ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ

ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ Women's primacy in social reform


        ಶಿಗ್ಗಾವಿ  03: ಸಮಾಜ ಸುಧಾರಣೆಯಲ್ಲಿ ಮಹಿಳಾ ಪ್ರಾಧಾನ್ಯತೆ ಬಹಳ್ಟು ಮುಂಚೂಣಿಯಲ್ಲಿದ್ದು ಮಹಿಳಾ ಸಮುದಾಯ ಅಭಿವೃದ್ಧಿಯಾಗಬೇಕಾದರೆ ಮೊದಲಿಗೆ ಮನುಷ್ಯ ಸಂಬಂಧ ಗಟ್ಟಿಗೊಳ್ಳಬೇಕು. ಇಂದಿನ ಕಾಲಘಟ್ಟದಲ್ಲಿ ಜಾತೀಯ ಸಂಘಟನೆಗಳ ಅವಶ್ಯಕತೆ ಎದ್ದು ಕಾಣುತ್ತಿದೆ. ಮಹಿಳೆಯರು ಜಾಗೃತರಾಗಿ ಸರ್ವ ಸಮುದಾಯದ ಮಹಿಳಾ ಸಂಘಗಳ ಮೂಲಕ ಮುಂದೆ ಬಂದಾಗ ಪ್ರಗತಿ ಕಾಣಲು ಸಾಧ್ಯವಿದೆ ಎಂದು ಶಿಗ್ಗಾವಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ವಿನೋಧಾ ಪಾಟೀಲ ಹೇಳಿದರು. 
ಪಟ್ಟಣದ ಪತ್ರಿ ಬಸವೇಶ್ವರ ದೇವಸ್ಥಾನದಲ್ಲಿ ನೂತನ ವಿಶ್ವ ಶಾಂತಿ ಮಹಿಳಾ ಸಂಘವನ್ನ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಂಘಗಳು ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ಮತ್ತು ಆರ್ಥಿಕ ಅಭಿವೃದ್ಧಿಯ ಗುರಿಯೊಂದಿಗೆ ನಡೆಯುತ್ತಿವೆ, ಅದೇ ರೀತಿ ಈ ವಿಶ್ವಶಾಂತಿ ಮಹಿಳಾ ಸಂಘವೂ ಸಹಿತ ಕೌಟುಂಬಿಕ ನಿರ್ವಹಣೆಯ ಜೊತೆಗೆ ಸದಾ ಮಹಿಳೆಯರ ಶ್ರೇಯೋಭಿವೃದ್ದಿಗೆ ಪೂರಕವಾಗಿ ಯಶಸ್ಸು ಕಾಣಲಿ ಎಂದರು. 
ಈ ವಿಶ್ವ ಶಾಂತಿ ಮಹಿಳಾ ಸಂಘದ ಅದ್ಯಕ್ಷೆ ನೇತ್ರಾವತಿ ಶಿರೋಳ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು, ಸ್ವಾವಲಂಬನೆಗೆ ಪ್ರೋತ್ಸಾಹ ನೀಡುವುದು, ಸಹಕಾರಿ ಚಟುವಟಿಕೆಗಳ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸುವುದು ಸಂಘದ ಮುಖ್ಯ ಉದ್ದೇಶವಾಗಿದ್ದು ಸದಸ್ಯರ ಒಗ್ಗಟ್ಟಿನಿಂದ ಎಲ್ಲವೂ ಸಾದ್ಯವಿದೆ ಎಂದರು. 
ವಿಶ್ವ ಶಾಂತಿ ಮಹಿಳಾ ಸಂಘದ ಕಾರ್ಯದರ್ಶಿ ಚಂದ್ರಕಲಾ ತೆಂಬದಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಪತ್ರಿ ಬಸವೇಶ್ವರ ದೇವಸ್ಥಾನ ಸಮೀತಿ ಅದ್ಯಕ್ಷ ಕಾಳಿಂಗಪ್ಪ ಕೋಣಪ್ಪನವರ, ಕಾರ್ಯದರ್ಶಿ ವಿ ಎಫ್ ಹೊಸಮಣಿ, ಖಜಾಂಚಿ ಲಲಿತಾ ಕುಲಕರ್ಣಿ, ರೇಣುಕಾ ಗುಡ್ಡದಅನ್ವೇರಿ, ಶಕುಂತಲಾ ಪತ್ತಾರ, ಸೇರಿದಂತೆ ಸಂಘದ ಮಹಿಳಾ ಸದಸ್ಯರು ಇದ್ದರು, ಸದಸ್ಯೆ ಶಕುಂತಲಾ ಪತ್ತಾರ ಪ್ರಾರ್ಥಿಸಿದರು, ಸದಸ್ಯೆ ಕಾವ್ಯಾ ಬಸರೀಕಟ್ಟಿ ನಿರೂಪಿಸಿದರು, ಸದಸ್ಯೆ ಶೋಭಾ ಸಂಶಿ ವಂದಿಸಿದರು.