ಸೇವಾ ಅಂಧರ ಸಂಸ್ಥೆಯಲ್ಲಿ ಸಂಭ್ರಮದ ವಿಶ್ವ ಕಿವುಡ ಮಕ್ಕಳ ದಿನಾಚರಣೆ
World Deaf Children's Day celebrated with enthusiasm at Seva Andhara Institute
ರಾಣರಬೆನ್ನೂರ 29: ಸೇವಾ ಅಂಧರ ಸಂಸ್ಥೆ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ ವಸತಿ ಶಾಲೆ, ಮತ್ತು 0 ದಿಂದ 4 ವರ್ಷದೊಳಗಿನ ಶ್ರವಣದೊಷವುಳ್ಳ ಮಕ್ಕಳು ಮತ್ತು ಅವರ ತಾಯಂದಿರ ಸಹಿತ ವಾಕ್ ತರಬೇತಿ ಕೇಂದ್ರ ಹಾಗೂ “ಉಜ್ವಲ” ಮಹಿಳೆ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ ಯೋಜನೆ ರಾಣೇಬೆನ್ನೂರು ಇವುಗಳ ಸಂಯುಕ್ತ ಆಶ್ರಯದಲ್ಲಿ “ವಿಶ್ವ ಕಿವುಡ ಮಕ್ಕಳ ದಿನಾಚರಣೆಯನ್ನು” ಆಚರಿಸಲಾಯಿತು. ಮೆರವಣಿಗೆಯನ್ನು ಕೆ.ಇ.ಬಿ ಗಣೇಶ ದೇವಾಸ್ಥಾನದಿಂದ ಮೆರವಣೆಗೆಯನ್ನು ಸನ್ಮಾನ್ಯ ಶ್ರೀ ಗಡ್ಡೆಪ್ಪ ಗುಂಜಟಗಿ ಪಿ.ಎಸ್.ಐ ಶಹರ ಪೋಲಿಸ್ ಠಾಣೆ ರಾಣೇಬೆನ್ನೂರು ಇವರು ಮೆರವಣಿಗೆ ಉದ್ಘಾಟಿಸಿ ವಿಶ್ವ ಕಿವುಡ ಮಕ್ಕಳ ದಿನಾಚರಣೆಯ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಮೆರವಣೆಗೆಯಲ್ಲಿ ಭಾಜಾ ಭಜಂತ್ರಿಯನ್ನು ಭಾರಿಸುತ್ತಾ ರಾಣೇಬೆನ್ನೂರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಶಾಲಾ ಆವರಣದವರೆಗೂ ಭಿತ್ತಿ ಪತ್ರಗಳನ್ನು ಹಂಚುವುದರ ಮೂಲಕ ವಿಕಲಚೇತನರ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲಾಯಿತು.
