ಶಿಲ್ಪಕಲೆಯ ಸಾಧಕನಿಗೆ ಸನ್ಮಾನ; ಶ್ರಮಿಕ ವರ್ಗಕ್ಕೆ ನ್ಯಾಯಕ್ಕಾಗಿ ಮೊಳಗಿತು ಗದಗ ಜಿಲ್ಲಾ ಸವಿತಾ ಸಮಾಜದ ಧ್ವನಿ
Tribute to a sculptor; Gadag District Savita Samaj's voice rang out for justice for the working clas
"ಗದಗ 01: "ಸವಿತಾ ಸಮಾಜದ ಕುಲಕಸುಬಾದ ಕ್ಷೌರಿಕ ವೃತ್ತಿಯು ಕೇವಲ ಶ್ರಮವಲ್ಲ, ಅದು ಸಮಾಜಕ್ಕೆ ಸೌಂದರ್ಯ ನೀಡುವ ಪವಿತ್ರ ಕಾಯಕ. ಇಂತಹ ವೃತ್ತಿಯೊಂದಿಗೆ ಶಿಲ್ಪಕಲೆಯಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಿರುವ ಜಯರಾಮ್ ಭದ್ರಾವತಿ ಅವರಂತಹ ಸಾಧಕರು ನಮ್ಮ ಸಮಾಜದ ಆಸ್ತಿ" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಶ್ಲಾಘಿಸಿದರು. ಇಲ್ಲಿನ ಗದಗ ಜಿಲ್ಲಾ ಸವಿತಾ ಸಮಾಜದ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪ ಕಲಾವಿದ ಜಯರಾಮ್ ಭದ್ರಾವತಿ ಅವರಿಗೆ ಸನ್ಮಾನ ಹಾಗೂ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ವಿಮೆ, ಪಿಂಚಣಿ, ವೈದ್ಯಕೀಯ ಸೌಲಭ್ಯ ಹಾಗೂ ಮಕ್ಕಳ ಶಿಕ್ಷಣದ ಸ್ಕಾಲರಿ್ಶಪ್ಗಳನ್ನು ಕ್ಷೌರಿಕ ವೃತ್ತಿ ಮಾಡುವ ಸವಿತಾ ಸಮಾಜ ಬಾಂಧವರಿಗೂ ವಿಸ್ತರಿಸಬೇಕು. ಎಂದರಲ್ಲದೆ ಕ್ಷೌರಿಕ ಕುಟುಂಬಗಳನ್ನು ಸಂಘಟಿತ ಕಾರ್ಮಿಕ ವಲಯಕ್ಕೆ ಸೇರೆ್ಡಗೊಳಿಸಿ ‘ಕಾಯಕ ಕಾರ್ಮಿಕ’ ಭದ್ರತೆ ಒದಗಿಸಬೇಕು" ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಕಾರ್ಮಿಕ ಇಲಾಖೆಗೆ ಮತ್ತು ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಿದರು.
