ವಾಷಿಂಗ್ಟನ್, ಜ 10 ,ಸಂಸತ್ತಿನ ಅನುಮೋದನೆಯಿಲ್ಲದೇ ಇರಾನ್ ವಿರುದ್ಧ ಮಿಲಿಟರಿ ಕ್ರಮಗಳನ್ನು ತೆಗೆದುಕೊಳ್ಳುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರವನ್ನು ನಿಯಂತ್ರಿಸುವ ನಿರ್ಣಯವನ್ನು ಅಮೆರಿಕದ ಸಂಸತ್ತು ಅಂಗೀಕರಿಸಿದೆ. ಇರಾನ್ ವಿರುದ್ಧ ಯುದ್ಧಕ್ಕೆ ಅಥವಾ ಇತರ ದಾಳಿಗಳಿಗೆ ಅಮೆರಿಕದ ಮಿಲಿಟರಿ ಶಕ್ತಿಗಳನ್ನು ಬಳಸುವ ಟ್ರಂಪ್ ಅಧಿಕಾರವನ್ನು ಮೊಟಕುಗೊಳಿಸಿರುವುದಾಗಿ ಈ ನಿರ್ಣಯ ನಿರ್ದೇಶನ ನೀಡಿದೆ. ಈ ನಿರ್ಣಯದಂತೆ ಕಾಂಗ್ರೆಸ್ ನಿಂದ ಅನುಮತಿ ಪಡೆಯದ ಹೊರತು ಮಿಲಿಟರಿ ಪಡೆಗಳನ್ನು ಅಧ್ಯಕ್ಷ ಟ್ರಂಪ್ ಬಳಸುವಂತಿಲ್ಲ.