ವೀರಾಂಜನೇಯ ಇಂದಿನ ಯುವಕರಿಗೆ ಸ್ಪೂರ್ತಿ: ರಮೇಶ ಅಳಗುಂಡಿ

ವೀರಾಂಜನೇಯ ಇಂದಿನ ಯುವಕರಿಗೆ ಸ್ಪೂರ್ತಿ: ರಮೇಶ ಅಳಗುಂಡಿ Veeranjaneya is an inspiration to today's youth: Ramesh Alagundi

ಲೋಕದರ್ಶನ ವರದಿ 

ವರದಿ * ಅಡಿವೇಶ ಮುಧೋಳ. 

         ಬೆಟಗೇರಿ 02 : ಇಂದಿನ ಯುವಕರು ದುಶ್ಚಟಗಳಿಗೆ ದಾಸರಾಗಬಾರದು. ಎಲ್ಲ ಸಂಪತ್ತಿಗಿಂತ ಸದೃಡ ಆರೋಗ್ಯ ಸಂಪತ್ತು ಬಹುದೊಡ್ಡದಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೇ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು. 

       ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ದೇಯಣ್ಣವರ ಸರಕಾರಿ ಪ್ರೌಢ ಶಾಲೆಯಲ್ಲಿ ಹನುಮಾನ ಜಯಂತಿ ಪ್ರಯುಕ್ತ ಏ.1ರಂದು ನಡೆದ ಪ್ರೌಢ ಶಾಲೆಯ ಆವರಣದಲ್ಲಿ ದಿ.ಕಿರಣ ರಮೇಶ ಅಳಗುಂಡಿ ಸ್ಮರಣೆಗಾಗಿ ಅವರ ಸಹೋದರ ಚೇತನ ಅಳಗುಂಡಿ ಅವರು ಸುಮಾರು 50 ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶ್ರೀವೀರಾಂಜನೇಯ ನೂತನ ಮೂರ್ತಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಯುವ ಸಮುದಾಯ ಆರೋಗ್ಯ ವೃದ್ಧಿಗೆ ಗಮನ ಕೊಡಬೇಕು. ಶ್ರೀರಾಮನ ಮೇಲೆ ಇದ್ದ ಹನುಮನ ಭಕ್ತಿ, ತತ್ವ ಸಿದ್ದಾಂತ ಸ್ಪೂರ್ತಿಯಾಗಿದೆ ಎಂದರು. 

       ಸ್ಥಳೀಯ ವೇದಮೂರ್ತಿ ವಿಜಯ ಹಿರೇಮಠ ಹನುಮನ ನೂತನ ಮೂರ್ತಿಗೆ ಪೂಜೆ, ಪ್ರಾಣಪ್ರತಿಷ್ಠಾಪನೆ, ಪುಷ​‍್ರ​‍್ಾಚನೆ ನೆರವೇರಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಮುಖ್ಯೋಪಾಧ್ಯಯ ರಮೇಶ ಅಳಗುಂಡಿ, ಈರಣ್ಣ ಪಟಗುಂದಿ, ಮಂಜುನಾಥ ಸವತಿಕಾಯಿ, ಬಸವರಾಜ ಗೋಸಲೆ, ಸಿರಾಜಅಹಮ್ಮದ ಜಿಡ್ಡಿಮನಿ, ನಾಗರಾಜ ಅರಳಿಮಟ್ಟಿ, ಮಲ್ಹಾರಿ ಪೋಳ, ಸಿದ್ರಾಮೇಶ್ವರ ಕಮತ, ಆನಂದ ಬಡಿಗೇರ, ಶಾಲೆಯ ಸಹಶಿಕ್ಷಕರು, ಅತಿಥಿಶಿಕ್ಷಕರು, ಶಿಕ್ಷಣಪ್ರೇಮಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.