ವೇದಿಕೆ ಕಾರ್ಯಕ್ರಮವನ್ನು ಸಂಜೆ 4:30 ಕ್ಕೆ ಕಾಕಿ ಜನಸೇವಾ ಸಂಸ್ಥೆ ಗಣೇಶೋತ್ಸವ ಮಂಟಪ ಮಿನಿ ವಿಧಾನಸೌದ ಹತ್ತಿರ ಮಾರುತಿ ನಗರದಲ್ಲಿ ಏರಿ್ಡಸಿದ್ದು, ದಿವ್ಯಸಾನಿದ್ಯವನ್ನು ವಹಿಸಿದ್ದ ಮಹಾಂತ ಸ್ವಾಮಿಗಳು, ಗುರು ಮೂಕಪ್ಪ ಶಿವಯೋಗಿಗಳ ಮಠ ಜಂಗಮಕ್ಷೇತ್ರ ತಿಪ್ಪಾಯಿಕೊಪ್ಪದ ಮಹಾಸ್ವಾಮಿಗಳವರು, ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ, ಈಗಿನ ಕಾಲದಲ್ಲಿ ಅಂಗವಿಕಲತೆ ಹೆಚ್ಚಾಗಿ ಕಾಣುತ್ತದೆ ಇದಕ್ಕೆ ಕಾರಣ ಅನುವಂಶಿಯತೆ ಅಂದರೆ ತಂದೆ-ತಾಯಿಗಳು ಆರೋಗ್ಯವಂತರಾಗಿ ದುಶ್ಚಟಗಳಿಂದ ದೂರವಾದರೆ ವಿಕಲತೆ ಪ್ರಮಾಣ ಹೆಚ್ಚು ಕಂಡುಬರುವುದಿಲ್ಲ, ಒಳ್ಳೆಯ ನಡೆ-ನುಡಿಗಳಿಂದ ಇದ್ದರೆ ಮುಂದೆ ಜನಿಸುವ ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆದು ಬದುಕುತ್ತವೆ. ಮೌನಾಚರಣೆಯ ಒಂದು ಉದಾಹರಣೆ ಕೊಟ್ಟು ಈ ಮಕ್ಕಳ ಮನಸ್ಸು ಶುದ್ದಿಯಾಗಿದೆ, ಈ ಮಕ್ಕಳು ದೇವರ ಮಕ್ಕಳು ಎಂದು ತಿಳಿಯ ಪಡಿಸಿದರು. ಹಾಗೂ ಅಧ್ಯಕ್ಷತೆಯನ್ನು ಕಾರ್ಯದರ್ಶಿಗಳಾದ ರೇಣುಕಾ ಶಿವಕುಮಾರ, ಇವರು ವಹಿಸಿದ್ದರು.
ಸೇವಾ ಅಂಧರ ಸಂಸ್ಥೆಯ ಅಧ್ಯಕ್ಷರಾದ, ಹೆಚ್ ಆರ್ ಶಿವಕುಮಾರ, ಮಾತನಾಡಿ ಸಂಸ್ಥೆಯ ಆರಂಭದಿಂದ ಇಲ್ಲಿಯವರೆಗೂ 35 ವರ್ಷಗಳ ಶ್ರಮ ಸಾಧನೆ ಹೊರಾಟಗಳ ಬಗ್ಗೆ ವಿವರಿಸಿದರು. ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀ ಮೌನೇಶ ಹೆಚ್ ಬಡಿಗೆರ, ಜಿಲ್ಲಾ ಅಂಗವಿಕಲ ಸಂಘದ ಉಪಾಧ್ಯಕ್ಷರು ಹಾವೇರಿ, ಇವರು ಸಂಸ್ಥೆಯು 35 ವರ್ಷಗಳಿಂದ ನಡೆದು ಬಂದ ಏಳಿಗೆಯ ಬಗ್ಗೆ ತಿಳಿಸಿ ಈ ಮಕ್ಕಳ ಸೇವೆ ದೇವರ ಸೇವೆ ಎಂದು ಹೇಳಿದರು. ಶ್ರೀ ಹನುಮಂತಪ್ಪ ಕಬ್ಬರ ಕರ್ನಾಟಕ ರೈತ ಸಂಘದ ಅಧ್ಯಕ್ಷರು, ಇವರು ಮಾತನಾಡಿ ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ಅಷ್ಟು ಸುಲಭವಲ್ಲ ಕಳೆದ 35 ವರ್ಷಗಳಿಂದ ನಡೆಸುಕೊಂಡ ಬಂದ ಶ್ರೀ ಶಿವಕುಮಾರವರು ತಮ್ಮ 72 ನೇ ವಯಸ್ಸಿನಲ್ಲೂ ನಡೆಸಿಕೊಂಡು ಬಂದಿದ್ದು ಅವರ ಸಾರ್ಥಕತೆ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಶ್ರೀ ಶೇಖಣ್ಣ ಹೊಸಗೌಡ್ರ, ಸದಸ್ಯರು