ರಾಣೇಬೆನ್ನೂರಲ್ಲಿ ಡಿಸೆಂಬರ್ 3 ರಂದು ಮಹಿಳಾ ಪಥ ಸಂಚಲನ
Women's march in Ranebennur on December 3rd
ರಾಣೇಬೆನ್ನೂರು 02: ದೇಶ ಮತ್ತು ನಾಡಿನಲ್ಲಿ ಇಂದು ನಿತ್ಯವೂ ಮಹಿಳಾ ದೌರ್ಜನ್ಯ ನಡೆಯುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಅದಕ್ಕಾಗಿ ವಿಶ್ವ ಸಂಸ್ಥೆಯು ಮಹಿಳಾ ದೌರ್ಜನ್ಯ ತಡೆಯುವ ಕುರಿತು ಜನಜಾಗ್ರತಿ ಅರಿವು ಮೂಡಿಸಲು ಮಹಿಳಾ ಪಥ ಸಂಚಲನ ಆಯೋಜಿಸಲಾಗಿದೆ ಎಂದು ಇನ್ನರ್ವಿಲ್ ಸೇವಾ ಸಂಸ್ಥೆಯ ಅಧ್ಯಕ್ಷ ಡಾ. ದೀಪಾ ರೂಪಾಲಿ ಹೇಳಿದರು. ಅವರು, ಸೋಮವಾರ ಕಾಕಿ ಜನ ಸೇವಾ ಸಂಸ್ಥೆ ಭವನದಲ್ಲಿ ಏರಿ್ಡಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ವಿಶ್ವಸಂಸ್ಥೆಯ ಮಾಹಿತಿ ಮತ್ತು ಮಾರ್ಗದರ್ಶನದ ಅನ್ವಯ ಗಂಡು-ಹೆಣ್ಣು, ಭೇದ ಭಾವ, ಇಲ್ಲ. ಎಲ್ಲರೂ ಸಮಾನರೆ. ಸಮಾಜದಲ್ಲಿರುವ ಕೆಲವೆ, ಕೆಲವು ಅನಾಗರಿಕರಿಂದ ಇಂದು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಸಾಮಾನ್ಯವಾಗಿದೆ.. ಈ ಕುರಿತು ಜಾಗೃತಿ ಮತ್ತು ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದರು.
ಇನ್ನರ್ ವ್ಹಿಲ್ ಸೇವಾ ಸಂಸ್ಥೆಯು ನೇತೃತ್ವದಲ್ಲಿ ನಡೆಯುವ ಈ ಪಥ ಸಂಚಲನದ ಮುಂಚೂಣಿಯಲ್ಲಿ ನಗರದ ಮತ್ತು ತಾಲೂಕಿನ ನೂರಾರು ಸಂಘ ಸಂಸ್ಥೆಗಳು, ಸಮಾಜಸೇವಕರು, ಮಹಿಳಾ ಸಂಘಟನೆಗಳು ಮತ್ತು ಇತರೆ ಸಾಮಾಜಿಕ ಸೇವಾ ಸಂಸ್ಥೆಗಳು ಮತ್ತು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು. ಡಿಸೆಂಬರ್ 3, 2025 ರಂದು ಬುಧವಾರ ಮುಂಜಾನೆ 8 ಗಂಟೆಗೆ, ನಗರಸಭಾ ಕ್ರೀಡಾಂಗಣದಿಂದ ಆರಂಭವಾಗುವ ಜನಜಾಗೃತಿ ಪಥ ಸಂಚಲನವೂ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಅಶೋಕ ವೃತ್ತದಲ್ಲಿ ಸಮಾವೇಶಗೊಂಡು ಮುಕ್ತಾಯ ಕಾಣುವುದು ಎಂದವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಶಾಸಕ ಅರುಣ ಕುಮಾರ ಪೂಜಾರ ಅವರು ಪಾಲ್ಗೊಂಡು ಪಥ ಸಂಚಲನವನ್ನು ಚಾಲನೆ ನೀಡುವರು. ಮಾಧ್ಯಮಗೋಷ್ಠಿಯಲ್ಲಿ ಸುಷ್ಮಾ ಹೂಟ್ಟೆಗೌಡರ, ಲಕ್ಷ್ಮಿ ವೆಂಕಟೇಶ ಕಾಕಿ, ಸಂಜನಾ ಕುರುವತ್ತಿ, ಪುಷಷ್ಪಾ ಮಾಳಗಿ, ರೂಪಾ ಶ್ರೀನಿವಾಸ್ ಕಾಕಿ, ಜಿ.ಜಿ.ಹೊಟ್ಟಿಗೌಡರ ಸುಧೀರ್ ಕುರುವತ್ತಿ, ಶ್ರೀನಿವಾಸ ಕಾಕಿ, ಸೇರಿದಂತೆ ಇನ್ನರ್ ವ್ಹಿಲ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 