ಯುವಜನ ದಿನಾಚರಣೆಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಾರೆ್ಪಣ
Vivekananda's portrait on Youth Day
ಯುವಜನ ದಿನಾಚರಣೆಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಾರೆ್ಪಣ
ಹಾವೇರಿ 13: ಭಾರತ ದೇಶ ಉತ್ತುಂಗಕ್ಕೆ ಏರಬೇಕಾದರೆ ಬಡವರಿಗೆ ಅನ್ನವನ್ನು ಉಣಿಸಬೇಕು ಶಿಕ್ಷಣವನ್ನು ಹರಡಬೇಕು,ಪೂಜಾರಿ ಪೌರೋಹಿತ್ಯವನ್ನು ನಿರ್ಮೂಲನೆ ಮಾಡಬೇಕು. ಮಾನವೀಯತೆ ಇಲ್ಲದ ಧರ್ಮವನ್ನು ವಿರೋಧಿಸಿದವರು ಸ್ವಾಮಿ ವಿವೇಕಾನಂದರು,ಹಸಿದ ಹೊಟ್ಟೆಗೆ ಅನ್ನ ನೀಡದ,ವಿಧವೆಯ ಕಣ್ಣಿರು ಒರೆಸದ,ಯಾವುದೆ ದೇವರು, ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ ಎಂದ ವಿವೇಕಾನಂದರು ಮಾತುಗಳು ನಿಜವಾಗಿದೆ ಎಂದು ಭಾರತ ವಿದ್ಯಾರ್ಥಿ ಪೆಡರೇಷನ್(ಎಸ್‌ಫ್‌ಐ) ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿದರು.
ನಗರದ ಹೊರವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಂ2 ಹಾಸ್ಟೆಲ್‌ನಲ್ಲಿ ಎಸ್‌ಎಫ್‌ಐ ಹಾಸ್ಟೆಲ್ ಘಟಕ ಆಯೋಜಿಸಿದ ಯುವಜನರ ಸ್ಪೂರ್ತಿ,ಮಹಾ ಮಾನವತಾವಾದಿ ಸ್ವಾಮಿ ವಿವೇಕಾನಂದರ ಜನ್ಮ ದಿನ ಹಾಗೂ ಯುವಜನ ದಿನಾಚರಣೆಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಾರೆ್ಪಣ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಮಾನವೀಯತೆಯನ್ನು ಮರೆತ ಧರ್ಮಗಳು ಸಂಘರ್ಷಕ್ಕ ದಾರಿ ಮಾಡಿಕೊಡುತ್ತಿವೆ.ಚಿಕ್ಯಾಗೋ ಸಮ್ಮೇಳನದಲ್ಲಿ ಸಹೋದರ-ಸಹೋದರಿಯರೆ ಎನ್ನುವ ಮೂಲಕ ಇಡೀ ಭಾರತ ದೇಶದ ಬೌದ್ಧಿಕ ಶ್ರೀಮಂತಿಕೆ ತೆರೆದಿಟ್ಟ ವಿವೇಕಾನಂದರನ್ನು ವಿದ್ಯಾರ್ಥಿ-ಯುವಜನರು ಆದರ್ಶವಾಗಿ ಅವರ ವಿಚಾರಗಳನ್ನು ಅಭ್ಯಾಸ ಮಾಡಬೇಕು.ಇಂದಿನ ಯುವಜನತೆ ವಿವೇಕಾನಂದರ ನಿಜ ಇತಿಹಾಸವನ್ನು ಓದುವ ಮೂಲಕ ಮೂಲಭೂತವಾದಿಗಳಿಂದ ಬಿಡಿಸಬೇಕಿದೆ.ಸೌಹಾರ್ದತೆಯನ್ನು ಕಾಪಾಡಬೇಕಿದೆ ಎಂದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮುತ್ತುರಾಜ್ ದೊಡ್ಡಮನಿ, ತಾಲ್ಲೂಕು ಅಧ್ಯಕ್ಷ ಸುಲೆಮಾನ್ ಮತ್ತಿಹಳ್ಳಿ, ಹಾಸ್ಟೆಲ್ ಘಟಕ ಅಧ್ಯಕ್ಷ ಪ್ರಜ್ವಲ್ ಹರಿಜನ, ಮುಖಂಡರಾದ ವಿರೂಪಾಕ್ಷ ಕೆ, ಧನುಷ್ ದೊಡ್ಡಮನಿ, ತೇಜಸ್ ಎನ್ ಡಿ, ಮನು ಕೆ, ಅಜೇಯ ಎಚ್, ಸಂಜೀವ್ ಪಾಟೀಲ್, ಪ್ರಕಾಶ್ ಕೆ ಆರ್, ನಾಗರಾಜ ಎಲ್, ನವೀನ ಲಮಾಣಿ, ವಿನಾಯಕ ಅಸುಂಡಿ, ರಘು ಎಲ್, ಪುನೀತ್ ಲಮಾಣಿ ಸಿಬ್ಬಂದಿಗಳಾದ ವೆಂಕಟೇಶ ಕೊರಗರ, ರವಿ ಹಾವೇರಿ, ಫಕೀರ್ಪ ಭಜಂತ್ರಿ ಉಪಸ್ಥಿತರಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 