ಬಸವ ಕೇಂದ್ರದಿAದ ವಚನ ಶ್ರಾವಣ ಕಾರ್ಯಕ್ರಮ

ಬಸವ ಕೇಂದ್ರದಿAದ ವಚನ ಶ್ರಾವಣ ಕಾರ್ಯಕ್ರಮ Vachana Shravan program of Basava Kendra

ಲೋಕದರ್ಶನ ವರದಿ 

ಹುಬ್ಬಳ್ಳಿ, ಆ.೨೪: ಬಸವ ಕೇಂದ್ರದ ವತಿಯಿಂದ ವಚನ ಶ್ರಾವಣ ಕಾರ್ಯಕ್ರಮವನ್ನು ಸೋಮವಾರ (ಆ.೨೪) ಸಂಜೆ ೬ ಗಂಟೆಗೆ ಹುಬ್ಬಳ್ಳಿಯ ಉಣಕಲ್ ಶ್ರೀ ಸಿದ್ಧೇಶ್ವರ ಮಠದ (ಹೊಸಮಠ) ಆವರಣದಲ್ಲಿ ಆಯೋಜಿಸಲಾಗಿದೆ. 

ಯಮಕನಮರಡಿ ಹುಣಸಿಕೊಡ್ಲಮಠದ ಶ್ರೀ ಜಗದ್ಗುರು ಶೂನ್ಯಸಂಪಾದನ ಪೀಠದ ಪರಮಪೂಜ್ಯ ಶ್ರೀ ಸಿದ್ಧಬಸವ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ‘ಅಕ್ಕಮಹಾದೇವಿ ಅವರ ಕಂಗೊಳಿಗೆ ಶೃಂಗಾರ ಗುರುಹಿರಿಯರ ನೋಡುವುದು...’ ಎಂಬ ವಚನದ ಕುರಿತು ಅನುಭಾವ ನೀಡಲಿದ್ದಾರೆ. 

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹಾಗೂ ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಹಳ್ಳಿ ಅವರು ಉಪಸ್ಥಿತರಿರುವರು ಎಂದು ಗ್ರಂಥಪಾಲಕ ಡಾ. ಸುರೇಶ್ ಡಿ. ಹೊರಕೇರಿ ತಿಳಿಸಿದ್ದಾರೆ. 

ಬಸವಾಭಿಮಾನಿಗಳು ತಿಂಗಳ ಪರ್ಯಂತ ನಡೆಯಲಿರುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಯಶಸ್ವಿಗೊಳಿಸಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಂಥಪಾಲಕ ಡಾ. ಸುರೇಶ್ ಡಿ. ಹೊರಕೇರಿ ಮನವಿ ಮಾಡಿದ್ದಾರೆ.