ಮಾತೋಶ್ರೀ ಗಂಗಮ್ಮ ಬೊಮ್ಮಾಯಿಯವರ 92 ಜನ್ಮ ದಿನದ ಅಂಗವಾಗಿ ಸಾಧಕರಿಗೆ ಸನ್ಮಾನ
Tributes to achievers on the occasion of Matoshree Gangamma Bommai's 92nd birth anniversary
ಶಿಗ್ಗಾವಿ 27 : ಅಧಿಕಾರ ಮತ್ತು ಹಣ ಕಾಕ್ ಟೈಲ್ ಇದ್ದಹಾಗೆ ಅದರ ಹಿಂದೆ ಹೊರಟರೆ ಅದು ನಿಮಗೆ ನಿಶೆ ತರುತ್ತದೆ. ಇದೆಲ್ಲವನ್ನು ನಿಯಂತ್ರಣ ಮಾಡಿ ಸಮಾಜ ಸೇವೆ ಮಾಡಬೇಕು. ಜನರ ಸೇವೆ ಮಾಡದೇ ಅಧಿಕಾರಕ್ಕಾಗಿ ರಾಜಕಾರಣ ಮಾಡಿದರೆ ಶಾಸ್ವತ ಅಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿರವರ ನಿವಾಸದ ಸಭಾ ಭವನದಲ್ಲಿ ಮಾತೋಶ್ರೀ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಮಾತೋಶ್ರೀ ಗಂಗಮ್ಮ ಸೋಮಪ್ಪ ಬೊಮ್ಮಾಯಿರವರ 92 ನೇಯ ಹುಟ್ಟುಹಬ್ಬದ ಅಂಗವಾಗಿ ಶಿಗ್ಗಾಂವ - ಸವಣೂರ ವಿಧಾನಸಭಾ ಮತಕ್ಷೇತ್ರದ ಅತ್ಯುತ್ತಮ ಸಂಘ- ಸಂಸ್ಥೆಗಳಿಗೆ ಏರಿ್ಡಸಿದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರುಕೆಲವರು ರಾಜಕಾರಣ ಮಾಡುತ್ತಾರೆ ಕೆಲವನ್ನು ರಾಜಕಾರಣ ಮಾಡುತ್ತದೆ.
24 ತಾಸ್ ರಾಜಕಾರಣ ಮಾಡುವವರು ಎಲ್ಲವನ್ನು ರಾಜಕೀಯ ದೃಷ್ಟಿಯಿಂದ ನೋಡುತ್ತಾರೆ, ನನ್ನ ಒಂದು ಸಣ್ಣ ಸಲಹೆ ಸ್ವಲ್ಪ ರಾಜಕೀಯ ಬಿಟ್ಟು, ನಿಮ್ಮನ್ನು ನಂಬಿದ ಜನರಿಗೆ ಸ್ವಲ್ಪ ಸಮಯ ಕೊಟ್ಟರೆ ಎಷ್ಟೊಂದು ಉತ್ಸಾಹ ಸ್ಪೂರ್ತಿ ಬರುತ್ತದೆ ನೀವೇ ಅನುಭವಿಸಬಹುದು ಎಂದು ಹೇಳಿದರು. ಜನರ ಸೇವೆ ಮಾಡದೇ ಅಧಿಕಾರಕ್ಕಾಗಿ ರಾಜಕಾರಣ ಮಾಡಿದರೆ ಶಾಸ್ವತ ಅಲ್ಲ. ಅಧಿಕಾರ ಶಾಸ್ವತ ಅಲ್ಲ. ಸಿಎಂ ಅಂದರೆ ಕಾಮನ್ ಮ್ಯಾನ್ ಅಂತ. ಎಲ್ಲರೂ ಏನ್ ಇಷ್ಟು ಸಿಂಪಲ್ ಆಗಿದ್ದೀರಿ ಅಂತ ಕೇಳುತ್ತಾರೆ. ಅಧಿಕಾರ ಬಂದಾಗ ಬಹಳ ಜನರು ಸಂಬಂಧಿಕರಾಗಿತ್ತಾರೆ, ಸ್ನೇಹಿತರಾಗುತ್ತಾರೆ. ನಾನು ಸಿಎಂ ಅಗಿದ್ದಾಗಲೂ ನಮ್ಮ ತಂದೆ ಕಟ್ಡಿಸಿದ ಮನೆಯಲ್ಲಿಯೇ ಇದ್ದೆ. ಬಹಳಷ್ಟು ಜನರು ಹೊರ ದೇಶದ ಗಣ್ಯರು ಭೇಟಿ ಆಗುತ್ತಾರೆ. ಅದಕ್ಕೆ ಹೊಸ ಮನೆ ತೆಗೆದುಕೊಳ್ಳಿ ಎಂದು ಹೇಳಿದ್ದರು.
