ಢಾಕಾ, ಜ 10 ಪ್ರಸ್ತುತ ಪಾಕಿಸ್ತಾನವು ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ" ಎಂದು ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಭಿಪ್ರಾ ಯಪಟ್ಟಿದ್ದಾರೆ. "ಪಾಕಿಸ್ತಾನವು ಇದೀಗ ವಿಶ್ವದ ಸುರಕ್ಷಿತ ಸ್ಥಳಗಳಲ್ಲಿ ಒಂದಾಗಿದೆ. ನೀವು ಅಧ್ಯಕ್ಷೀಯ ಭದ್ರತೆಯನ್ನು ಪಡೆಯುತ್ತೀರಿ ಎಂದು ಅವರು ಹೇಳುತ್ತಾರೆ, ಆದ್ದರಿಂದ, ನೀವು ಉತ್ತಮ ಸ್ಥಳದಲ್ಲಿ ಇರಲಿದ್ದೀರಿ. ನನ್ನ ಪ್ರಕಾರ ನಾವು ಬಾಂಗ್ಲಾದೇಶದಲ್ಲೂ ಉತ್ತಮ ಭದ್ರತೆಯೊಂದಿಗೆ ಇದ್ದೇವೆ. ಪ್ರಸ್ತುತ ಚೋಟೋಗ್ರಮ್ ಚಾಲೆಂಜರ್ಸ್ ಪರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಗೇಲ್ ಮಾಧ್ಯಮ ಸಂವಾದದಲ್ಲಿ ಈ ರೀತಿ ಹೇಳಿದ್ದಾರೆ.10 ವರ್ಷಗಳ ಬಳಿಕ ಶ್ರೀಲಂಕಾ ಇತ್ತೀಚೆಗೆ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಂಡ ಮೊದಲ ತಂಡವಾಯಿತು. ಸರಣಿಯ ಪರಾಕಾಷ್ಠೆಯ ನಂತರ, ಪಾಕಿಸ್ತಾನ ಸುರಕ್ಷಿತವಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮಣಿ ಹೇಳಿದ್ದಾರೆ."ಪಾಕಿಸ್ತಾನ ಸುರಕ್ಷಿತವಾಗಿದೆ ಎಂದು ನಾವು ಸಾಬೀತುಪಡಿಸಿದ್ದೇವೆ, ಯಾರಾದರೂ ಬರದಿದ್ದರೆ ಅದು ಅಸುರಕ್ಷಿತ ಎಂದು ಅವರು ಸಾಬೀತುಪಡಿಸಬೇಕು. ಈ ಸಮಯದಲ್ಲಿ, ಭಾರತವು ಪಾಕಿಸ್ತಾನಕ್ಕಿಂತ ಹೆಚ್ಚಿನ ಭದ್ರತಾ ಅಪಾಯವಾಗಿದೆ" ಎಂದು ಮಣಿ ಹೇಳಿದರು."ಶ್ರೀಲಂಕಾ ಯಶಸ್ವಿ ಟೆಸ್ಟ್ ಸರಣಿಯ ನಂತರ ಪಾಕಿಸ್ತಾನದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಯಾರೂ ಅನುಮಾನಿಸಬಾರದು. ಇದು ಪಾಕಿಸ್ತಾನದಲ್ಲಿ ಟೆಸ್ಟ್ ಕ್ರಿಕೆಟ್ ಪುನರುಜ್ಜೀವನಕ್ಕೆ ಮಹತ್ವದ ತಿರುವು. ವಿಶ್ವದಾದ್ಯಂತ ಪಾಕಿಸ್ತಾನದ ಸಕಾರಾತ್ಮಕ ಚಿತ್ರಣವನ್ನು ಚಿತ್ರಿಸುವಲ್ಲಿ ಮಾಧ್ಯಮಗಳು ಮತ್ತು ಅಭಿಮಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ" ಎಂದು ಅವರು ಹೇಳಿದರು.ಈಗ ಪಿಸಿಬಿ ಮೂರು ಟಿ 20 ಮತ್ತು ಎರಡು ಟೆಸ್ಟ್ ಪಂದ್ಯಗಳಿಗೆ ಬಾಂಗ್ಲಾದೇಶವನ್ನು ಆಹ್ವಾನಿಸಿದೆ. ಆದರೆ, ಬಾಂಗ್ಲಾದೇಶ ಇನ್ನೂ ತನ್ನ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.