ಮಹಿಳಾ ಉದ್ಯೋಗಮೇಳ : 2025
Women's Job Fair: 2025
ಲೋಕದರ್ಶನ ವರದಿ
ಧಾರವಾಡ 10: ಜನತಾ ಶಿಕ್ಷಣ ಸಮಿತಿಯನ್ನು 1944 ರಲ್ಲಿ ದಿ. ಶ್ರೀ ಹುಕ್ಕೇರಿಕರ ರಾಮರಾಯರು ಸ್ಥಾಪಿಸಿದರು. 1970 ರಲ್ಲಿ ಸಂಸ್ಥೆ ಆರ್ಥಿಕ ತೊಂದರೆಗೆ ಸಿಲುಕಿದಾಗ, ಉಡುಪಿಯ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶತೀರ್ಥ ಪಾದಂಗಳವರ ಪ್ರೇರಣೆಯಿಂದ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು 1973 ಅಕ್ಟೋಬರ್ 18 ರಂದು ಈ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡರು. ದಿ. ಡಾ. ನ. ವಜ್ರಕುಮಾರವರು ಸಂಸ್ಥೆಯನ್ನು ಬೆಳೆಸಿ ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಜೆ.ಎಸ್.ಎಸ್ 25 ಅಂಗ ಸಂಸ್ಥೆಗಳಲ್ಲಿ ಆಧುನಿಕತೆಯ ಮುಂದುವರೆದ ತಂತ್ರಜ್ಞಾನದ ಬಳಕೆಯಾಗುತ್ತಿದ್ದು, ಮಹೋನ್ನತ ಕಟ್ಟಡಗಳು, ಅನುಭವಿ ಶಿಕ್ಷಕರು, ಬೃಹತ್ ಗ್ರಂಥಾಲಯ, ಎಲ್.ಕೆ.ಜಿ. ಯಿಂದ ಪಿ.ಜಿ. ಹಾಗೂ ಪಿ.ಎಚ್.ಡಿ. ವರೆಗೂ ಈಗ ಸುಮಾರು 22,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಜೆ.ಎಸ್.ಎಸ್. ಶಿಕ್ಷಣ ಪ್ರಸಾರದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ನೇತ್ರ ತಪಾಸಣಾ ಶಿಬಿರ ತಾಂತ್ರಿಕ ವಸ್ತುಪ್ರದರ್ಶನ, ಕ್ರೀಡಾಕೂಟಗಳನ್ನು, ರಸ್ತೆ ಸುರಕ್ಷತಾ ಸಪ್ತಾಹಗಳು, ಯುವಕ, ಯುವತಿಯರಿಗೆ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ತರಬೇತಿಯನ್ನು ಏರಿ್ಡಸುತ್ತಾ ಬಂದಿದೆ. 2005 ರಿಂದ ಇಂದಿನ ಕ್ಯಾಂಪಸ್ ಸಂದರ್ಶನಗಳನ್ನು ಏರಿ್ಡಸಿ ಪ್ರಸಿದ್ಧ ಐ.ಟಿ, ಬಿ.ಟಿ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್, ಕಾಪ್ಸಜೆಮಿನಿ, ಐಯೋನ ಐಡಿಯಾದಂತಹ ಹತ್ತು ಹಲವು ಕಂಪನಿಗಳು ಕಾಲೇಜಿಗೆ ಬಂದು ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಮಾಡಿ, ಅಲ್ಲಿಂದ ಇಲ್ಲಿಯವರೆಗೂ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗಾಗಿ ಅಷ್ಟೇ ಅಲ್ಲದೇ ವಿಶೇಷ ಚೇತನರಿಗಾಗಿ, ಮಹಿಳೆಯರಿಗಾಗಿ 350 ಕ್ಕೂ ಹೆಚ್ಚು ಕ್ಯಾಂಪಸ್ ಸಂದರ್ಶನಗಳು ಹಾಗೂ 20 ಕ್ಕೂ ಹೆಚ್ಚು ಉದ್ಯೋಗ ಮೇಳವನ್ನು ಆಯೋಜಿಸಿ 80,000 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿದ ಕೀರ್ತಿ ಪ್ರಸ್ತುತ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದವರಿಗೆ ಸಲ್ಲುತ್ತದೆ. ಅಲ್ಲದೇ ಈ ಎಲ್ಲ ಕಾರ್ಯಕ್ರಮಗಳು ಅವರಿಗೆ ಉದ್ಯೋಗದಾತ ಎಂಬ ಬಿರುದನ್ನು ಸಹ ತಂದುಕೊಟ್ಟಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು. ಕೆಲ ದಿನಗಳ ಹಿಂದಷ್ಟೆ ಜೆ.ಎಸ್.ಎಸ್. ನ ನೂತನ ಆಡಳಿತ ಮಂಡಳಿ ತನ್ನ 53ನೇ ವರ್ಷಾಚರಣೆ ಆಚರಿಸಿದ್ದು, ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ಮಾಡಿಕೊಂಡಿದ್ದು ಸದ್ಯ ಧಾರವಾಡದ ರಾ್ಯಪಿಡ್ ಸಂಸ್ಥೆಯೊಂದಿಗೆ ಮಹಿಳೆಯರಿಗಾಗಿ 5ನೇ ಬಾರಿ ಉದ್ಯೋಗಮೇಳ ಆಯೋಜಿಸುತ್ತಿದೆ.
