ಸೆಪ್ಟೆಂಬರ್ 29ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುತ್ತಿಗೆ

ಸೆಪ್ಟೆಂಬರ್ 29ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುತ್ತಿಗೆ  Union Minister Prahlad Joshi's house besieged on September 29


ವಿಜಯಪುರ   27: ಕಬ್ಬು ಬೆಳೆಗಾರರಿಗೆ ನಿರಂತರವಾಗಿ ಸಕ್ಕರೆ ಕಾರ್ಖಾನೆಗಳಿಂದ ಲೂಟಿ , ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರನ್ನು ಸಂಪೂರ್ಣ ಕಡೆಗಣನೆ ಮಾಡಿ ಕಳೆದ 30 ವರ್ಷಗಳಿಂದ ಯೋಗ್ಯವಾದ ವೈಜ್ಞಾನಿಕ ಬೆಲೆ ನಿಗದಿ ಪಡೆಸುವಲ್ಲಿ ವಿಫಲವಾಗಿದೆ ಈ ನಿಮಿತ್ಯವಾಗಿ ಫೆಬ್ರವರಿ 29ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿಯ ನಿವಾಸಕ್ಕೆ 2 ಲಕ್ಷಕ್ಕೂ ಅಧಿಕ ರೈತರೊಂದಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಖಾಸಗಿ ಹೋಟೆಲಿನಲ್ಲಿ ಕರೆದಿರುವ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯ ಉಪಾಧ್ಯಕ್ಷರಾದ ಶಾಂತಗೌಡ ಪಾಟೀಲ ನಡಹಳ್ಳಿ ಅವರು ಮಾತನಾಡುತ್ತಾ ಸಕ್ಕರೆಗೆ ಕನಿಷ್ಠ ಮಾರಾಟಗಾರ(ಎಂ ಎಸ್ ಪಿ) 60 ರೂಪಾಯಿಗೆ ಏರಿಸಬೇಕು , ಪ್ರಸಕ್ತ 2026 - 27ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 5500/- ದರ ನಿಗದಿ ಮಾಡಬೇಕು, ಸರ್ಕಾರದಿಂದ ಡಿಜಿಟಲ್ ತೂಕದ ಯಂತ್ರ ಸ್ಥಾಪಿಸಬೇಕು. ತೂಕದಲ್ಲಿ ಪಾರದರ್ಶನ ಇರಬೇಕು ,ಕಬ್ಬಿನ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕಬೇಕು, 

ಕಬ್ಬಿನ ಇಳುವರಿಯಲ್ಲಿ ಪಾರದರ್ಶಕ ತರಲು ರೈತ ಮುಖಂಡರು ಮತ್ತು ಸರ್ಕಾರದ ಅಧಿಕಾರಿಗಳು ಇರಬೇಕು. ಕಬ್ಬಿನ ಕಾರ್ಖಾನೆ ಆದಾಯದಲ್ಲಿ 75ಅ ರೈತರಿಗೆ 25 ಅ ಕಾರ್ಖಾನೆಗೆ ಕೊಡಬೇಕು. ಎಂದರು.ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ ಅವರು ಮಾತನಾಡುತ್ತಾ ವಾರ್ಷಿಕವಾಗಿ ಕಬ್ಬಿನಿಂದ ಸೃಷ್ಟಿಯಾಗುವ ಆದಾಯದಲ್ಲಿ ರೈತರಿಗೆ ನ್ಯಾಯಯುತವಾದ ಪಾಲು ಸಿಗಲೇಬೇಕು ಪಾರದರ್ಶಕವಾಗಿ ಆಡಿಟ್ ಮಾಡುವಂತಹ ಆಗಬೇಕು.

ಡಾ. ಎಂಎಸ್ ಸ್ವಾಮಿನಾಥನ್ ವರದಿ ಜಾರಿಯಾಗಬೇಕು ಎಲ್ಲಾ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಆಗಬೇಕು ಅ2+50ಅಈ ಮೇಲಿನ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್29ಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆ ಮುತ್ತಿಗೆ ಹಾಕಲಾಗುವುದು ಎಂದರು   ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಜಿಲ್ಲಾ ಕಾರ್ಯಾಧ್ಯಕ್ಷ ಪ್ರಕಾಶ ತೇಲಿ,ಸಂಗಪ್ಪ ಣಚಿಏಞಜ ಅಮರೇಶ ಬೈರಗೊಂಡ ರೈತ ಮುಖಂಡರಿದ್ದರು