ನಾಳೆ ಲಿಂ. ಮಹಾಂತ ಶಿವಯೋಗಿಗಳ 156ನೇ ಜಯಂತ್ಯುತ್ಸವ
Tomorrow marks the 156th birth anniversary celebration of the late Mahanta Shivayogi
ಲೋಕದರ್ಶನ ವರದಿ
ಯರಗಟ್ಟಿ 05 : ಪಟ್ಟಣದ ಮಹಾಂತ ದುರದುಂಡಿಶ್ವರ ಮಠ ಪೀಠಾಧಿಪಿಗಳಾದ ಲಿಂ. ಮಹಾಂತ ಶಿವಯೋಗಿಗಳ 156ನೇ ಜಯಂತ್ಯೋತ್ಸವದ ನಿಮಿತ್ಯ ಜು. 07 ರಂದು ಬೆಳಿಗ್ಗೆ 06-00 ಗಂಟೆಗೆ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಜರಗುವುದು. ಸಂಜೆ 04-00 ಗಂಟೆಗೆ ಸಕಲ ವಾಧ್ಯಗೋಷ್ಠಿಗಳೊಂದಿಗೆ ಶ್ರೀಗಳ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ನಂತರ ತೋಟ್ಟಿಲೋತ್ಸವ ಕಾರ್ಯಕ್ರಮ ಹಾಗೂ ಸಂಜೆ ಶ್ರೀಗಳಿಗೆ ನುಡಿ ನಮನ ವೇದಿಕೆ ಕಾರ್ಯಕ್ರಮ ಜರಗುವುದು.
ಕಾರ್ಯಕ್ರಮದಲ್ಲಿ ಮುನವಳ್ಳಿ ಸೋಮಶೇಖರ ಮಠ ಪೂಜ್ಯ ಮುರಘೇಂದ್ರ ಮಹಾಸ್ವಾಮಿಗಳು, ಉಪ್ಪಿನಬೇಟಗೇರಿ ಮೂರು ಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸುವವರು, ಉದ್ಘಾಟಕರಾಗಿ ಶಾಸಕರ ವಿಶ್ವಾಸ ವೈದ್ಯ, ಅಧ್ಯಕ್ಷತೆಯನ್ನು ಶ್ರೀಮಠದ ಅಧ್ಯಕ್ಷ ಮಹಾಂತೇಶ ಜಕಾತಿ, ಮುಖ್ಯತಿಥಿಗಳಾಗಿ ತಹಶೀಲ್ದಾರ ಎಮ್. ವ್ಹಿ. ಗುಂಡಪ್ಪಗೋಳ, ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಅಶೋಕ ಹಾದಿಮನಿ, ವಿಠ್ಠಲ ತಡಸಲೂರ, ಪ್ರಕಾಶ ಸತ್ತಿಗೇರಿ, ಕುಮಾರ ಹಿರೇಮಠ ಸೇರಿದಂತೆ ಅನೇಕ ಗಣ್ಯ ಮಾನ್ಯರು ಪಾಲಗೊಳ್ಳುವವರು ಎಂದು ಶ್ರೀಮಠದ ಮೂಲಗಳು ಪ್ರಕಟಣ ಮೂಲಕ ತಿಳಿಸಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 