ದೇಶದ ಏಳಿಗೆಗೆ ಪುರುಷರ ಶಿಕ್ಷಣಕ್ಕಿಂತಲೂ ಮಹಿಳೆಯರ ಶಿಕ್ಷಣ ಅತ್ಯಗತ್ಯ: ಶಾಸಕ ಹೆಬ್ಬಾರ

ದೇಶದ ಏಳಿಗೆಗೆ ಪುರುಷರ ಶಿಕ್ಷಣಕ್ಕಿಂತಲೂ ಮಹಿಳೆಯರ ಶಿಕ್ಷಣ ಅತ್ಯಗತ್ಯ:  ಶಾಸಕ ಹೆಬ್ಬಾರ Women's education is more important than men's education for the country's progress: MLA Hebbar

ಮುಂಡಗೋಡ  18: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕ್ರೀಡಾ. ಎನ್‌.ಎಸ್‌.ಎಸ್ ಹಾಗೂ ಭಾರತ ಸೌಟ್ಸ್‌ ಮತ್ತು ಗೈಡ್ಸ್‌ ಹಾಗೂ ಇತರೆ ಘಟಕಗಳ ಸಮಾರಂಭದ ಕಾರ್ಯಕ್ರಮವನ್ನು ಶಾಸಕರಾದ ಶಿವರಾಮ್ ಹೆಬ್ಬಾರ ರವರು ಉದ್ಘಾಟಿಸಿ ಮಾತನಾಡಿದರು.

ಶಾಸಕರಾದ  ಶಿವರಾಮ್ ಹೆಬ್ಬಾರ್ ಇವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡುವಾಗ ದೇಶದ ಏಳಿಗೆಗೆ ಪುರುಷರ ಶಿಕ್ಷಣಕ್ಕಿಂತಲೂ ಮಹಿಳೆಯರ ಶಿಕ್ಷಣ ಅತ್ಯಗತ್ಯ ಎಂದು ಹೇಳುತ್ತಾ, ಎಲ್ಲ ವಿದ್ಯಾರ್ಥಿಗಳಿಗೆ ಕೆ. ಎ. ಎಸ್‌., ಐ.ಎ.ಎಸ್ ಐ.ಎಫ್‌.ಎಸ್‌. ಇನ್ನಿತರೆ ಉನ್ನತ ಮಟ್ಟದ ಹುದ್ದೆಗಳನ್ನು ಅಲಂಕರಿಸಲು ಪ್ರೋತ್ಸಾಹಿಸಿದರು.ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದ ಮಾಡುತ್ತಿರುವ ಶ್ರಮವನ್ನು ಶ್ಲಾಘಿಸಿದರು ಹಾಗೂ ಕಾಲೇಜಿನ ಅಭಿವೃದ್ಧಿಗೆ ಬೇಕಾಗುವ ಎಲ್ಲಾ ತರಹದ ಸಹಾಯ ಮಾಡುವುದಾಗಿ ಪ್ರಾಂಶುಪಾಲರಿಗೆ ತಿಳಿಸಿದರು. ಪ್ರಾಂಶುಪಾಲರು ಅಧ್ಯಕ್ಷೀಯ ನುಡಿಗಳಲ್ಲಿ ಕಾಲೇಜು ಅಭಿವೃದ್ಧಿ ಆಡಳಿತಾತ್ಮಕ ಮತ್ತು ಇತರೆ ವಿಷಯಗಳ ಸಹಕಾರದ ಸಲುವಾಗಿ ಮಾನ್ಯ ಶಾಸಕರು ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಮುಂಬರುವ ದಿನಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಗಳ ಸಹಕಾರದ ಮೂಲಕ ಮೂಲಕ ಕಾಲೇಜನ್ನು ಮಾದರಿ ಕಾಲೇಜನ್ನಾಗಿ ಮಾಡುವ ಭರವಸೆಯನ್ನು ನೀಡಿದರು. ಹಲವಾರು ಪದವಿ ಕೋರ್ಸ್‌ ಗಳನ್ನು ಪ್ರಾರಂಭಿಸಲಾಗಿದ್ದು ವಿದ್ಯಾರ್ಥಿ ಹಾಗೂ ವಿವಿಧ ಪದವಿ ಪೂರ್ವ ಕಾಲೇಜುಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಉನ್ನತ ಶಿಕ್ಷಣದ ಮೌಲ್ಯವನ್ನು ಬೆಳೆಸುವತ್ತ ಕಾರ್ಯ ಪ್ರವೃತ್ತರಾಗುತ್ತೇವೆ ಎಂದರು.ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ಶ್ರೀ ನಾಗರಾಜ್ ಹರಿಜನ್ ಹಾಗೂ ಶ್ರೀ ಸಂತೋಷ್ ಟಿ. ಡಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳನ್ನು ಕುರಿತು ಹಿತನುಡಿಗಳನ್ನು ಆಡಿದರು. 

ಈ ಕಾರ್ಯಕ್ರಮದಲ್ಲಿ ಡಾ. ತಾರಾಮತಿ ನಾಕೋಡ ಎಲ್ಲರನ್ನೂ ಸ್ವಾಗತಿಸಿದರು, ಶ್ರೀ ವಿನಾಯಕ್ ಮಿರಜಕರ್ ಅಥತಿಗಳನ್ನು ಪರಿಚಯಿಸಿದರು, ಡಾ. ಜ್ಯೋತಿ ಹಿರೇಮಠ ವಂದಿಸಿದರು, ಕಾರ್ಯಕ್ರಮದಲ್ಲಿ ಡಾ.ಪ್ರಿಯಾ ಕುಲಕರ್ಣಿ, ಶ್ರೀಮತಿ ಮಧುಶ್ರೀ ಕೆ., ಶ್ರೀ. ಕನವಳ್ಳಿ ಮಲ್ಲಿಕಾರ್ಜುನ್, ಶ್ರೀ ಬಲರಾಮ್, ಹಾಗೂ ಎಲ್ಲಾ ಬೋಧಕೇತರ ಸಿಬ್ಬಂದಿಗಳು ಹಾಗೂ 850 ಕಿಂತ ಹೆಚ್ಚು ವಿದ್ಯಾರ್ಥಿಗಳು  ಅತಿ ಉತ್ಸಾಹದಿಂದ ಹಾಜರಿದ್ದರು.