ನಗರ ಸಭೆ, ಸಂಸ್ಥೆಯು 35 ವರ್ಷ ನಡೆಸುಕೊಂಡು ಬಂದಿದ್ದು 25 ಮಕ್ಕಳಿಂದ ಆರಂಭಿಸಿ ಈಗ 150 ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ತುಂಬಾ ಸಂತೋಷದ ವಿಷಯ ಮತ್ತು ಅಧ್ಯಪಕರ ಶ್ರಮದ ಬಗ್ಗೆ ಮಾತನಾಡಿ ಮಕ್ಕಳ ಬೆಳವಣಿಗೆ ಬಗ್ಗೆ ಹಾಗೂ ನಗರ ಯೋಜನಾ ಪ್ರಾಧಿಕಾರದಿಂದ ನಮ್ಮ ಸಂಸ್ಥೆಗೆ 6 ಗುಂಟೆ ಜಾಗ ಮಂಜೂರಾದ ಮಾಹಿತಿ ನೀಡಿ, ಕಟ್ಟಡ ನಿರ್ಮಾಣ ಮಾಡಲು ಸಹಕರಿಸುವುದು ನಮ್ಮ-ನಿಮ್ಮೇಲ್ಲರ ಕರ್ತವ್ಯ ಎಂದರು. ಮಂಜುನಾಥ ದುಗ್ಗತ್ತಿ ಕರ್ನಾಟಕ ಜಾಗೃತಿ ವೇದಿಕೆಯ ಅಧ್ಯಕ್ಷರು, ಬಸವರಾಜ ಎಮ್ಮೆರ ಕಿ.ಆ.ಸ ಸುಣಕಲ್ಲಬಿದರಿ, ಶ್ರೀಮತಿ ಪಾತಿಮಾ ಇಂದುಪುರ ಸಮಾಜ ಸೇವಕಿ ರಾಣೇಬೆನ್ನೂರು, ಕೊಟ್ರೇಶ ಎಮ್ಮಿ ಕಾರ್ಯದರ್ಶಿಗಳು ಸ್ವಾಭಿಮಾನಿ ಕ.ರಾ.ವೇ ಸಂಘ ರಾಣೇಬೆನ್ನೂರು ಇವರೆಲ್ಲರು ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು. ಶ್ರವಣದೋಷವುಳ್ಳ ಮಕ್ಕಳ ದಿನಾಚರಣೆಗಾಗಿ ಊಟದ ವ್ಯವಸ್ಥೆ ಹಾಗೂ ಉಪಹಾರವನ್ನು ಶ್ರೀ ವಿಷ್ಣುಸಾ ಪೂಜಾರಿ ಹಾಗೂ ಶ್ರೀ ಬಸವರಾಜ ಎಮ್ಮೆರ ಮಾಡಿಸಿದ್ದರು. 0 ದಿಂದ 4 ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳು ಮತ್ತು ಅವರ ತಾಯಂದಿರುಗಳು ಹಾಗೂ ವಿದಾರ್ಥಿಗಳ ಪಾಲಕರು- ಪೋಷಕರು ಸಾರ್ವಜನಿಕರು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಶ್ರವಣನ್ಯೂನ್ಯತೆವುಳ್ಳ ಮುದ್ದು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೇದವು, ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತವಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸೇವಾ ಅಂಧರ ಸಂಸ್ಥೆಯ ನೂತನ ಘಟಕವಾದ ತಾಯಂದಿರ ಸಹಿತ ಶ್ರವಣನ್ಯೂನ್ಯತೆವುಳ್ಳ ಮಕ್ಕಳ ಮಾತಿನ ತರಬೇತಿ ಕೇಂದ್ರದ ಮುದ್ದು ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಿಸಿದ್ದರು.
ಶಾಲೆಯ ಅಭಿವೃದ್ದಿಗಾಗಿ ಸಹಕರಿಸಿದ ಸಮಾಜ ಸೇವಕರು ನಾಗರಿಕರು ಹಾಗೂ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 