ಆಲಮಟ್ಟಿ ಜಲಾಶಯ ಎತ್ತರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದ ಕ್ಯಾತೆ

ಆಲಮಟ್ಟಿ ಜಲಾಶಯ ಎತ್ತರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರದ ಕ್ಯಾತೆ What is the Maharashtra government's stance on raising the Almatti reservoir?

ಸಂಬರಗಿ 05:  ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕುರಿತು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಜಲಾಶಯವನ್ನು ಎತ್ತರ ಮಾಡಿದ ನಂತರ ಮಹಾರಾಷ್ಟ್ರದ ಸಾಂಗಲಿ ಮತ್ತು ಸೊಲ್ಹಾಪೂರ ಜಿಲ್ಲೆಯಲ್ಲಿ ಬರುವ ಗ್ರಾಮಗಳಿಗೆ ಯಾವುದೇ ಪರಿಣಾಮವಾಗುವುದಿಲ್ಲ. ಆದರೆ ಈ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಹಾಗೂ ರಾಜಕೀಯ ಮುಖಂಡರು ವಿನಾಕಾರಣವಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅವರಿಗೆ ಈ ವಿಷಯದ ಕುರಿತು ಅರಿವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರ, ಹಾಲಿ ಶಾಸಕರು ಲಕ್ಷ್ಮಣ ಸವದಿ ಹೇಳಿದರು. 

ಅಥಣಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈಗಾಗಲೇ ಆಲಮಟ್ಟಿ ಜಲಾಶಯ 519ಮೀ ದಿಂದ 524ಮೀ ಎತ್ತರ ಮಾಡಲು ಸ್ಟಕ್ಚರ್ ಕೆಲಸ ಮುಕ್ತಾಯಗೊಂಡಿದ್ದು, ಗೇಟ್ ಹಾಕುವ ಕೆಲಸ ಮಾತ್ರ ಉಳಿದಿದೆ. ಆಲಮಟ್ಟಿ ಜಲಾಶಯ ಹಾಗೂ ಮಹಾರಾಷ್ಟ್ರ ನಡುವೆ ಕೃಷ್ಣಾ ನದಿಯ ಮೇಲೆ ಹಿಪ್ಪರಗಿ ಜಲಾಶಯ ಇದ್ದು, ಅದು 526ಮೀ ಎತ್ತರ ಇದೆ. ಆಲಮಟ್ಟಿ ಜಲಾಶಯ ನೀರನ್ನು ಸಂಗ್ರಹ ಮಾಡಿದ ನಂತರ ಮರಳಿ 2 ಮೀ ಕೆಳಗೆ ನೀರು ಸಂಗ್ರಹವಾಗುತ್ತವೆ. ಇದು ಮಹಾರಾಷ್ಟ್ರದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಕೃಷ್ಣಾ ನದಿಯ ನೀರನ್ನು ಕರ್ನಾಟಕ-ಮಹಾರಾಷ್ಟ್ರ, ತೆಲಂಗಾಣ-ಆಂಧ್ರ​‍್ರದೇಶ ರಾಜ್ಯದ ನೀರಿನ ಹಂಚಿಕೆ ಬಚಾವತ್ ಆಯೋಗದ ಪ್ರಕಾರ ತೀರ್ಮಾನವಾಗಿದೆ. ಗೇಟ್ ಹಾಕುವುದು ಮಾತ್ರ ಬಾಕಿ ಉಳಿದಿದೆ. 

ಆಲಮಟ್ಟಿ ಜಲಾಶಯದಿಂದ 1 ಲಕ್ಷ 30 ಸಾವಿರ ಎಕರೆ ಜಮೀನವನ್ನು ವಶಪಡಿಸಿಕೊಂಡಿದ್ದಾರೆ. 65 ಸಾವಿರ ಕೋಟಿ ರೂಪಾಯಿ ಕೊಡಲು ವಿಳಂಬವಾಗಿದೆ. ಅದರಲ್ಲಿ 72 ಸಾವಿರ ಜಮೀನು ಮುಳುಗಡೆಯಾಗುತ್ತದೆ. ಇನ್ನುಳಿದ ಜಮೀನವನ್ನು ಪುನರ್‌ವಸತಿ ಕೇಂದ್ರಕ್ಕೆ ಸ್ಥಳ ನಿಗದಿ ಪಡಿಸಿದ್ದಾರೆ. ಆಲಮಟ್ಟಿ ಜಲಾಶಯದ 524ಮೀ ನೀರು ಸಂಗ್ರಹ ಮಾಡಿದರೆ, ಬೇಸಿಗೆಯಲ್ಲಿ ಬರುವ ನೀರಿನ ಸಮಸ್ಯೆ ಕೃಷ್ಣಾ ತೀರದ ಅಥಣಿ, ಕಾಗವಾಡ, ಜಮಖಂಡಿ ಪರ್ಯಾಯಗೊಳಿಸುತ್ತದೆ. ಹಿಪ್ಪರಗಿ ಜಲಾಶಯದ ಹಿನ್ನೀರಿನ ಲಾಭ ಬೇಸಿಗೆಯ ಅವಧಿಯಲ್ಲಿ ಮಹಾರಾಷ್ಟ್ರ ರಾಜ್ಯಕ್ಕೂ ಸಿಗುವ ಸಾಧ್ಯತೆ ಇದೆ ಎಂದು ಸ್ಪಷ್ಟ ಪಡಿಸಿದರು. ಮಹಾರಾಷ್ಟ ರಾಜ್ಯ ಸರ್ಕಾರದ ರಾಜಕೀಯ ಮುಖಂಡರು ಆಲಮಟ್ಟಿ ಜಲಾಶಯವನ್ನು ಎತ್ತಿರ ಮಾಡುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ರಾಜಕೀಯ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ವಿಷಯವನ್ನು ರಾಜಕೀಯ ವಿಷಯ ಮಾಡಿದ್ದಾರೆ.