಪ್ರೀಯಾಂಕಾ ಬಡಬಡೆ, ಪೂಜಾ ಕಾಂಬಳೆ, ದೀಪಿಕಾ ಅರಗೆ, ಉಗಾರ ಬಿಕೆ ಸರ್ಕಾರಿ ಶಾಲೆಯ ಶಿಕ್ಷಕ ಗುಲಾಬ ಮಾಂಜರೆ, ಕೆ.ವ್ಹಿ. ಕಾಂಬಳೆ, ಸೇರಿದಂತೆ ಗಣ್ಯರು, ಇನ್ನೂಳಿದ ಯೋಗ ಗುರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೀಯಾಂಕಾ ಬಡಬಡೆ ಸ್ವಾಗತಿಸಿ, ನಿರೂಪಿಸಿದರು. ದೈಹಿಕ ಶಿಕ್ಷಕ ಎಸ್‌.ಎಂ. ಜಿರಗಾಳೆ ವಂದಿಸಿದರು.