ಧಾರವಾಡದ ಇನ್ನೊಂದು ಸಮಾಜಮುಖಿ ಸಂಸ್ಥೆಯಾದ ರಾ್ಯಪಿಡ್ ಹೆಣ್ಣುಮಕ್ಕಳ ಪುನರ್ವಸತಿಗಾಗಿ ಶ್ರಮಿಸುತ್ತಿರುವ ಸಂಸ್ಥೆ. ರಾ್ಯಪಿಡ್ ಒಂದು ಸರ್ಕಾರೇತರ ಸಂಸ್ಥೆಯಾಗಿದ್ದು, ಕರ್ನಾಟಕದಲ್ಲಿರುವ ಧಾರವಾಡದಲ್ಲಿ ನೆಲೆಗೊಂಡಿದೆ. 2001 ರಿಂದ ಇಲ್ಲಿಯವರೆಗೆ ಇದು ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ, ಆಪ್ತಸಮಾಲೋಚನೆ, ವಿದ್ಯಾಭ್ಯಾಸ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ನಿಯೋಜನೆ ನೆರವಿನ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅವಕಾಶಗಳನ್ನು ನೀಡಿ, ಪುನರ್ವಸತಿಯನ್ನು ದೊರಕಿಸುತ್ತದೆ.
ರಾ್ಯಪಿಡ್ ಸಂಸ್ಥೆಯು ಕಳೆದ 24 ವರ್ಷಗಳಿಂದ ಸುಮಾರು 6000ಕ್ಕೂ ಹೆಚ್ಚು ಮಹಿಳೆಯರಿಗೆ ಪುನರ್ವಸತಿ ಒದಗಿಸಿದೆ. ಫಲಾನುಭವಿಗಳಿಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಒದಗಿಸುವುದೇ ಈ ಯೋಜನೆಗಳ ಉದ್ದೇಶವಾಗಿದೆ. ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಕಂಪ್ಯೂಟರ್ ಅಪ್ಲಿಕೇಶನ್ಸ್ ಟ್ರೇನಿಂಗ್ ಜೊತೆಗೆ ವ್ಯಕ್ತಿತ್ವ ವಿಕಸನ, ಬೇಸಿಕ್ ಟೆಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್, ಕಸೂತಿ, ಬ್ಯೂಟಿಶಿಯನ್ ಕೋರ್ಸ, ಮೆಹಂದಿ, ಆರಿ ವರ್ಕ, ಬ್ಯಾಗ್ ತಯಾರಿಕೆ ಹಾಗೂ ಕರಕುಶಲ ವಸ್ತುಗಳ ತಯಾರಿಕೆಗಳ ತರಬೇತಿ ನೀಡಲಾಗುತ್ತದೆ. ಫೋಲ್ಡರ್ಸ, ಲ್ಯಾಪ್‌ಟ್ಯಾಪ್ ಸ್ಲೀವ್ಸ್, ಪರ್ಸಗಳು, ಟೋಟ್ ಬ್ಯಾಗ್‌ಗಳು, ಎಲ್ಲ ತರಹದ ಕಾಟನ್ ಹಾಗೂ ಜೂಟ್ ಬ್ಯಾಗ್ಸ್ ತಯಾರಿಸಲಾಗುತ್ತದೆ ಹಾಗೂ ಸೀರೆ, ಕುರ್ತಾಗಳ ಮೇಲೆ ಕಸೂತಿ ಹಾಕಿ ಕೊಡಲಾಗುತ್ತದೆ. ಇಂತಹ ಸ್ವ-ಉದ್ಯೋಗ ತರಬೇತಿ ನೀಡುವುದಷ್ಟೇ ಅಲ್ಲ, ಮಹಿಳಾ ಲಘು ಉದ್ಯಮಿಗಳಿಗೆ ಮಾರುಕಟ್ಟೆ ಸಂಪರ್ಕ ಹಾಗೂ ಮಾರಾಟ ಮೇಳಗಳನ್ನು ಆಯೋಜಿಸಲಾಗುತ್ತದೆ.
ಜನತಾ ಶಿಕ್ಷಣ ಸಮಿತಿ ಹಾಗೂ ರಾ್ಯಪಿಡ್ ಸಂಸ್ಥೆಗಳು ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಜೀವನ ಸುದಾರಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಹುಟ್ಟುಹಬ್ಬದ ಪ್ರಯುಕ್ತ ದಿನಾಂಕ 25-11-2025 ರಂದು 25 ಮಹಿಳಾ ಉದ್ಯಮಿದಾರರಿಂದ ಬಜಾರ್‌ನ್ನು ಆಯೋಜಿಸಲಾಗಿತ್ತು.
5ನೇ ಬಾರಿ ಮಹಿಳೆಯರಿಗಾಗಿ ಉದ್ಯೋಗಮೇಳದ ಆಯೋಜನೆ
ಧಾರವಾಡದ ಜೆ.ಎಸ್.ಎಸ್. ಹಾಗೂ ರಾ್ಯಪಿಡ್ ಸಂಸ್ಥೆಯ ಆಶ್ರಯದಲ್ಲಿ, ಮೂರ್ತಿ ಟ್ರಸ್ಟನ ಸಹಾಯದೊಂದಿಗೆ, ಡಾ. ಅಜಿತ ಪ್ರಸಾದರವರ ನೇತೃತ್ವದಲ್ಲಿ ಸತತವಾಗಿ ಐದನೇ ಬಾರಿ ಮಹಿಳೆಯರಿಗಾಗಿ ಉದ್ಯೋಗಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇದೇ ಡಿಸೆಂಬರ್ 14 ರಂದು ಬೆಳಿಗ್ಗೆ 9.30 ರಿಂದ ಜೆ.ಎಸ್.ಎಸ್. ಆವರಣದಲ್ಲಿ ಈ ಉದ್ಯೋಗಮೇಳವು ಆಯೋಜಿಸಲ್ಪಟ್ಟಿದೆ. ಜೆ.ಎಸ್.ಎಸ್. ನ ಐಟಿಐ ನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾಧ್ಯೆ, ರಾ್ಯಪಿಡ್ ಸಂಸ್ಥೆಯ ಕಾರ್ಯದರ್ಶಿಗಳಾಗಿ ಹಾಗೂ ಮಾರ್ಗದರ್ಶಕರಾದ ಶ್ರೀಮತಿ ವಾಣಿಶ್ರೀ ಪುರೋಹಿತ್ ಹಾಗೂ ರಾ್ಯಪಿಡ್ ಸಂಸ್ಥೆಯ ಸಿ.ಇ.ಓ ಆದ ಶ್ರೀಮತಿ ಮಾಲವಿಕಾ ಕಡಕೋಳ ಇವರು ಸಂಘಟಕರಾಗಿ ಈ ಮೇಳವನ್ನು ಮುನ್ನಡೆಸಲಿದ್ದಾರೆ. ಈ ಮೊದಲು 6ನೇ ಫೆಬ್ರುವರಿ 2022, 18ನೇ ಡಿಸೆಂಬರ್ 2022, 29ನೇ ಅಕ್ಟೋಬರ್ 2023, 15ನೇ ಡಿಸೆಂಬರ್ 2024 ರಂದು 4 ಮಹಿಳಾ ಉದ್ಯೋಗಮೇಳಗಳನ್ನು ಜೆ.ಎಸ್.ಎಸ್. ಹಾಗೂ ರಾ್ಯಪಿಡ್ ಸಂಸ್ಥೆಗಳು ಸಮರ್ಥವಾಗಿ ನಡೆಸಿವೆ.
ಉದ್ಯೋಗಮೇಳದಲ್ಲಿ ಯಾರೆಲ್ಲ ಭಾಗವಹಿಸಬಹುದು?
* ಇದರಲ್ಲಿ 18 ರಿಂದ 45 ವರ್ಷದ ಮಹಿಳೆಯರು ಭಾಗವಹಿಸಬಹುದು.
