ಅರಸಹಳ್ಳಿಯಲ್ಲಿ ದೇವಗಿರಿ ಯಾದವರ ಗಜಲಕ್ಷ್ಮಿಯ ಶಿಲ್ಪದ ಸೊಂಡಿಲು ಪತ್ತೆ
Trunk of Devagiri Yadava's Gajalakshmi sculpture discovered in Arasahalli
ವಿಜಯಪುರ 09: ಅರಸಹಳ್ಳಿಯಲ್ಲಿ ದೇವಗಿರಿ ಯಾದವರ ಕಾಲದ ಗಜಲಕ್ಷ್ಮೀಯ ಶಿಲ್ಪಿದ ಸೊಂಡಿಲು ಪತ್ತೆಯಾಗಿದ್ದು,ರಾಷ್ಟ್ರೀಯ ಸಂಶೋಧನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕ್ಷೇತ್ರ ಕಾರ್ಯದಲ್ಲಿ ಸಂಶೋಧಿಸಲಾಗಿದೆ. ಇದನ್ನು ಇತಿಹಾಸ ಸಂಶೋಧಕ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಗುರುತಿಸಿದ್ದಾರೆ.ಗಜಲಕ್ಷ್ಮಿ ಸೊಂಡಿಲು ದೇವಗಿರಿ ಯಾದವರ ಕಾಲಕ್ಕೆ ಸೇರಿದ ದೇವಸ್ಥಾನದ ಮುಖಮಂಟಪದ ಭಾಗವಾಗಿದ್ದು, ರಾಯರಾಜ್ಯಧಾನಿ ಎಂದು ಹೆಸರುವಾಸಿಯಾದ ವಿಜಯಪುರದ ಸೇವುಣರ ಅರಸಹಳ್ಳಿಯಲ್ಲಿ ಇಂತಹ ಅಪರೂಪದ ಶಿಲ್ಪವು ದೊರೆತದ್ದು ದೇವಗಿರಿ ಯಾದವರ ದೇವಸ್ಥಾನಗಳ ಹಾಗೂ ಅರಸಹಳ್ಳಿಯ ಇತಿಹಾಸ ಅಧ್ಯಯನಕ್ಕೆ ಹೆಚ್ಚಿನ ಹಾಗೂ ಪೂರಕ ಮಾಹಿತಿ ದೊರೆಯಲಿದೆ. ದೇವಗಿರಿ ಯಾದವರು ವಿಜಯಪುರ ಮೂಲದವರು ಎಂಬುದಕ್ಕೆ ಇಲ್ಲಿ ದೊರೆಯುತ್ತಿರುವ ಶಿಲ್ಪಗಳು ಸ್ಪಷ್ಟ ಸಂದೇಶ ನೀಡುತ್ತಿವೆ ಎಂದು ಇತಿಹಾಸಕಾರ ಲಾಯಪ್ಪ ಇಂಗಳೆ ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 