ಸಬಲಾ ಹಿ ಮಹಿಳಾ ಸಬಲೀಕರಣ ಘಟಕ ವತಿಯಿಂದ ಮಹಿಳಾ ದಿನ ಕಾರ್ಯಕ್ರಮ

ಸಬಲಾ ಹಿ ಮಹಿಳಾ ಸಬಲೀಕರಣ ಘಟಕ ವತಿಯಿಂದ ಮಹಿಳಾ ದಿನ ಕಾರ್ಯಕ್ರಮ Women's Day program by Sabala Hi Women's Empowerment Unit

ವಿಜಯಪುರ 14 : ಅವಕಾಶ ವಂಚಿತ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಅವರ ಯಶಸ್ಸಿಗೆ ಸಹಾಯ ಮಾಡಬೇಕು ಎಂದು ಇನ್ನರ್ ವೀಲ್ ಕ್ಲಪ್ ಅಧ್ಯಕ್ಷೆ ಮತ್ತು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಎ. ಸರನಾಡಗೌಡ ಹೇಳಿದ್ದಾರೆ.   ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಗುರುವಾರ ಸಬಲಾ ಹಿ ಮಹಿಳಾ ಸಬಲೀಕರಣ ಘಟಕ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   

  ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಬಿ.ಎಲ್‌.ಡಿ.ಇ ಸಂಸ್ಥೆಯ ಮಹಿಳಾ ಸಿಬ್ಬಂದಿಯ ಸಮರೆ​‍್ಣ, ಪರಿಶ್ರಮ ಮತ್ತು ನಿಷ್ಠೆ ಶ್ಲಾಘನೀಯವಾಗಿದೆ.  ಅವರು ವೃತ್ತಿಪರ ಜವಾಬ್ದಾರಿಗಳ ಜೊತೆಗೆ ವೈಯಕ್ತಿಕ ಬದುಕಿನ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತ ಸಂಸ್ಥೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.   ಈ ಕಾರ್ಯಕ್ರಮದಲ್ಲಿ ಅನುಸಂಧಾನ-2026 ರಾಷ್ಟ್ರೀಯ ಸಮ್ಮೇಳನದ ಮಾಹಿತಿ ಪರ್ತಿಕೆಯ ಬಿಡುಗಡೆ ಮಾಡಲಾಯಿತು.   

 ಸಬಲಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ವಿಜಯಲಕ್ಷ್ಮಿ ಬೆನಕಟ್ಟಿ ಸ್ವಾಗತಿಸಿದರು.  ಶಲ್ಯ ತಂತ್ರ ವಿಭಾಗದ ಪ್ರಾಧ್ಯಾಪಕ ಡಾ. ಪ್ರಸಾದಶಕ್ತಿ ಗನ್ನೂರ ಮಹಿಳಾ ಸಬಲೀಕರಣ ಘಟಕದ ವಾರ್ಷಿಕ ವರದಿ ಮಂಡಿಸಿದರು.  ಸಬಲಾ ಸದಸ್ಯ ಕಾರ್ಯದರ್ಶಿ ಡಾ. ಅಶ್ವಿನಿ ನಿಂಬಾಳ ವಂದಿಸಿದರು.    

 ಈ ಸಂದರ್ಭದಲ್ಲಿ ಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.   ಇದೇ ವೇಳೆ ಮಹಿಳಾ ದಿನಾಚರಣೆಯ ಅಂಗವಾಗಿ ಸಂಸ್ಥೆಯ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಯವರ ವರ್ಷದಪೂರ್ತಿ ಸಲ್ಲಿಸಿದ ಸೇವೆ ಮತ್ತು ಸಮರೆ​‍್ಣಯನ್ನು ಗೌರವಿಸುವ ಉದ್ದೇಶದಿಂದ ಬಾಗಲಕೋಟೆ ಜಿಲ್ಲೆಯ ಮಂಟೂರಿಗೆ ಮನರಂಜನಾ ಪ್ರವಾಸವನ್ನು ಕೂಡ ಆಯೋಜಿಸಲಾಗಿತ್ತು.   

ವಿಜಯಪುರ ನಗರದ ಬಿ.ಎಲ್‌.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ  ಮಹಿಳಾ ಸಬಲೀಕರಣ ಘಟಕ ವತಿಯಿಂದ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಇನ್ನರ್ ವೀಲ್ ಕ್ಲಪ್ ಅಧ್ಯಕ್ಷೆ ಮತ್ತು ಅಂಜುಮನ್ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಎ. ಸರನಾಡಗೌಡ ಉದ್ಘಾಟಿಸಿದರು.  ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಡಾ. ವಿಜಯಲಕ್ಷ್ಮಿ ಬೆನಕಟ್ಟಿ ಡಾ. ಪ್ರಸಾದಶಕ್ತಿ ಗನ್ನೂರ ಮುಂತಾದವರು ಉಪಸ್ಥಿತರಿದ್ದರು.