ಕೆ.ಎಫ್‌. ಪಾಟೀಲರ 30ನೇ ಪುಣ್ಯಸ್ಮರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

ಕೆ.ಎಫ್‌. ಪಾಟೀಲರ 30ನೇ ಪುಣ್ಯಸ್ಮರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ  Tree-planting program marking the 30th death anniversary of K.F. Patil

ಲೋಕದರ್ಶನ ವರದಿ  

ಹಾವೇರಿ, 27: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ಮಯೋಗಿ ಕೆ.ಎಫ್‌. ಪಾಟೀಲರ 30ನೇ ಪುಣ್ಯಸ್ಮರಣೆ ನಿಮಿತ್ತ ಗಿಡ ನೆಡುವ ಕಾರ್ಯಕ್ರಮ ಆ. 27ರಂದು ಬೆಳಗ್ಗೆ 10 ಗಂಟೆಗೆ ನಗರದ ಕೆ.ಎಫ್‌. ಪಾಟೀಲ ಕಾಲೋನಿಯಲ್ಲಿ ನಡೆಯಲಿದೆ.  

ಕೆ.ಎಫ್‌. ಪಾಟೀಲ ಉದ್ಯಾನವನ ಸಮಿತಿ, ದಿಶಾ ಫೌಂಡೇಶನ್ ಹಾವೇರಿ, ಅಮ್ಮ ಸಂಸ್ಥೆ ಹಿರೇಮುಗ್ಗದೂರು ಹಾಗೂ ಅರಳಿಕಟ್ಟಿ ಪ್ರಕಾಶನ ಹಾವೇರಿ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸಮಠದ ಶ್ರೀ ಬಸವ ಶಾಂತಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.   

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌. ಗಾಜಿಗೌಡ್ರ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರುದ್ರ​‍್ಪ ಲಮಾಣಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.  

ಮುಖ್ಯ ಅತಿಥಿಗಳಾಗಿ ಸಂಜೀವಕುಮಾರ ನೀರಲಗಿ, ಹನುಮಂತಗೌಡ ಗೊಲ್ಲರ, ಪರಮಪ್ಪ ಶಿವಣ್ಣನವರ, ಜಗದೀಶ ಮಹಾರಾಜಪೇಟ, ಕೆ.ಎಫ್‌. ಪಾಟೀಲ ಉದ್ಯಾನವನ ಸಮಿತಿಯ ಹರೀಶ ಇಂಗಳಗೊಂದಿ, ಸಂತೋಷ ಮಡಿವಾಳರ, ಸಿದ್ದಣ್ಣ ಬಾಕಿ, ಸವಿತಾ ಅಗಸಿಬಾಗಿಲ, ಸುಲೋಚನಾ ಮಸಾಲಜಿ, ಆರಿ​‍್ವ. ರಡ್ಡೇರ, ಮಂಜುನಾಥ ಸಣ್ಣಿಂಗಣವರ, ನಿಂಗಪ್ಪ ಆರೇರ ಹಾಗೂ ಗೂಳಪ್ಪ ಅರಳಿಕಟ್ಟಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.