ವನ ಮಹೋತ್ಸವ ಮತ್ತು ಪರಿಸರ ಮಿತ್ರ ಪ್ರಶಸ್ತಿ ಪ್ರದಾನ
Vana Mahotsava and Presentation of 'Environment-Friendly' Awards
ತಾಳಿಕೋಟೆ 13 : ಪರಮಾನಂದ ಬೆಟ್ಟದಲ್ಲಿ ಪರಿಸರ ಸ್ನೇಹಿತರ ಬಯಕೆಯಂತೆ ಡೀಮ್ಡ್ ಅರಣ್ಯ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅದನ್ನು ದೇವಿ ವನವಾಗಿಸಲು ಇಟ್ಟಿರುವ ಬೇಡಿಕೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮುದ್ದೇಬಿಹಾಳ ಸಾಮಾಜಿಕ ಅರಣ್ಯ ವಲಯಾಧಿಕಾರಿ ಬಸವರಾಜ ಬಿರಾದಾರ ನರಸಲಗಿ ತಿಳಿಸಿದರು. ಅವರು ತಾಲ್ಲೂಕಿನ ಬ.ಸಾಲವಾಡಗಿ ಗ್ರಾಮದ ಪರಮಾನಂದ ಬೆಟ್ಟದಲ್ಲಿ ಅರಣ್ಯ ಇಲಾಖೆ, ‘ನಮ್ಮ ಹೆಮ್ಮೆ, ನಮ್ಮ ಸಾಲವಾಡಗಿ’, ಹಸಿರು ಸಂಪದ ಬಳಗ ತಾಳಿಕೋಟೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಏಳನೆಯ ವರ್ಷದ ವನಮಹೋತ್ಸವ-2026 ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಜನರ ಸಹಭಾಗಿತ್ವವಿಲ್ಲದೇ ಸರ್ಕಾರದ ಯಾವ ಯೋಜನೆಗಳೂ ಫಲಪ್ರದವಾಗುವುದಿಲ್ಲ, ಪರಿಸರ ರಕ್ಷಣೆಯಲ್ಲಿ ಸ್ಥಳೀಯ ಗ್ರಾಮಸ್ಥರು, ಪರಿಸರ ಪ್ರೇಮಿಗಳು ಪಾಲ್ಗೊಂಡು ಸಾಮಾಜಿಕ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಹಸೀರೀಕರಣ ಹೆಚ್ಚಿದೆ ಎಂದರು. ಸಾಹಿತಿ ಅಶೋಕ ಹಂಚಲಿ, ಸಾಹಿತಿ ಶ್ರೀಕಾಂತ ಪತ್ತಾರ, ವಿದ್ಯಾರ್ಥಿನಿ ಸಹನಾ ದೇಸಾಯಿ ಅನಿಲಕುಮಾರ ಇರಾಜ ಮಾತನಾಡಿದರು. ರಾಮನಗೌಡ ಮುಂದಿನಮನಿ, ಸ್ವಾಗತಿಸಿದರು. ಅಂಬರೀಶ ಹಿರೇಮಠ, ಎಸ್.ಎಸ್.ಗಡೇದ ನಿರ್ವಹಿಸಿದರು. ಅಜೀತ ಯಾಳಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಆರ್.ಎಫ್.ಓ ಗೀರೀಶ ಹಲ್ಕುಡೆ, ಡಿ. ಆರ್.ಎಫ್.ಓ ರಮೇಶ, ವಿಜಯಪುರ ಡಯಟ್ ನ ಹಿರಿಯ ಉಪನ್ಯಾಸಕಿ ರೇಣುಕಾ ಕಲಬುರ್ಗಿ, ಗ್ರಾ.ಪಂ. ಪಿಡಿಓ, ಜಿ.ಪಂ.ನಿವೃತ್ತ ಅಧೀಕ್ಷಕ ಎನ್.ಡಿ.ಪಾಟೀಲ, ಹಸಿರು ಸಂಪದ ಬಳಗದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ, ನಮ್ಮ ಸಾಲವಾಡಗಿ ನಮ್ಮ ಹೆಮ್ಮೆ ಬಳಗದ ಅಧ್ಯಕ್ಷ ಶಿವರಾಮ ಪಾಟೀಲ, ಮುದ್ದೇಬಿಹಾಳ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ರವಿ ಗೂಳಿ,
ಬಸವ ಹಸಿರು ಬಳಗದ ಸಂಸ್ಥಾಪಕ ಭೀಮನಗೌಡ ಗುಂಡಕನಾಳ, ನಿವೃತ್ತ ಎಸ್.ಪಿ.ರವಿ ಪಾಟೀಲ, ಮುದಕನಗೌಡ ಹೊರಗಿನಮನಿ, ಮುದಕನಗೌಡ ದೊಡಮನಿ, ಮಧುಗೌಡ ಪಾಟೀಲ, ಪ್ರಭುಗೌಡ ಗೌಡರೆಡ್ಡಿ, ಡಾ.ಸರೋಜಿನಿ ಕಾರ್ಚಿ, ಡಾ.ಆನಂದ ಭಟ್ಟ, ಡಾ.ಎ.ಎ.ನಾಲಬಂದ, ಡಾ.ಶ್ರೀಶೈಲ ಹುಕ್ಕೇರಿ, ಪ್ರಶಾಂತ ಜನಾದ್ರಿ, ಕಾಶಿನಾಥ ಸಜ್ಜನ ಸಿದ್ದು ಕರಡಿ, ಸತೀಶ ಕೇಮಶೆಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರು, ಮುದ್ದೇಬಿಹಾಳ ಹಸಿರು ತೋರಣ ಗೆಳೆಯರ ಬಳಗ, ಬಸವ ಹಸಿರು ಬಳಗದವರು ಪಾಲ್ಗೊಂಡಿದ್ದರು.
