ವಣ್ಣೂರ ಗ್ರಾಮದ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
Vannur village school's annual friendship conference program
ನೇಸರಗಿ 02 : ವಿದ್ಯಾರ್ಥಿಗಳು ಒಳ್ಳೆಯ ವಿದ್ಯಾರ್ಜನೆ ಮಾಡಿ ಯಶಸ್ಸಿನತ್ತ ದಾಪುಗಾಲು ಇಡಬೇಕೆಂದು ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ಸಮೀಪದ ವಣ್ಣೂರ ಗ್ರಾಮದ ಶಾಂತಿನಿಕೇತನ ಕನ್ನಡ ಮತ್ತು ಆಂಗ್ಲ ಮಾದ್ಯಮ ಶಾಲೆಯ 19 ನೇ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉನ್ನತ ಗುರಿ ಇಟ್ಟುಕೊಂಡು ಮೊಬೈಲ್ ಗೀಳು ಬಿಟ್ಟು ನಿತ್ಯ ಓದಿನತ್ತ ವಿದ್ಯಾರ್ಥಿಗಳು ತೊಡಗಿಕೊಂಡರೆ ಉತ್ತಮ ಅಂಕಗಳೊಂದಿಗೆ ಪಾಸಾಗಿ ಜೀವನದ ಯಶಸ್ಸಿನ ಮೆಟ್ಟಿಲು ಹತ್ತಲು ಸಾದ್ಯ ಇದರತ್ತ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಗುರಿಮುಟ್ಟಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜಿ.ಪಂ ಮಾಜಿ ಸದಸ್ಯ ನಿಂಗಪ್ಪ ಅರಕೇರಿ, ಟಿ.ಆರ್.ಕಾಗಲ, ದೇಶನೂರ ಪಿಕೆಪಿಎಸ್ ಅಧ್ಯಕ್ಷ ಚನ್ನಪ್ಪ ಕಮತಗಿ, ಸಿದ್ದನಗೌಡ ಪಾಟೀಲ, ಶೇಖರ ಕೊಮನ್ನವರ, ಹಣಮಂತ ದೊಡ್ಡಣ್ಣವರ, ಎಚ್ ಡಿ.ಕಿಲ್ಲೇದಾರ, ಎಸ್ ಎಲ್.ರಾಮಾನಟ್ಟಿ, ಆರ್ ಆರ್ ಪಾಟೀಲ, ಎಸ್.ಎಪ್ ನಾಯಕ,ಎಪ್ .ಎಂ.ಭಟ್ಟಂಗಿ, ಸಂಸ್ಥೆಯ ಅಧ್ಯಕ್ಷ ಸುರೇಶ ಗಂಗನ್ನವರ, ರಾಮಸಿದ್ದಪ್ಪ ಕಡಬಿ, ಆರ್.ಬಿ.ಶೆಬನ್ನವರ,ಡಾ. ಪಿ.ವಿ.ಹಿರೇಮಠ,ಮಂಜುಳಾ ಪಾಟೀಲ, ಸಿಆರ್.ಪಾಟೀಲ, ಶಿವಲಿಂಗಪ್ಪ ಅಪ್ಪನ್ನವರ, ಶಿಕ್ಷಕರು, ವಿದ್ಯಾರ್ಥಿಗಳು ಮೊದಲಾದವರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 