ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ

ಪ್ರಿ ಕ್ವಾರ್ಟರ್ ಫೈನಲ್ ತಲುಪಿದ ಮಹಿಳಾ ವಿವಿ ಖೋಖೋ ತಂಡ Women's University Khokho team reaches pre-quarterfinals

ಲೋಕದರ್ಶನ ವರದಿ 

  ವಿಜಯಪುರ  05: ದಾವಣಗೆರೆ ವಿವಿಯಲ್ಲಿ ಏ.1ರಿಂದ 4ವರೆಗೆ ನಡೆದ ದಕ್ಷಿಣ ವಲಯ ಅಂತರ್ ಮಹಾವಿದ್ಯಾಲಯಗಳ ಖೋಖೋ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿವಿ ತಂಡ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ವಿವಿ ಕೀರ್ತಿ ಹೆಚ್ಚಿಸಿದೆ. ತಂಡದ ಸಾಧನೆಗೆ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಆಂಧ್ರದ ತಿರುಪತಿ ವಿವಿ, ತಮಿಳುನಾಡಿನ ಭಾರತೀಯರ ವಿವಿ ಹಾಗೂ ಕೇರಳದ ಕಣ್ಣೂರು ವಿವಿ ವಿರುದ್ಧ ಪಂದ್ಯದಲ್ಲಿ ಮಹಿಳಾ ವಿವಿ ತಂಡ ಜಯಗಳಿಸುವ ಮೂಲಕ ರಾಜ್ಯ ಪ್ರತಿನಿಧಿಸಿ ಸಾಧನೆ ಮೆರೆದಿದೆ.  

ತಂಡದ ನಾಯಕಿ, ಎಂಪಿಇಡಿ ವಿದ್ಯಾರ್ಥಿನಿ ದೀಪಾ ಸಂತಿವರ್, ತರಬೇತುದಾರ ಶಿವಪ್ರಕಾಶ್ ಎಲಿ, ವ್ಯವಸ್ಥಾಪಕ ಸಿಂದಗಿಯ ಪೂಜಾರ್,  ಟೂರ್ನಾಮೆಂಟ್  ವೀಕ್ಷಕರಾಗಿ  ಭಾಗವಹಿಸಿದ ಪ್ರೊ.ಶ್ರೀನಿವಾಸ  ಮತ್ತು ಪ್ರೊ. ರಾಜಕುಮಾರ್ ಮಾಲಿ ಪಾಟೀಲ್ ಅವರಿಗೆ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ, ಕುಲಸಚಿವ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಬಸವರಾಜ ಲಕ್ಕಣ್ಣನವರ, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಹನುಮಂತಯ್ಯ ಪೂಜಾರ, ಉಪನಿರ್ದೇಶಕ ಡಾ. ವಿಶ್ವನಾಥ್ ನಡಕಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.