ವನಮಹೋತ್ಸವದಂಗವಾಗಿ ಬೆಟ್ಟದಲ್ಲಿ ಇನ್ನೂರಕ್ಕೂ ಅಧಿಕ ಸಸಿಗಳನ್ನು ನೆಡಲಾಯಿತು. ಪರಿಸರ ಮಿತ್ರ ಪ್ರಶಸ್ತಿ ಪ್ರದಾನ: ಬ.ಸಾಲವಾಡಗಿಯ ನಿಂಗಣ್ಣ ಹಳ್ಳಿ. ನೆಡು ತೋಪು ಕಾವಲುಗಾರ ಅವರಿಗೆ ಹಾಗೂ ಸರ್ಕಾರಿ ಪ್ರೌಢಶಾಲೆ ಅಸ್ಕಿ, ಅವರಿಗೆ ಅವರುಗಳಿಗೆ ಹಸಿರು ಸಂಪದ ಬಳಗದ ವತಿಯಿಂದ ‘ಪರಿಸರ ಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. .ತಾಳಿಕೋಟೆ ತಾಲ್ಲೂಕಿನ ಬ.ಸಾಲವಾಡಗಿ ಗ್ರಾಮದ ಪರಮಾನಂದ ಬೆಟ್ಟದಲ್ಲಿ ವನಮಹೋತ್ಸವದಂಗವಾಗಿ ಸಸಿ ನೆಡುವ ಕಾರ್ಯಕ್ರಮ ಭಾನುವಾರ ನಡೆಯಿತು.
ಬಕ್ಕಖಾಲಿ ಕರಾವಳಿಯಲ್ಲಿ ಮುಳುಗಿದ್ದ ಮೀನುಗಾರಿಕಾ ದೋಣಿಯಲ್ಲಿ 9 ಮೀನುಗಾರರ ಶವ ಪತ್ತೆ; 6 ಮಂದಿಗಾಗಿ ಶೋಧ ಮುಂದುವರಿಕೆ
ಅಂತರರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್ 2026ರಲ್ಲಿ ಚಿನ್ನದ ಪದಕಗಳ ಸಾಧನೆ ಮಾಡಿದ ಭಾರತೀಯ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
ಶಾಸಕರ ಆಮಿಷ ಆರೋಪದ ಕಾನೂನು ನೋಟಿಸ್ ಬಳಿಕ ಬಿಜೆಪಿ ನ್ಯಾಯಾಲಯದ ಮೂಲಕ ರಾಜಕೀಯ ಹೋರಾಟ ನಡೆಸುತ್ತಿದೆ ಎಂದು ಒಮರ್ ಅಬ್ದುಲ್ಲಾ ಆರೋಪ
ಮಧುರೈ ಸಮೀಪ ಓಮ್ನಿ ಬಸ್–ಟಿಎನ್ಎಸ್ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಐವರು ಸಾವು, 42 ಮಂದಿಗೆ ಗಾಯ
ಆರೋಪಿತ ರೌಡಿ ಶೀಟರ್ ಜನ್ಮದಿನಾಚರಣೆಯಲ್ಲಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಭಾಗಿ; ಕರ್ನಾಟಕದಲ್ಲಿ ರಾಜಕೀಯ ವಿವಾದ
ಮಾಹಿತಿ ಹಕ್ಕು ಕಾಯ್ದೆ ದುರ್ಬಲಕ್ಕೆ ಯತ್ನ: ಆಯುಕ್ತರ ವಿರುದ್ಧ ಕ್ರಮಕೈಗೊಳ್ಳದಿದ್ದರೆ ಕಾನೂನು ಹೋರಾಟ, ಗಾಡಾದ ಎಚ್ಚರಿಕೆ 