ವಿವಿಪ್ಯಾಟ್, ಇವಿಎಂಗಳ ಹ್ಯಾಕ್ ಸಂಶಯ! ತನಿಖೆಗೆ ಪಾಟೀಲ ಮನವಿ
ಲೋಕದರ್ಶನವರದಿ
ರಾಣೇಬೆನ್ನೂರು 02: ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ ನಂತರ ನಡೆದ ಮತ ಎಣಿಕೆ ಕಾರ್ಯದಲ್ಲಿ ವಿವಿ ಪ್ಯಾಟ್ ಮತ್ತು ಇವಿಎಂಗಳನ್ನು ಹ್ಯಾಕ್ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಅನುಮಾನಗಳು ಬಲವಾಗಿ ಬೇರುರುತ್ತಲಿವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಮೊಸಕ್ಕೊಳಗಾದ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಲು ಮುಂದಾಗಬೇಕು ಎಂದು ಒತ್ತಾಯಿಸಿರುವ ಕನರ್ಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ರವೀಂದ್ರಗೌಡ ಪಾಟೀಲ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತರು, ರಾಜ್ಯ ಚುನಾವಣಾ ಆಯುಕ್ತರು, ಮತ್ತು ರಾಜ್ಯಪಾಲರು, ಮುಖ್ಯ ಕಾರ್ಯದಶರ್ಿಗಳಿಗೆ ಸುದೀರ್ಘವಾದ ಪತ್ರ ಬರೆದಿರುವ ಪಾಟೀಲ ಚುನಾವಣೆ ಫಲಿತಾಂಶವು ಯಡಿಯೂರಪ್ಪನವರ ಪ್ರವಾಹವೂ ಅಲ್ಲ, ನರೇಂದ್ರ ಮೋದಿ ಅವರ ಸುನಾಮಿಯೂ ಅಲ್ಲ ಆದರೆ, ಕಂಪ್ಯೂಟರೀಕರಣ ಜಗತ್ತಿನಲ್ಲಿ
ಏನೆಲ್ಲ ಮಾಡಲು ಸಾಧ್ಯವಿದೆ ಎನ್ನುವುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದಿದ್ದಾರೆ.
17ನೇ ಲೋಕಸಭಾ ಚುನಾವಣೆಯ 547 ಲೋಕಸಭಾ ಫಲಿತಾಂಶವು ಜಗತ್ತಿಗೆ ವಿಸ್ಮಯವನ್ನುಂಟು ಮಾಡಿದೆ. 2014ರಲ್ಲಿ ಕೇಂದ್ರ ಅಧಿಕಾರದಲ್ಲಿದ್ದ, ಮೋದಿ ಅವರು ಈ ದೇಶದ ರೈತರಿಗೆ, ರೈತಾಪಿ ವರ್ಗದವರಿಗೆ ಸುಳ್ಳು ಭರವಸೆ ನೀಡಿದೆ. ಮತ್ತು ಬಡವರ ಮಧ್ಯಮ ವರ್ಗದವರ ವಿರೋಧಿ ಧೋರಣೆ ಅನುಸರಿಸಿದೆ. ಆದರೂ ಇಂತಹ ಜನ ವಿರೋಧದ ಮಧ್ಯಯೂ ತಮ್ಮ ಪಕ್ಷದ ಅಭ್ಯಥರ್ಿಗಳನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಿರುವುದು ಸೂಜಿಗದ ಸಂಗತಿಯಾಗಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಫಲಿತಾಂಶ ಗಮನಿಸಿದರೆ, ಇವಿಎಂ., ವಿವಿಪ್ಯಾಟ್, ಅಳವಡಿಕೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಕೂಡಲೇ, ಇವುಗಳ ಬಗ್ಗೆ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿರುವ ಪಾಟೀಲ ಅವರು ತನಿಖೆಗೆ ಮುಂದಾಗದಿದ್ದಲ್ಲಿ, ಉಚ್ಚನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.ಅ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 