ಇಂದಿನಿಂದ ವೀರಭದ್ರೇಶ್ವರ ಜಾತ್ರೆ: ವಿವಿಧ ಧಾರ್ಮಿಕ ಕಾರ್ಯಕ್ರಮ

ಇಂದಿನಿಂದ ವೀರಭದ್ರೇಶ್ವರ ಜಾತ್ರೆ: ವಿವಿಧ ಧಾರ್ಮಿಕ ಕಾರ್ಯಕ್ರಮ Veerabhadreshwara Fair from today: Various religious programs

ಪಾಲಬಾವಿ 30: ರಾಯಬಾಗ ತಾಲೂಕು ಪಾಲಬಾವಿ ಗ್ರಾಮದ ಶೇಗುಣಶಿ ತೋಟದಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ, ಕಳಸಾರೋಹಣ, ಲಕ್ಷ ದೀಪೋತ್ಸವ ಹಾಗೂ ಮಹಾತ್ಮರಿಂದ ಸತಂಗ ಸಮ್ಮೇಳನವು ಮೇ 1ರಿಂದ 5 ದಿನಗಳ ವರೆಗೆ ಸಡಗರ ಸಂಭ್ರಮದಿಂದ ಜರಗುವುದು.  ಶುಕ್ರವಾರ ಮೇ 1ರಂದು ಸಾಯಂಕಾಲ 5ಗಂಟೆಗೆ ಮುಗಳಖೋಡ -ಜಿಡಗಾ ಮಠದ ಪೀಠಾಧಿಪತಿ ಡಾ.ಮುರುಗರಾಜೇಂದ್ರ ಮಹಾ ಶಿವಯೋಗಿಗಳ ಅಮೃತ ಹಸ್ತದಿಂದ ದೇವಸ್ಥಾನವು ಉದ್ಘಾಟನೆಗೊಳ್ಳುವುದು. ಅದೇ ದಿನ ಸಾಯಂಕಾಲ 7ಗಂಟೆಗೆ ಮಹಾತ್ಮರಿಂದ ಪ್ರವಚನ ಕಾರ್ಯಕ್ರಮವು ಜರುಗುವುದು.  

ಶನಿವಾರ ಮೇ 2ರಂದು ಸಾಯಂಕಾಲ 7ಗಂಟೆಗೆ ಗ್ರಾಮದ ಶಾಂತಮಲ್ಲ ಕುಟೀರದ ವೇದಮೂರ್ತಿ ವೀರಯ್ಯ ಸ್ವಾಮೀಜಿ ಹಾಗೂ ಗುರುಮಠದ ಅಜ್ಜಯ ಸ್ವಾಮೀಜಿ ಅವರಿಂದ ಪ್ರವಚನ ಕಾರ್ಯಕ್ರಮವು ಜರುಗುವುದು. ರವಿವಾರ ಮೇ 3 ರಂದು ಸಾಯಂಕಾಲ 7ಗಂಟೆಗೆ ಸುಪ್ರಸಿದ್ಧ ಭಜನಾ ಕಲಾವಿದರಿಂದ ಭಜನಾ ಕಾರ್ಯಕ್ರಮವು ಜರುಗುವುದು. ಸೋಮವಾರ ಮೇ 4ರಂದು ಮುಂಜಾನೆ 5ಗಂಟೆಗೆ ಗಂಟೆಗೆ ನವಗ್ರಹ ಹೋಮ ಕಾರ್ಯಕ್ರಮವು, ಕಳಸಾ ರೋಹಣದ ಭವ್ಯ ಮೆರವಣಿಗೆ ನಡೆಯುವುದು. ಸಂಜೆ 4ಗಂಟೆಗೆ ಶ್ರೀಶೈಲ  ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರ ಸಾನಿಧ್ಯದಲ್ಲಿ ಕಳಸಾರೋಹಣ ನಂತರ ಸಾಯಂಕಾಲ 7ಗಂಟೆಗೆ ಲಕ್ಷ ದೀಪೋತ್ಸವದ ಉದ್ಘಾಟನೆ ಹಾಗೂ ಸತ್ಸಂಗ ಕಾರ್ಯಕ್ರಮವು ಜರುಗುವುದು.  

ಮಂಗಳವಾರ ಮೇ 5ರಂದು ಮುಂಜಾನೆ 5ಗಂಟೆಗೆ ರುದ್ರಾಭಿಷೇಕ ಮತ್ತು ಹೆಣ್ಣು ಮಕ್ಕಳ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮವು ಜರಗುವುದು. ಮುಂಜಾನೆ 10ಗಂಟೆಗೆ ದೇವಸ್ಥಾನದ ಮುಖ್ಯ ಅರ್ಚಕರು ದೇವಋಷಿ ಶರಣಪ್ಪನವರಿಂದ ನಿಗಿಣಿಗೆ ಉರಿಯುವ ಕೆಂಡದ ಮೇಲೆ ಲೋಕ ಕಲ್ಯಾಣಾರ್ಥವಾಗಿ ಕೆಂಡ ಮೇಲೆ ನಡೆಯುವರು. 11ಗಂಟೆಗೆ ಧರ್ಮಸಭೆ, ಮಹಾತ್ಮರಿಂದ ಪ್ರವಚನ ಕಾರ್ಯಕ್ರಮವು ಜರುಗುವುದು ನಂತರ ದಾಸೋಹದ ಮಹಾಮನೆಯಲ್ಲಿ ಅನ್ನ ಸಂತರೆ​‍್ಣ ನೆರವೇರುವುದು ಎಂದು ಗ್ರಾಪಂ ಮಾಜಿ ಸದಸ್ಯ ರಮೇಶ ಮರಡಿ, ದೇವಸ್ಥಾನದ ಸ್ವಾಗತ ಸಮಿತಿ ಆಡಳಿತಾಧಿಕಾರಿ ಅಗ್ರಾಣಿ ಶೇಗುಣಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.