ಆದರೆ ನಾನು ಇದೇ ಮನೆಯಲಿಯೇ ಇರುತ್ತೇನೆ ಎಂದು ಹೇಳಿದೆ ಎಂದರು. ಅಧಿಕಾರ ಮತ್ತು ಹಣ ಕಾಕ್ ಟೈಲ್ ಇದ್ದಹಾಗೆ ಅದರ ಹಿಂದೆ ಹೊರಟರೆ ಅದು ನಿಮಗೆ ನಿಶೆ ತರುತ್ತದೆ. ಇದೆಲ್ಲವನ್ನು ನಿಯಂತ್ರಣ ಮಾಡಿ ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು. ರಾಜ್ಯ ಮಟ್ಡದ ಪ್ರಶಸ್ತಿ ಎಲ್ಕರಿಗೂ ಸಿಗುವುದಿಲ್ಲ. ನಮ್ಮದು ಅದಕ್ಕಿಂತ ಶ್ರೇಷ್ಟ ನಮ್ಮ ಪ್ರಶಸ್ತಿ ಅಂತ ಇದನ್ನು ಕೊಡುತ್ತ ಇದ್ದನೆ. ಜನರಿಗೆ ಸ್ಪೂರ್ತಿ ಕೊಡುವ ಕೆಲಸ ಕಾರ್ಯ ಮಾಡುತ್ತ ಬಂದಿದ್ದೇನೆ ಶಿಗ್ಗಾವಿ ತಾಲೂಕಿನ ಜನರ ಋಣ ನಾನು ಸಾಯುವವರೆಗೂ ಮರೆಯುವುದಿಲ್ಲ ನನಗೆ ಎಲ್ಲಿಯವರೆಗೂ ಶಕ್ತಿ ಇರುತ್ತದೆ ಅಲ್ಲಿಯವರೆಗೂ ನಿಮ್ಮ ಸೇವೆ ಮಾಡುತ್ತೇನೆ. ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು. ಧಿವ್ಯ ಸಾನಿಧ್ಯವಹಿಸಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಆರ್ಶಿವದಿಸಿದರು. ಯುವ ಮುಖಂಡ ಭರತ ಬೊಮ್ಮಾಯಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಗ್ಗಾವಿ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ಅಧ್ಯಕ್ಷ ಶಿವಪುತ್ರ್ಪ ಕಲಕೋಟಿ ಮುಖಂಡರಾದ ಗಂಗಾಧರ ಸಾತಣ್ಣವರ, ಶಿವಪ್ರಸಾದ ಸುರಗೀಮಠ, ದೇವಣ್ಣ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಮಲ್ಲೇಶಪ್ಪ ಹರಿಜನ, ಅರ್ಜುನ ಹಂಚಿನಮನಿ, ಪರುಶರಾಮ ಸೊನ್ನದ, ಶರೀಪಸಾಬ ನದಾಫ, ಹನುಮಂತಪ್ಪ ಮಾದರ, ಸೇರಿದಂತೆ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 