ಭಗತ್ ಸಿಂಗ್ ಅವರ ಆದರ್ಶಗಳನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕು:ಕಾಗದಗಾರ

ಭಗತ್ ಸಿಂಗ್ ಅವರ ಆದರ್ಶಗಳನ್ನು ಇಂದಿನ ಯುವಕರು ಬೆಳೆಸಿಕೊಳ್ಳಬೇಕು:ಕಾಗದಗಾರ  Today's youth should cultivate the ideals of Bhagat Singh

ಹಾವೇರಿ 29 : ಸ್ವಾತಂತ್ರ್ಯ ಹೋರಾಟದ ಧೃವತಾರೆ ಕ್ರಾಂತಿ ಕಿಡಿ ಕಾಮ್ರೇಡ್ ಶಹೀದ್ ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಯುವಕರನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದವರು ಭಗತ್ ಸಿಂಗ್ ಎಂಬ ಕಿಚ್ಚು ಎಲ್ಲರ ಮನದಲ್ಲಿ ಮೂಡಲಿ ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವಜನರು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಬರಹಗಾರ, ಚಿತ್ರಕಾರ ನಾಮದೇವ ಕಾಗದಗಾರ ಹೇಳಿದರು. 

ನಗರದ ಎಸ್‌ಎಫ್‌ಐ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಆಯೋಜಿಸಿದ ಶಹೀದ್ ಭಗತ್ ಸಿಂಗ್ ಅವರ 119ನೇ ಜನ್ಮ ದಿನಚಾರಣೆಯನ್ನು ಭಗತ್ ಅವರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಗೌರವ ಸಲ್ಲಿಸಿ ಮಾತನಾಡಿದರು. ಭಗತ್ ಸಿಂಗ್ ಅಂದರೆ ರೋಮಾಂಚನಗೊಳುವ ಒಂದು ದೊಡ್ಡ ಶಕ್ತಿ. ಭಾರತದ ಸ್ವಾತಂತ್ರ್ಯ ಚಳುವಳಿಗೆ ಯುವಕರ ಪಡೆಯನ್ನು ಒಗ್ಗೂಡಿಸಿ ಪ್ರಮುಖ ಪಾತ್ರ ವಹಿಸಿದ ಭಗತ್ ಸಿಂಗ್ ಇಂದಿನ ಅವ್ಯವಸ್ಥೆ, ಅನ್ಯಾಯದ ವಿರುದ್ಧವಾಗಿ ಸ್ಪೂರ್ತಿಯಾಗಬೇಕಿದೆ ಎಂದರು.  

ಆ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಲು ಪ್ರಮುಖ ಕಾರಣಗಳಲ್ಲಿ ಇದು ಕೂಡ ಒಂದಾಗಿತ್ತು. ಜನರ ಹಿಂಸೆಯನ್ನು ಭಗತ್ ಸಹಿಸಿಕೊಳ್ಳಲಿಲ್ಲ ಪ್ರತೀಕಾರ ಪಡೆದುಕೊಳ್ಳಬೇಕು ಎಂಬ ಕಿಚ್ಚು ಸ್ವಾತಂತ್ರ್ಯ ಚಳುವಳಿಗೆ ನಾಂದಿಯಾಯಿತು. ಆದರಿಂದ ಭಗತ್ ಸಿಂಗ್ ಅವರನ್ನು ದೇಶದ ಭವಿಷ್ಯತ್ತಿನ ಮಕ್ಕಳು ಅವರನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು ಎಂದರು.ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಭಗತ್ಸಿಂಗ್ ಕಂಡ ಕನಸಿನ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಶೋಷಿತರ ಪರವಾದ ಭಗತ್ಸಿಂಗ್ ನಿಲುವು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲೆ ಮೂಡಿತ್ತೆಂದರೆ ಅವರ ವಯಸ್ಸಿಗೆ ಅವರ ಅಧ್ಯಯನವನ್ನು ಇಂದಿನ ಯುವಪೀಳಿಗೆ ಅನುಸರಿಸಬೇಕಿದೆ ಎಂದರು.  

ಈ ಸಂದರ್ಭದಲ್ಲಿ ಎಸ್‌ಎಫ್‌ಐ ಮುಖಂಡರಾದ ಅರುಣ್ ನಾಗವತ್, ಧನುಷ್ ದೊಡ್ಡಮನಿ ಆಯನ, ವಿರೇನ್ ಕಲಾಲ್, ಪ್ರಜ್ವಾಲ, ಸಂದೀಪ್ ವಾಲಿಕಾರ, ಮಣಿಕಂಠ ಪಾಟೀಲ, ಆಧ್ಯಾ ಎನ್ ಆರ್, ತೇಜಸ್ ಎನ್ ಡಿ, ಆರ್ಯ್ಯ ಎನ್ ಆರ್, ಆಕಾಶ, ಶಾಹೇದ್ ಫೀರಖಾನವರ, ಹೇಮಂತ್, ಸಾಬೀರ್ ಫೀರಖಾನ್, ಗುದ್ಲೇಶ ಇಚ್ಚಂಗಿ ಮಂಜುನಾಥ ಹೋರಕೇರಿ, ರಮೇಶ ತೋಟದ, ಶಿವನಗೌಡ ಪಾಟೀಲ, ಅಭಿಷೇಕ್ ನಂದಣ್ಣನವರ, ಹಮ್ಮೀರ್ ಅಹಮದ್, ವಿನೋದ್, ಅಲ್ತಾಫ್, ಸಮ್ಮೇದ, ಮನೋಜ ಭರಮಪ್ಪ ಯಾರೇಶಿಮಿ, ಆಕಾಶ ದೂರಮುರಾಗಿ, ಲಕ್ಷ್ಮಣ ಕಟ್ಟಿಮನಿ, ವೈಭವ ಜಲಗೇರಿ,  ಮಂಜಪ್ಪ ದುರಾಮುರಾಗಿ, ಮನೋಜ ಪುಟ್ಟಪ್ಪ ಹರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.