ಸಮಾಜದ ಹಿರಿಯರಾದ ಹನುಮಂತಪ್ಪ ರಾಂಪೂರ ಅವರು ಮಾತನಾಡಿ, "ನಮ್ಮ ಸಮಾಜದ ಇತಿಹಾಸವು ಕಲೆ ಮತ್ತು ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಕ್ಷೌರಿಕ ವೃತ್ತಿಯ ಸೂಕ್ಷ್ಮತೆ ಮತ್ತು ಶಿಲ್ಪಕಲೆಯ ಭವ್ಯತೆ ನಮ್ಮಲ್ಲಿ ರಕ್ತಗತವಾಗಿದೆ. ಆದರೆ ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಮ್ಮ ವೃತ್ತಿ ಬಾಂಧವರು ಆರ್ಥಿಕವಾಗಿ ನಲುಗುತ್ತಿದ್ದಾರೆ. ಸರ್ಕಾರವು ನಮ್ಮ ಕಲೆಗೆ ಸೂಕ್ತ ಮಾರುಕಟ್ಟೆ ಮತ್ತು ಪ್ರೋತ್ಸಾಹ ನೀಡಿ ಈ ಪವಿತ್ರ ವೃತ್ತಿಯನ್ನು ಜೀವಂತವಾಗಿರಿಸಬೇಕು" ಎಂದು ಒತ್ತಾಯಿಸಿದರು. ಮತ್ತೊಬ್ಬ ಹಿರಿಯರಾದ ವೆಂಕಟೇಶ ದಾವಣಗೆರೆ ಅವರು ಮಾತನಾಡಿ, "ಜಯರಾಮ್ ಭದ್ರಾವತಿ ಅವರು 1 ಅಡಿಯಿಂದ ಹಿಡಿದು 65 ಅಡಿ ಎತ್ತರದ ಪ್ರತಿಮೆಗಳನ್ನು ನಿರ್ಮಿಸುವ ಮೂಲಕ ಶಿಲ್ಪಕಲೆಯಲ್ಲಿ ಸವಿತಾ ಸಮಾಜದ ಕೀರ್ತಿಯನ್ನು ವಿಶ್ವಮಟ್ಟಕ್ಕೇರಿಸಿದ್ದಾರೆ. ಇಂತಹ ಕಲಾವಿದರ ಶ್ರಮಕ್ಕೆ ಬೆಲೆ ಸಿಗಬೇಕು. ಸಮಾಜದ ಯುವಪೀಳಿಗೆ ವೃತ್ತಿ ಕೌಶಲದೊಂದಿಗೆ ಉನ್ನತ ಶಿಕ್ಷಣ ಪಡೆದು ಇತಿಹಾಸದ ಹಾದಿಯಲ್ಲಿ ಮುನ್ನಡೆಯಬೇಕು" ಎಂದು ಕರೆ ನೀಡಿದರು.
ಸನ್ಮಾನಿತ ಶಿಲ್ಪ ಕಲಾವಿದ ಜಯರಾಮ್ ಭದ್ರಾವತಿ ಅವರು ತಮ್ಮ ಅನಿಸಿಕೆ ಹಂಚಿಕೊಂಡು ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ರವಿ ರಾಂಪೂರ, ಸಾಗರ ಹಡಪದ, ವಿನಾಯಕ ರಾಯಚೂರು, ಸಿರಿ ರಾಂಪೂರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಮಾಜದ ಬಾಂಧವರು ಉಪಸ್ಥಿತರಿದ್ದರು. *ಬಾಕ್ಸ್ ಹೇಳಿಕೆ* *"ಕ್ಷೌರಿಕರಿಗೂ ಸಿಗಲಿ ‘ಕಾರ್ಮಿಕ ಭಾಗ್ಯ’ದ ಸೌಲಭ್ಯ"* "ಕಟ್ಟಡ ಕಾರ್ಮಿಕರಂತೆ ಕ್ಷೌರಿಕ ವೃತ್ತಿ ಮಾಡುವವರೂ ಕೂಡ ಹಗಲಿರುಳು ದೈಹಿಕ ಶ್ರಮ ಪಡುವ ನೈಜ ಶ್ರಮಿಕರು. ಆದರೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲದಿರುವುದು ವಿಷಾದನೀಯ. ಸರ್ಕಾರವು ಕೂಡಲೇ ಕ್ಷೌರಿಕ ಬಾಂಧವರನ್ನು ಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕ ಇಲಾಖೆಯ ಮೂಲಕ ದೊರೆಯುವ ಪಿಂಚಣಿ, ವಿಮೆ, ವೈದ್ಯಕೀಯ ನೆರವು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಎಲ್ಲ ಸೌಲಭ್ಯಗಳನ್ನು ವಿಸ್ತರಿಸಬೇಕು. ಕೇಶ ವಿನ್ಯಾಸಕರ ಬದುಕು ಕೇವಲ ಅಂಗಡಿಗೆ ಸೀಮಿತವಾಗದೆ, ಅವರ ಭವಿಷ್ಯಕ್ಕೆ ಸರ್ಕಾರದ ಭದ್ರತೆಯ ಅವಶ್ಯಕತೆ ಇದೆ."
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 