ಮಹಿಳೆಯರಿಗೆ ಬಸವಣ್ಣನವರ ಸ್ತ್ರೀಪರ ಹೋರಾಟದಿಂದ ಸ್ವಾತಂತ್ರ್ಯ ಪ್ರಾಪ್ತಿ’
Women gained freedom through Basavanna's struggle for women's rights.
‘ಮಹಿಳೆಯರಿಗೆ ಬಸವಣ್ಣನವರ ಸ್ತ್ರೀಪರ ಹೋರಾಟದಿಂದ ಸ್ವಾತಂತ್ರ್ಯ ಪ್ರಾಪ್ತಿ’
ಹುಬ್ಬಳ್ಳಿ 03: ಇಡೀ ವಿಶ್ವದ ಮಹಿಳೆಯರಿಗೆ ಶ್ರೀಗುರು ಬಸವಣ್ಣನವರ ಸ್ತ್ರೀಪರ ಹೋರಾಟದ ಕಾರಣದಿಂದಲೇ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ, ಆಧ್ಯಾತ್ಮಿಕ ರಂಗಗಳಲ್ಲಿ ಸ್ವಾತಂತ್ರ ಪ್ರಾಪ್ತವಾಯಿತು ಎಂದು ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ್ ಅಭಿಪ್ರಾಯಪಟ್ಟರು.ಅವರು ನಗರದ ಗೋಕುಲ್ ರಸ್ತೆಯ ವೆಂಕಟಗಿರಿ ಲೇ ಓಟ್ ದಲ್ಲಿ ಲಿಂಗಾಯತ ಧರ್ಮ ಮಹಾಸಭೆಯ ಬಸವಾನುಭವ ಮಂಟಪದಲ್ಲಿ ರವಿವಾರ ಮುಂಜಾನೆ 11ಘಂಟೆಗೆ ಏರಿ್ಡಸಿದ್ದ "ಬಸವ ಪಂಚಮಿ" ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು ಪಾಲಕರು ಮಕ್ಕಳಿಗೆ ವಚನಗಳನ್ನು ಹೇಳಿಕೊಟ್ಟರೆ ಮಕ್ಕಳು ಕುಟುಂಬಕ್ಕೂ, ಸಮಾಜಕ್ಕೂ ಆಸ್ತಿಯಾಗುತ್ತಾರೆ ಎಂದರುಹಿರಿಯ ಉದ್ಯಮಿ ಬಿ. ಜಿ. ಹೊಸಗೌಡರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭ ದಲ್ಲಿ ಹುಬ್ಬಳ್ಳಿಯ "ಚನ್ನಬಸವಸಾಗರ ಹೋರಾಟ ಸಮಿತಿ ಮುಖಂಡ ಬಸವರಾಜ್ ಹುಲ್ಲೋಳಿ ಮಾತನಾಡಿ "ಇಷ್ಟಲಿಂಗ ಪೂಜೆಯನ್ನು ಯಾವತ್ತೂ ಲಿಂಗಾಯತ ಧರ್ಮ ಭಾಂಧವರು ಯಾವತ್ತೂ ಮರೆಯಬಾರದು, ಮಕ್ಕಳಿಗೆ ಪೂಜಾ ಸಂಸ್ಕಾರ ಕಲಿಸಬೇಕು"ಎಂದರುಜಾಗತಿಕ ಲಿಂಗಾಯತ ಮಹಾಸಭಾ ಹುಬ್ಬಳ್ಳಿ ಘಟಕದ ಅಧ್ಯಕ್ಷ ಎಸ್. ಬಿ. ಜೋಡಳ್ಳಿ ಪ್ರಾರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದರು.
ಬಿ.ಬಿ. ಲಕ್ಷ್ಮೇಶ್ವರ, ಎಫ್. ಕೆ. ಬಣಕಾರ್, ಬಿಸಿ. ಕೆಲಗೇರಿ, ಡಾ.ಬಸವರಾಜ್ ದೇಸಾಯಿ, ನೀಲಪ್ಪ ಹಿರೇಗುಂಜಾಳ್ ಉಪಸ್ಥಿತರಿದ್ದರುಶ್ರೀಮತಿ ಸುನೀತಾ ಜೋಡಳ್ಳಿ ವಂದನಾರೆ್ಣ ಮಾಡಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 