ಯಲಬುರ್ಗಾ: ಪತ್ರಕರ್ತ ಶರಣಬಸಪ್ಪ ಕೆ. ದಾನಕೈಗೆ ‘ಕರ್ನಾಟಕ ಮಾಧ್ಯಮ ರತ್ನ’ ಪ್ರಶಸ್ತಿ

ಯಲಬುರ್ಗಾ: ಪತ್ರಕರ್ತ ಶರಣಬಸಪ್ಪ ಕೆ. ದಾನಕೈಗೆ ‘ಕರ್ನಾಟಕ ಮಾಧ್ಯಮ ರತ್ನ’ ಪ್ರಶಸ್ತಿ  Yalburga: 'Karnataka Madhyama Ratna' award for journalist Sharanabasappa K. Danakai

ಯಲಬುರ್ಗಾ, ಆ.13: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಯಲಬುರ್ಗಾ ತಾಲೂಕು ಘಟಕದ ಗೌರವಾಧ್ಯಕ್ಷ, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಶರಣಬಸಪ್ಪ ಕೆ. ದಾನಕೈ ಅವರ ಪತ್ರಿಕಾ ಸೇವೆಯನ್ನು ಗುರುತಿಸಿ ‘ಕರ್ನಾಟಕ ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

ಬೆಂಗಳೂರಿನ ನೆಲಮಂಗಲದ ಪುಷ್ಪ ಭೈರೇಗೌಡ ಕನ್ವೆನ್ಷನ್ ಹಾಲ್ನಲ್ಲಿ ನಡೆದ 4ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ಪ್ರಶಸ್ತಿ ಪತ್ರ ನೀಡಿ ಶರಣಬಸಪ್ಪ ಕೆ. ದಾನಕೈ ಅವರನ್ನು ಸನ್ಮಾನಿಸಿದರು.  

ಈ ಸಂದರ್ಭದಲ್ಲಿ ಶಿವಾನಂದ ಆಶ್ರಮದ ರಾಮನಾಥ ಸ್ವಾಮೀಜಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ರಾಜ್ಯ ಉಪಾಧ್ಯಕ್ಷ ಡಾ. ಎಸ್‌.ಎಸ್‌. ಪಾಟೀಲ ಸೇರಿದಂತೆ ಸಂಸದರು, ಶಾಸಕರು, ವಿವಿಧ ಜಿಲ್ಲೆಗಳ ಸಂಘಟನೆಗಳ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಕಲಾವಿದರು ಉಪಸ್ಥಿತರಿದ್ದರು.  

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎರಡು ಸಾವಿರಕ್ಕೂ ಅಧಿಕ ಪತ್ರಕರ್ತರು ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣಬಸಪ್ಪ ಕೆ. ದಾನಕೈ ಅವರಿಗೆ ‘ಕರ್ನಾಟಕ ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.