ಇಂದಿನ ಒತ್ತಡದ ಬದುಕಿಗೆ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು: ಜಾವಗಲ್

ಇಂದಿನ ಒತ್ತಡದ ಬದುಕಿಗೆ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕು: ಜಾವಗಲ್ Today's stressful life should give more importance to health: Javagal

ಹಾವೇರಿ 02: ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಉತ್ತಮ ಆರೋಗ್ಯ ಬೇಕಾಗುತ್ತದೆ. ಆದ್ದರಿಂದ ವಕೀಲರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಸಿ.ಪಿ ಜಾವಗಲ್ ಹೇಳಿದರು. 

ಇಲ್ಲಿನ ನ್ಯಾಯಾಲಯದ ವಕೀಲರ ಸಂಘದ ಸಭಾಂಗಣದಲ್ಲಿ ತಮ್ಮ ವಕೀಲ ವೃತ್ತಿಯ 25ನೇ ವರ್ಷಾಚಾರಣೆ ಹಾಗೂ ತಮ್ಮ ಹುಟ್ಟು ಹಬ್ಬದ ನಿಮಿತ್ತವಾಗಿ ಆಯೋಜಿಸಿದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. 

ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಬೇಕಿದೆ.ವೃತ್ತಿಯಲ್ಲಿ ಯಶಸ್ವಿಯಾಗಲು ಉತ್ತಮ ಆರೋಗ್ಯ ಸಹಕಾರಿಯಾಗಲಿದೆ.ನನ್ನ ವಕೀಲ ವೃತ್ತಿಯು 25 ವರ್ಷಗಳ ಕಾಲ ನಿರಂತರವಾಗಿ ನಡೆದು ಬಂದಿದೆ.ವೃತ್ತಿಯಲ್ಲಿ ಸಂತೃಪ್ತಿಯೂ ಇದೆ.ನನ್ನ ಜನ್ಮ ದಿನವೋ ಇವತ್ತೆ ಆಗಿದೆ.ನಮ್ಮೆಲ್ಲ ವೃತ್ತಿ ಬಳಗದವರು ಸದಾ ಆರೋಗ್ಯದಿಂದ ಇರಬೇಕು ಎಂಬ ಉದ್ದೇಶದಿಂದ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಿದ್ದು,ಇದರ ಸದುಪಯೋಗ ಪಡೆದಾಗ ನನಗೆ ಸಾರ್ಥಕವಾಗುತ್ತದೆ ಎಂದು ಹುಟ್ಟು ಹಬ್ಬದ ಶುಭ ಕೋರಿದ ಸರ್ವರಿಗೂ ಧನ್ಯವಾದಗಳನ್ನು ಕೋರಿದರು. 

ಇದೇ ಅವಧಿಯಲ್ಲಿ ಸಿ.ಪಿ.ಜಾವಗಲ್ ಅವರ ಜನ್ಮದಿನಕ್ಕೆ ಹಾಗೂ ವಕೀಲ ವೃತ್ತಿಯ 25ನೇ ವರ್ಷಾಚಾರಣೆಯ ಬದುಕಿಗೆ ನ್ಯಾಯಾಲಯದ ನ್ಯಾಯಾಧೀಶರು,ವಕೀಲರ ಸಂಘದ ಪದಾಧಿಕಾರಿಗಳು,ಎಲ್ಲಾ ತಾಲ್ಲೂಕಿನ ಸಂಘಗಳ ಪದಾಧಿಕಾರಿಗಳು,ಹಿರಿಯರು,ವಕೀಲ ಬಳಗದವರು ಶುಭ ಕೋರಿದರು. 

ಡಾ.ನಾಗರತ್ನ ಮಾಸೂರ,ಡಾ.ಶಿವಕುಮಾರ,ಡಾ.ಕೆ ಜಿ ಹೊಸಳ್ಳಿ ಆರೋಗ್ಯ ತಪಾಸಣೆ ಹಾಗೂ    ಕಂಪಾನಿಯೋ ಕಂಪನಿಯ ಕೌಸಿಕ್ ಅವರು ಪಲ್ಸ್‌ ಥೆರಪಿ ಶಿಬಿರ ನಿರ್ವಹಣೆ ಮಾಡಿದರು.ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಸ್,ಹೆಚ್,ಜತ್ತಿ.ಕಾರ್ಯದರ್ಶಿ ಪಿ,ಎಸ್,ಹೆಬ್ಬಾಳ,ಸಹಕಾರ್ಯದರ್ಶಿ ನಾರಾಯಣ ಕಾಳೆ ಸೇರಿದಂತೆ ಜಿಲ್ಲೆಯ ಹಿರಿಯ-ಕಿರಿಯ ವಕೀಲ ಬಳಗದವರು ಪಾಲ್ಗೊಂಡಿದ್ದರು.