ಮಹಿಳಾ ಮೀಸಲಾತಿ ಬಗ್ಗೆ ಅಪಪ್ರಚಾರ ; ಮಹಿಳಾ ಮುಖಂಡರ ಆರೋಪ
Women leaders allege propaganda about women's reservation
ಗದಗ 29 : ಮಹಿಳಾ ಮೀಸಲಾತಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ಮುಖಂಡರ ಆರೋಪಗಳನ್ನು ಖಂಡಿಸಲು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಮುಖಂಡರು ಪತ್ರಿಕಾ ಗೋಷ್ಠಿ ನಡೆಸುತ್ತಿರುವುದಾಗಿ ಶಿರಹಟ್ಟಿ ಮತಕ್ಷೇತ್ರದ ಪರಾಜಿತ ಅಭ್ಯರ್ಥಿ ಸುಜಾತಾ ದೊಡ್ಡಮನಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕ್ಷೇತ್ರ ಮರುವಿಂಗಡಣೆ ಮಾಡದೇ ಈಗಿರುವ ಸಂಖ್ಯೆಯ ಯಥಾಸ್ಥಿತಿಯನ್ನ ಕಾಯ್ದುಕೊಂಡು ಮಿಸಲಾತಿ ಮಾಡಿದರೆ ನಮ್ಮ ಅಭ್ಯಂತರ ಏನು ಇಲ್ಲ. ಮಹಿಳೆಯರ ಮನ ಒಲಿಸಲು ಮಹಿಳಾ ಮೀಸಲಾತಿ ತಂದಿದ್ದು ಮಹಿಳೆಯರಿಗೆ 5 ಗ್ಯಾರಂಟಿ ನೀಡಿದ್ದು ಕಾಂಗ್ರೆಸ್ ಸರಕಾರ.
ಮಹಿಳಾ ಮಿಸಲಾತಿ ಸೂದೆಯನ್ನ ಮುಂದಿಟ್ಟುಕೊಂಡು ಕ್ಷೇತ್ರಗಳ ಮರು ವಿಂಗಡಣೆ ಮಾಡಿ ಆದೇಶ ಹೊರಡಿಸಿರುವುದನ್ನ ನಾವು ಖಂಡಿಸುತ್ತೇವೆ.ಮಹಿಳೆಯರ ಅನೇಕ ಬೇಡಿಕೆಗಳನ್ನ ಕಾಂಗ್ರೆಸ್ ಪಕ್ಷ ಈಡೇರಿಸಿ ಪುಣ್ಯ ಸ್ಥಳಗಳ ಬೇಟಿಗೆ ಅವಕಾಶ ಕಲ್ಪಸಿ ಆರ್ಥಿಕವಾಗಿ ಮಹಿಳೆಯರ ಬದುಕು ಚಿಗುರುವಂತೆ ಗೌರವ ತಂದು ಕೊಡ್ಟಿದ್ದು ನಮ್ಮ ಪಕ್ಷ ಎಂದು ಸುಜಾತ ದೊಡ್ಡಮನಿ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರುಗಳಾದ ಸ್ವಾತಿ ಮಾಳಗಿ, ಸುರೇಖಾ, ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಗದಗ ಜಿಲ್ಲಾಧ್ಯಕ್ಷೆ ನೀಲಮ್ಮ ಬೋಳನ್ನವರ, ಜಯಕ್ಕ ಕಳ್ಳಿ, ನಾಜಿಯಾಬೇಗಂ ಎಲಿಗಾರ, ದಾನೇಶ್ವರಿ ಭಜಂತ್ರಿ, ಉಮಾ ದ್ಯಾವನೂರ, ಶೋಭಾ ದೇಸಳ್ಳಿ, ವೀಣಾ ಕಟ್ನಳ್ಳಿ ಸೇರಿದಂತೆ ಇತರರಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 