ನಿವೃತ್ತ ಶಿಕ್ಷಕ ನೀಲಪ್ಪ ಮಲ್ಲೂರ ಅವರಿಗೆ ಸನ್ಮಾನ
Tribute to retired teacher Nilappa Mallura
ಲೋಕದರ್ಶನ ವರದಿ
ಬೈಲಹೊಂಗಲ 20- ಶಿಕ್ಷಕರು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದಾಗ ಅವರ ಜೀವನ ಸಾರ್ಥಕವಾಗುತ್ತದೆ ಎಂದು ನಿವೃತ್ತ ದೈಹಿಕ ಶಿಕ್ಷಕ ಎಸ್.ಐ.ಮಿರ್ಜನ್ನವರ ಹೇಳಿದರು. ತಾಲೂಕಿನ ದೇಶನೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನೀಲಪ್ಪ ಯಲ್ಲನಗೌಡ ಮಲ್ಲೂರ ಅವರನ್ನು ಅವರ ಬೈಲಹೊಂಗಲ ನಿವಾಸದಲ್ಲಿ ಸತ್ಕರಿಸಿ ಮಾತನಾಡಿ, ಶಿಕ್ಷಕರಾಗಿದ್ದ ಮಲ್ಲೂರ ಅವರು ಪ್ರಾರಂಭದಲ್ಲಿ 1994ರಲ್ಲಿ ಬೆಂಗಳೂರ ಗ್ರಾಮಾಂತರ ಚನ್ನಪಟ್ಟಣದಲ್ಲಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸೇವೆ ಪ್ರಾರಂಭಿಸಿ, 1997- 2002 ರವರೆಗೆ ಮುನವಳ್ಳಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ , 2003 ರಲ್ಲಿ ಮುರಗೋಡ ಶಾಲೆಯಲ್ಲಿ ಸೇವೆ ಮಾಡಿ, ನಾಗನೂರಿನ ಶಾಲೆಯಲ್ಲಿ 13 ವರ್ಷ, ಗೋತಮಾರ ಶಾಲೆಯಲ್ಲಿ 4 ವರ್ಷ, ದೇಶನೂರ ಶಾಲೆಯಲ್ಲಿ ಆರೂವರೆ ವರ್ಷ ಸೇವೆ ಮಾಡಿ ನಿವೃತ್ತರಾಗಿದ್ದಾರೆಂದರು.
ಮುರಕೀಭಾವಿ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಎಲ್.ಪಾಟೀಲ ಮಾತನಾಡಿ, ಮಲ್ಲೂರ ಗುರುಗಳು ಪ್ರಾಥಮಿಕ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಉತ್ತಮ ಕಾರ್ಯ ಮಾಡಿದ್ದಾರೆ. ಇವರ ಸೇವೆಯನ್ನು ಸರಕಾರ ಗುರುತಿಸಿ ತಾಲೂಕ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ, ಸ.ಜ.ನಾಗಲೋಟಿಮಠ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗಳು ಲಭಿಸಿದ್ದವು ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಸುತಗಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಶಿವಾನಂದ ನೀಲನ್ನವರ, ಸಾಹಿತಿ ಸಿ.ವಾಯ್.ಮೆಣಸಿನಕಾಯಿ, ನಿವೃತ್ತರಾದ ನೀಲಪ್ಪ ಮಲ್ಲೂರ ಕುಟುಂಬದವರು ಪಾಲ್ಗೊಂಡಿದ್ದರು.
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ 