ಥ್ರಿಬಲ್ ಸ್ಟಾರ್ಸ್ ಡಬಲ್ ಧಮಾಕ ಈ '45'
Triple Stars Double Dhamaka I '45'
ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಾಮಾನ್ಯ ಮನಷ್ಯ, ಶಿವಪ್ಪ ಹಾಗೂ ರಾಯ(ಮ)ಪ್ಪನ ಕಥೆಯನ್ನು ಅರ್ಥಪೂರ್ಣವಾಗಿ '45' ಸಿನಿಮಾದಲ್ಲಿ ಹೇಳಿದ್ದಾರೆ. ಕಂಟೆಂಟ್ ಸಿನಿಮಾದಲ್ಲಿ ಥ್ರಿಬಲ್ ಸ್ಟಾರ್ಸ್‌ನೊಂದಿಗೆ ಗೆಲುವಿನ ಹಾದಿಯಲ್ಲಿ ಹೋಗುತ್ತಿರುವುದು '45' ಸಿನಿಮಾದ ಹೆಗ್ಗಳಿಕೆ.
ವಿನಯ್ (ರಾಜ್ ಬಿ ಶೆಟ್ಟಿ) ಸಾಪ್ಟ್ ವೇರ್ ಉದ್ಯೋಗಿ. ದಿನನಿತ್ಯದ ಕೆಲಸದ ಒತ್ತಡದಲ್ಲಿ ಬೈಕ್‌ನಲ್ಲಿ ನಾಯಿಗೆ ಎಕ್ಸಿಡೆಂಟ್ ಮಾಡಿ, ತನ್ನ ಸಾವಿನ ಬಗ್ಗೆ ಕನಸು ಕಂಡಿರುತ್ತಾನೆ. ನಾಯಿಯನ್ನು ತಾಯಿಯಂತೆ ಪ್ರೀತಿಸುವ ರಾಯ(ಮ)ಪ್ಪ (ಉಪೇಂದ್ರ) ಕೋಣನ ಮೇಲೆ ಎಂಟ್ರಿಕೊಟ್ಟು ವಿನಯ್ ನನ್ನು 45 ದಿನದಲ್ಲಿ ಸಾಯಿಸುತ್ತೇನೆ, ಎಂದು ಅವನಿಗೆ ಟೆರ್ರರ್ ಆಗುತ್ತಾನೆ. ವಿನಯ್ ತನ್ನ ತಾಯಿ ಹಾಗೂ ಪ್ರೀತಿಸಿದ ಹುಡುಗಿ ಮೇಘನಾ(ಕೌಸ್ತುಭ) ಜೊತೆ ಹೇಗೆ ಹೋರಾಡುತ್ತಾನೆ ಎಂಬುದೇ ಈ ಸಿನಿಮಾದ ಮೇನ್ ಕಥೆ.
ವಿನಯ್ ರಾಯಪ್ಪನ ಕಾಟದಿಂದ ಸುಸ್ತಾಗಿ ದ್ವಿತಿಯಾರ್ಧದಲ್ಲಿ ಶಿವಪ್ಪ(ಶಿವರಾಜ್ ಕುಮಾರ್) ಸಿಗುತ್ತಾನೆ. ಸಾವಿನ ಕನಸು ಬಿದ್ದ ಮೇಲೆ ಗರುಡ ಪುರಾಣವನ್ನು ಓದುತ್ತಿರುವ ವಿನಯ್ ಏನೆಲ್ಲ ಬದುಕಿನ ಕಷ್ಟಗಳನ್ನು ಅನುಭವಿಸುತ್ತಾನೆ, ಹೇಗೆ ಈ ಹೋರಾಟದಲ್ಲಿ ಶಿವಪ್ಪ ಅವನನ್ನು ಕಾಪಾಡುತ್ತಾನೆ? ಶಿವಪ್ಪ 9 ಅವತಾರದಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ 45 ಸಿನಿಮಾ ಮೂಡಿ ಬಂದಿದೆ. ಅರ್ಜುನ್ ಜನ್ಯ ತಮ್ಮ ಮೊದಲ ಸಿನಿಮಾದಲ್ಲಿಯೇ ಅನುಭವಿ ಸಿನಿಮಾ ಮೇಕರ್ ಅಂತೆ ಈ ಸಿನಿಮಾ ಮೂಲಕ ತಾನು ಸಿನಿಮಾ ನಿರ್ದೇಶನದ ಪ್ರತಿಭೆಯನ್ನು ತೋರಿಸಿದ್ದಾರೆ.ಗರುಡ ಪುರಾಣ ಲೋಕವನ್ನು ಕಟ್ಟಿಕೊಡಲು ಕ್ಯಾಮೆರಾಮನ್ ಸತ್ಯ ಹೆಗಡೆ ಕುಸರಿ ಕೆಲಸ ದೊಡ್ಡದಿದೆ. ಹೊಸ ಲೋಕವನ್ನು ಸೃಷ್ಠಿ ಮಾಡಲು ನಿರ್ಮಾಪಕ ರಮೇಶ್ ರೆಡ್ಡಿ ದೊಡ್ಡ ಬಜೆಟ್‌ನ್ನೆ ಹೂಡಿದ್ದು ಸಿನಿಮಾ ಮೇಕಿಂಗ್‌ನಲ್ಲಿ ಕಾಣುತ್ತದೆ. ರಾಜ್ ಬಿ ಶೆಟ್ಟಿಯ ಮುಗ್ದ ನಟನೆ, ಉಪೇಂದ್ರರವರ ಟೆರರ್ ಗರ್ಜನೆ, ಶಿವಣ್ಣನ 9 ಅವತಾರಗಳ ರುದ್ರ ನರ್ತನ ಸಿನಿಮಾಕ್ಕೆ ಹೊಸ ಮೆರಗನ್ನು ನೀಡಿದೆ.
ಪ್ರತಿಯೊಬ್ಬ ಪ್ರೇಕ್ಷಕನು ಸಿನಿಮಾದ ಕ್ಲೈಮ್ಯಾಕ್ಸ್ ಮುಗಿಯುತ್ತಿದ್ದಂತೆ ನಮ್ಮದೆ ಬದುಕಿನ ಕಥೆಯನ್ನೆ ನೋಡಿದ ಫಿಲ್ ಬರುಬವಂತೆ ಸಿನಿಮಾ ಕಟ್ಟಿ ಕೊಡಲಾಗಿದೆ. ಇಷ್ಟರ ಮಟ್ಟಿಗೆ 45 ಸಿನಿಮಾ ಮನಸ್ಸಿನಲ್ಲಿ ಉಳಿಯುವುದು ನಿಶ್ಚಿತ. ಪ್ಯಾಮಿಲಿಯೊಂದಿಗೆ ಚಿತ್ರಮಂದಿರಕ್ಕೆ ಹೋಗಿ 45 ಸಿನಿಮಾ ಹೊಸ ಲೋಕಕ್ಕೆ ಟ್ರಿಪ್ ಹೋಗಿ ಬಂದಂತಹ ಅನುಭವ ನೀಡುವ ಮಟ್ಟಿಗೆ ಮೂಡಿಬಂದಿದೆ.ರೇಟಿಂಗ್: 4/5
ಚಿತ್ರ: 45
ನಿರ್ದೇಶನ: ಅರ್ಜುನ್ ಜನ್ಯ
ನಿರ್ಮಾಣ: ರಮೇಶ್ ರೆಡ್ಡಿ
ತಾರಾಗಣ: ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಕೌಸ್ತುಭ ಮಣಿ ಮುಂತಾದವರು
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ 