ವಾಲ್ಮೀಕಿ ನಾಯಕ ಸಮಾಜದ ಚಿಂತನ ಮಂಥನ ಸಮಾವೇಶ: ಬಸವರಾಜ ಹಾದಿಮನಿ
Valmiki Nayaka Samaj's Thought-Culture Conference: Basavaraja Hadimani
ವಾಲ್ಮೀಕಿ ನಾಯಕ ಸಮಾಜದ ಚಿಂತನ ಮಂಥನ ಸಮಾವೇಶ: ಬಸವರಾಜ ಹಾದಿಮನಿ
ಹಾವೇರಿ 04: ಅತಿ ಶೀಘ್ರ ನಗರದಲ್ಲಿ ವಾಲ್ಮೀಕಿ ನಾಯಕ ಸಮಾಜದ ಚಿಂತನ ಮಂಥನ ಸಮಾವೇಶವನ್ನು ಆಯೋಜಿಸಲು ನಿರ್ಧಾರ ಮಾಡಲಾಗಿದೆ ಎಂದು ವಾಲ್ಮೀಕಿ ನಾಯಕ ಸಮಾಜದ ಹಿರಿಯ ಮುಖಂಡರು ಹಾಗೂ ನ್ಯಾಯವಾದಿಗಳಾದ ಬಸವರಾಜ ಹಾದಿಮನಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ ವಾಲ್ಮೀಕಿ ನಾಯಕ ಸಮಾಜದ ಸಭೆಯ ಅಧ್ಯಕ್ಷತೆವಹಿಸಿ ಸಭೆಯು ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ಮಾತನಾಡಿದರು. ರಾಜ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ವೋಟ್ ಬ್ಯಾಂಕ್ ಮಾಡಿಕೊಂಡು ನಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ.
ರಾಜ್ಯದಲ್ಲಿ ನಮ್ಮ ಸಮುದಾಯದ ರಾಜಕೀಯ ಸ್ಥಾನಮಾನ ನೀಡುವಲ್ಲಿ ಮೀನಾಮೇಷಾ ಮಾಡಿ ಸ್ಥಳೀಯ ಶಾಸಕರುಗಳು ಸಮುದಾಯದವರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ರಾಜ್ಯದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡವರ ಮತ್ತು ನಕಲಿ ಜಾತಿ ಪ್ರಮಾಣ ಪತ್ರ ಕೊಡುವವರ ವಿರುದ್ಧ ಪಕ್ಷತೀತವಾಗಿ ಹೋರಾಟ ಮಾಡಬೇಕಾಗುತ್ತದೆ. ಸಮುದಾಯದವರೆಲ್ಲರೂ ತಮ್ಮೊಳಗಿನ ಕೀಳರಮೆ ಬಿಟ್ಟು, ನಾವುಗಳು ಒಗ್ಗಟ್ಟಾಗಿ ಹೋರಾಟ ಮಾಡಿದರೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳ ಬಹುದಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರಕಾರದ ಇದ್ದಾಗ ನಮಗೆ ಶೇಕಡಾ 3 ಮೀಸಲಾತಿಯನ್ನು ಏಳಕ್ಕೆ ಏರಿಸಿ, ಆದೇಶ ಮಾಡಿದ್ದರು. ಆದರೆ ಮೊನ್ನೆ ನಡೆದ ಲೋಕಸೇವಾ ಆಯೋಗದ ಪರೀಕ್ಷೆಗೆ ನಮ್ಮ ಸಮುದಾಯದವರಿಗೆ ಕೊಟ್ಟ ಪ್ರತಿಶತ ಏಳು ಪ್ರತಿಶತ ಕೆಎಟಿ ಬಿಟ್ಟು ಮೂರಕ್ಕೆ ಇಟ್ಟಿದೆ. ಇದರಿಂದ ನಮ್ಮ ಸಮುದಾಯಕ್ಕೆ ತುಂಬಾ ಅನ್ಯಾಯವಾಗಿದೆ. ನಮ್ಮ ಹಕ್ಕುಗಳನ್ನು ಪಡೆಯುವುದಕ್ಕೆ ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅತಿ ಅವಶ್ಯಕವಿದೆ ಎಂದು ಹೇಳಿದರು.
ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹನುಮಂತಪ್ಪ ದೇವಿಗೆಹಳ್ಳಿ ಮಾತನಾಡಿ ನಾವು ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಅತಿ ಘೋರವಾದ ಅನ್ಯಾಯವನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ. ರಾಜ್ಯ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸುಮಾರು 187 ಕೋಟಿ ಹಣ ದುರ್ಬಳಿಕೆ ಆದರೆ ಯಾವೊಬ್ಬ ಸಮುದಾಯದ ಮಂತ್ರಿಗಳಾಗಲಿ ಶಾಸಕರುಗಳಾಗಲಿ ಚಕಾರ ಎತ್ತಲಿಲ್ಲ. ಸಮುದಾಯಕ್ಕೆ ಮೀಸಲಿದ್ದ ಹಣವನ್ನು ಗ್ಯಾರೆಂಟಿ ಯೋಜನೆಗೆ ಬೆಳಗ್ಗೆ ಮಾಡಿಕೊಂಡಿರುವುದು ಎಂದು ಹೇಳಿದರು. ಸಮಾಜದ ಮಾಜಿ ಅಧ್ಯಕ್ಷರಾದ ಹನುಮಂತಪ್ಪ ಚಳಿಗೇರಿ ಹಾಗೂ ಮಂಜುನಾಥ ಕಿತ್ತೂರ ಮಾತನಾಡಿದರು. ಸಭೆಯಲ್ಲಿ ಸಮುದಾಯದ ಹಿರಿಯರಾದ ದುರ್ಗಪ್ಪ ಹೊಸಮನಿ. ಸುಭಾಷ ಚಂದ್ರ ತಳವಾರ, ರಮೇಶ ಕರಿಭೀಮಣ್ಣವರ, ಹನುಮಂತಪ್ಪ ಬಂಗಿ, ಬಸವರಾಜ ಹಂಚಿನಮನಿ, ಪರಮೇಶ್ವರ ಜಡತೇಲಿ, ರಮೇಶ ಒಬಲೇರ. ಹೇಮಪ್ಪ ಹೊಂಕಲದ, ಪ್ರಕಾಶ ಬಾಗೇದಿ, ಎಂ ನಾಗರಾಜ, ಬಸವಣ್ಣಪ್ಪ ತಳವಾರ, ಹರೀಶ ಮೇಲ್ಮುರಿ ಸೇರಿದಂತೆ ಅನೇಕರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 