* ಯಾವುದೇ ಪದವಿ, ಪಿ.ಜಿ, ಮಾಸ್ಟರ್ಸ, ನರ್ಸಿಂಗ್, ಇಂಜಿನಿಯರಿಂಗ್ ಮಾಡಿದವರು.
* ಎಸ್.ಎಸ್.ಎಲ್.ಸಿ. ಪಿ.ಯು.ಸಿ ಅಥವಾ ಇನ್ನೂ ಕಡಿಮೆ ಓದಿದವರಿಗೂ ಉದ್ಯೋಗಾವಕಾಶಗಳಿವೆ.
* ಫ್ರೆಶರ್ಸ ಹಾಗೂ ಅನುಭವ ಇದ್ದವರೂ ಭಾಗವಹಿಸಬಹುದು.
ಕಂಪನಿಗಳು ಮತ್ತು ಹುದ್ದೆಗಳ ವಿವರ
ಸುಮಾರು 35 ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು. ಟಾಟಾ ಮೋಟಾರ್ಸ, ನೈಡೆಕ್ ಇಂಡಸ್ಟ್ರೀಯಲ್ ಅಟೋಮೆಶನ್, ಎಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಆಸ್ಟ್ರಾ ಡಿಫೆನ್ಸ್, ದೇಶಪಾಂಡೆ ಸ್ಕಿಲ್ಲಿಂಗ್, ಸೇಫ್ ಹ್ಯಾಂಡ್ಸ್, ಆಸ್ಟರ್ ಡಿಫೆನ್ಸ್, ಜಿಆರ್‌ಪಿಎಸ್ ಸೆಕ್ಯುರಿಟಿ ಮತ್ತು ಫೆಸಿಲಿಟಿ, ಯುಥ್ ಫಾರ್ ಜಾಬ್ಸ್, ಸೈನೋಡ್ಸ್ ಸೊಲ್ಯುಶನ್ಸ್, ಬಿಟ್ಟಸ್, ಗ್ರೋ ಸೆಂಟರ್, ಡಾ. ರೆಡ್ಡೀಸ್ ಫೌಂಡೇಶನ್, ಜರಿಕಾರ್ಟ, ಹೋಟೆಲ್ ಇಂಡಸ್ಟ್ರೀಜ್, ಹಂಚಿನಮನಿ ಸ್ಕೂಲ್ ಇನ್ನೂ ಅನೇಕ ಸಂಸ್ಥೆಗಳು ಸೇರಿವೆ. ಟೆಲಿಕಾಲರ್, ಅಕೌಂಟ್ಸ್, ಅಡ್ಮಿನ್, ಸೇಲ್ಸ್, ಹ್ಯೂಮನ್ ರಿಸೋರ್ಸ, ಕಂಪ್ಯೂಟರ್ ಆಪರೇಟರ್, ಡೆಟಾ ಎಂಟ್ರಿ, ಕಾನ್ಸೆಲರ್ ಟ್ರೇನಿ, ಡಿಸೈನ್ ಇಂಜೀನೀಯರ್, ಟೀಚರ್, ನೆಟವರ್ಕ ಇಂಜೀನಿಯರ್, ಸಪೋರ್ಟ ಇಂಜಿನಿಯರ್, ಅಬ್ಯಾಕಸ್ ಟೀಚರ‌್ಸ, ಕ್ಯಾಶಿಯರ್ಸ, ಕ್ಲರ್ಕ, ಅಟೆಂಡರ್, ಹೆಲ್ಪರ್, ಟೇಲರ್ಸ, ಹೌಸಕೀಪಿಂಗ್, ಆಪರೇಟರ‌್ಸ, ನರ್ಸ ಅಸಿಸ್ಟಂಟ್, ಅಸೆಂಬ್ಲಿ, ಸೆಕ್ಯುರಿಟಿ ಗಾರ್ಡ, ವಾರ್ಡನ್, ಮಾನೇಜರ್, ಡೆಪ್ಯೂಟಿ ಮ್ಯಾನೇಜರ್ ಹೀಗೆ ಹಲವಾರು ತರಹದ ಹುದ್ದೆಗಳು ಮಹಿಳೆಯರಿಗಾಗಿ ಲಭ್ಯವಿವೆ. ಸುಮಾರು 2000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಮಹಿಳೆಯರಿಗಾಗಿ ಇರುತ್ತವೆ. ಹೆಚ್ಚಿನ ಅವಕಾಶಗಳು ಧಾರವಾಡ, ಹುಬ್ಬಳ್ಳಿ ಹಾಗೂ ಬೆಂಗಳೂರಲ್ಲಿ ಇರುತ್ತವೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಿಗಲಿರುವ ವೇತನ
ವಿವಿಧ ಕಂಪನಿಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಯವರು ಉದ್ಯೋಗಾನುಸಾರವಾಗಿ ರೂ. 8000/- ದಿಂದ 35,000/- ವರೆಗೆ ವೇತನ ನೀಡಲಿದ್ದಾರೆ.
ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜನೆ:-
* 5ನೇ ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಈ ಉದ್ಯೋಗಮೇಳವನ್ನು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಕಟ್ಟಡದ 4 ಮಹಡಿಗಳಲ್ಲಿ ಆಯೋಜಿಸಲಾಗಿದೆ.
* 35 ಕಂಪನಿಗಳಿಗೆ ಪ್ರತ್ಯೆಕ ಕೊಠಡಿಗಳನ್ನು ಸಂದರ್ಶನಕ್ಕಾಗಿ ನೀಡಲಾಗಿದೆ.
* ಕೊಠಡಿಯ ಹೊರಗಡೆ ಕಂಪನಿಯ ನಾಮಫಲಕ ಅಂಟಿಸಲಾಗುವುದು.
* ಕಟ್ಟಡದ ಹೊರಗಡೆ ಯಾವ ಯಾವ ಕೊಠಡಿಯಲ್ಲಿ ಯಾವ ಕಂಪನಿ ಸಂದರ್ಶನ ನಡೆಸಲಿದೆ ಎಂಬ ಮಾಹಿತಿಯನ್ನು ಪ್ರದರ್ಶಿಸಲಾಗುವುದು.
* ಕಂಪನಿಯವರೊಂದಿಗೆ ಸಂವಹನಕ್ಕಾಗಿ ಜೆ.ಎಸ್.ಎಸ್ ನ ಸಿಬ್ಬಂದಿಗಳನ್ನು ಮತ್ತು ಪ್ರತಿಯೊಂದು ಕೊಠಡಿ ಮುಂದೆ ಸಹಾಯಕರಾಗಿ ಒಬ್ಬ ಅಟೆಂಡರನ್ನು ನೇಮಿಸಲಾಗಿದೆ.
* ಕಂಪನಿ ಪ್ರತಿನಿಧಿಗಳಿಗೆ ಮುಂಜಾನೆ ಉಪಹಾರ ಮತ್ತು ಮದ್ಯಾನ್ಹ ಊಟದ ವ್ಯವಸ್ಥೆ ಮಾಡಲಾಗಿದೆ.
* ಕಂಪನಿಯವರಿಗೆ ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ನೀಡಲು ಮತ್ತು ನೇಮಕಾತಿ ಪತ್ರವನ್ನು ಅಭ್ಯರ್ಥಿಗಳಿಗೆ ವಿತರಿಸಲು ಸೂಚಿಸಲಾಗಿದೆ.
* ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನು ಈ ಕಟ್ಟಡ ಹೊಂದಿರುತ್ತದೆ.
ಭಾಗವಹಿಸುತ್ತಿರುವ ಕಂಪನಿ ಅಥವಾ ಸಂಸ್ಥೆಗಳಲ್ಲಿ ಇದರಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಕ್ಯೂ-ಆರ್ ಕೋಡ್ ಬಳಸಿ, ಲಿಂಕ್ ಬಳಸಿ ಅಥವಾ ಫೋನ ನಂಬರಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಡಿಸೆಂಬರ್ 14 ರಂದು ಸ್ಥಳದಲ್ಲಿ ಸಹ ನೊಂದಣಿ ಮಾಡಬಹುದು. ಈಗಾಗಲೇ 500+ ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದಾರೆ.
ಸಂದರ್ಶನಕ್ಕೆ ಹಾಜರಾಗುವ ಮಹಿಳೆಯರು ತಮ್ಮ ಬಯೋಡೇಟಾಗಳು, ಫೋಟೋಗಳು, ಆಧಾರಕಾರ್ಡ ಮತ್ತು ಸರ್ಟಿಫೀಕೇಟ್ಸಗಳ ಝರಾಕ್ಸ್ ಪ್ರತಿಗಳನ್ನು ತರಬೇಕು.
ಫೋನ ನಂಬರ್ಸ : 8073831784
0836-3566952
ನೊಂದಣಿಗಾಗಿ ಲಿಂಕ್ ಬಳಸಿ : https://docs.google.com/forms/d/12S4ev8SUFM_A_oSHTbkuRFNcMCrEjnMiS5K9996ZV0Q/preview
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 